Recent Posts

Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀರಾಮಚಂದ್ರ ವಿದ್ಯಾಲಯ ಅಯೋಧ್ಯ ನಗರ-ಪೆರ್ನೆ ಇದರ ಹಿರಿಯ ವಿದ್ಯಾರ್ಥಿ ಸಂಘ ರಚನೆ- ಪದಗ್ರಹಣ,-ಬೃಹತ್ ಆರೋಗ್ಯ ಮೇಳ ಮತ್ತು ರಕ್ತದಾನ ಶಿಬಿರ-ಕಹಳೆ ನ್ಯೂಸ್

ಬಂಟ್ವಾಳ : ಶ್ರೀರಾಮಚಂದ್ರ ಪದವಿ ಪೂರ್ವ ವಿದ್ಯಾಲಯ ಅಯೋಧ್ಯ ನಗರ-ಪೆರ್ನೆ, ಬಂಟ್ವಾಳ ತಾಲೂಕು ಇದರ ನೂತನ ಹಿರಿಯ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭದ ಪ್ರಯುಕ್ತ ಯೆನೆಪೋಯ ವಿಶ್ವವಿದ್ಯಾನಿಲಯ, ದೇರಳಕಟ್ಟೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮಾಣಿ ಇದರ ಜಂಟಿ ಆಶ್ರಯದಲ್ಲಿ ಬೃಹತ್ ಆರೋಗ್ಯ ಮೇಳ,ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ಶ್ರೀರಾಮಚಂದ್ರ ಪದವಿಪೂರ್ವ ವಿದ್ಯಾಲಯ ಪೆರ್ನೆಯಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಹರೀಶ್ ಭಂಡಾರಿ, ಸಂಚಾಲಕರು ಶ್ರೀರಾಮಚಂದ್ರ ಪದವಿಪೂರ್ವ ವಿದ್ಯಾಲಯ, ಅಯೋದ್ಯ ನಗರ-ಪೆರ್ನೆ ಇವರು ವಹಿಸಿದ್ದರು. ಶಾಲಾ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಸಭೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮ್ಯಾಕ್ಸಿಮ್ ಲೋಬೊ ರವರು ಪ್ರಾಸ್ತಾವಿಕ ಮಾತಿನೊಂದಿಗೆ ಎಲ್ಲಾ ಅತಿಥಿಗಳನ್ನು ಮತ್ತು ನೆರೆದಿರುವವರನ್ನು ಸ್ವಾಗತಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ತೋಯಜಾಕ್ಷ ಶೆಟ್ಟಿ, ಅಧ್ಯಕ್ಷರು ವ್ಯವಸಾಯ ಸೇವಾ ಸಹಕಾರಿ ಸಂಘ ಪೆರ್ನೆ ಇವರು ಉದ್ಘಾಟಿಸಿದರು. ವಿದ್ಯಾಲಯದ ಪ್ರಾಂಶುಪಾಲರಾದ ಶೇಖರ್ ರೈ ಯವರು ವಿದ್ಯಾ ಸಂಸ್ಥೆಯ ಬಗ್ಗೆ ಮತ್ತು ಹಿರಿಯ ವಿದ್ಯಾರ್ಥಿ ಸಂಘದ ಬಗ್ಗೆ ವಿವರಣೆಯನ್ನು ನೀಡಿದರು,ಮತ್ತು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮ್ಯಾಕ್ಸಿಮ್ ಲೋಬೊ, ಕಾರ್ಯದರ್ಶಿ ಸನತ್ ಆಳ್ವ, ಕೋಶಾಧಿಕಾರಿ ಶ್ರೀಮತಿ ಮಮತಾ ಮತ್ತು ಇತರ ಪದಾಧಿಕಾರಿಗಳಿಗೆ ಹಿರಿಯ ವಿದ್ಯಾರ್ಥಿ ಸಂಘದ ಪದ ಪ್ರಧಾನ ನಡೆಸಿಕೊಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.ತಿಮ್ಮಯ್ಯ ಹೆಚ್ ಆರ್, ಜಿಲ್ಲಾ ಆರೋಗ್ಯ ಅಧಿಕಾರಿ ದ. ಕ ಜಿಲ್ಲೆ ಇವರು ಕಾರ್ಯಕ್ರಮ ದ ಬಗ್ಗೆ ಹರ್ಷ ವ್ಯಕ್ತಪಡಿಸುತ್ತಾ ರಕ್ತದಾನದ ಮಹತ್ವ ಮತ್ತು ಸರಕಾರದ ವಿವಿಧ ವೈದ್ಯಕೀಯ ಸೌಲಭ್ಯಗಳ ಬಗ್ಗೆ ನೆರೆದಿರುವವರಿಗೆ ಮಾಹಿತಿ ನೀಡಿದರು. ಅತಿಥಿಗಳಾಗಿ ಆಗಮಿಸಿದ್ದ ಹನೀಫ್ ಹಾಜಿ ಗೋಳ್ತಮಜಲು, ಅಧ್ಯಕ್ಷರು ಹಿದಾಯ ಫೌಂಡೇಶನ್ ಮಂಗಳೂರು ಇವರು ತಾವು ನಡೆಸುತ್ತಿರುವ ಸಾಮಾಜಿಕ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.
ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಹಾಗೂ ವಿದ್ಯಾ ಸಂಸ್ಥೆಯ ಹಿರಿಯ ವಿದ್ಯಾರ್ಥಿಯೂ ಆಗಿರುವ ಡಾ.ಮಹಾಲಿಂಗೇಶ್ವರ ಭಟ್, ಧನ್ವಂತರಿ ಆಸ್ಪತ್ರೆ, ಪುತ್ತೂರು ಇವರು ಆರೋಗ್ಯದ ಸಮಸ್ಯೆಗಳು ಮತ್ತು ಅದಕ್ಕೆ ಇರುವ ಪರಿಹಾರಗಳ ಬಗ್ಗೆ ಮಾಹಿತಿ ನೀಡಿದರು. ಸುಲೈಮಾನ್, ಸಂಚಾಲಕರು ಮಜೀದಿಯಾ ಹಿರಿಯ ಪ್ರಾಥಮಿಕ ಶಾಲೆ, ದೋರ್ಮೆ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಡಾ.ಅಶೋಕ್ ಕುಮಾರ್ ರೈ, ತಾಲೂಕು ಆರೋಗ್ಯ ಅಧಿಕಾರಿ, ಬಂಟ್ವಾಳ ತಾಲೂಕು. ಡಾ.ಶಶಿಕಲಾ, ವೈದ್ಯಾಧಿಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಮಾಣಿ. ರಜಾಕ್, ವಿಸ್ತರಣಾ ಅಧಿಕಾರಿ ಯೆನೆಪೋಯ ವಿಶ್ವವಿದ್ಯಾನಿಲಯ. ಕೇಶವ ರಾಮ್, ವ್ಯವಸ್ಥಾಪಕ ನಿರ್ದೇಶಕರು, COCO ಗುರು, ಪುತ್ತೂರು. ಶ್ರೀಮತಿ ಜ್ಯೋತಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ,ದ.ಕ ಜಿಲ್ಲೆ.ಮುಸ್ತಾಫ ಕಡಂಬು, ಉದ್ಯಮಿಗಳು ಅನಿತಾ ಬೀಡಿ, ಶ್ರೀಮತಿ ಆಯಿಷಾ ಪೆರ್ನೆ, ಆರೋಗ್ಯ ನೈರ್ಮಲ್ಯ ನಿರೀಕ್ಷಕರು, ಮಂಗಳೂರು ವಿಶ್ವವಿದ್ಯಾನಿಲಯ, ಸತ್ಯನಾರಾಯಣ ರೈ, ಮುಖ್ಯ ಗುರುಗಳು, ಶ್ರೀರಾಮಚಂದ್ರ ಪದವಿಪೂರ್ವ ವಿದ್ಯಾಲಯ ಅಯೋಧ್ಯ ನಗರ ಪೆರ್ನೆ, ಮುಂತಾದವರು ಅತಿಥಿಗಳಾಗಿ ಉಪಸ್ಥಿತರಿದ್ದರು. ಹಿರಿಯ ವಿದ್ಯಾರ್ಥಿಗಳಾದ ನಜೀರ್ ಧನ್ಯವಾದ ಸಮರ್ಪಿಸಿ, ಗೌತಮ್ ಕುಕ್ಯಾನ್ ಕಾರ್ಯಕ್ರಮ ನಿರೂಪಿಸಿದರು.

ಆರೋಗ್ಯ ಮೇಳದಲ್ಲಿ ವೈದ್ಯಕೀಯ ತಜ್ಞರು,ಶಸ್ತ್ರ ಚಿಕಿತ್ಸಕರು,ಮಕ್ಕಳ ತಜ್ಞರು,ಸ್ತ್ರೀ ರೋಗ ತಜ್ಞರು,ಎಲುಬು ಮತ್ತು ಕೀಲು ತಜ್ಞರು,ಚರ್ಮ ಮತ್ತು ಲೈಂಗಿಕ ತಜ್ಞರು,ಕಿವಿ, ಮೂಗು, ಗಂಟಲು ತಜ್ಞರು,ಕಣ್ಣಿನ ಪರೀಕ್ಷಾ ಕೇಂದ್ರ,ದAತ ಚಿಕಿತ್ಸಾ ಕೇಂದ್ರ,.ಉಚಿತ ಔಷಧಿ ಮತ್ತು ಪ್ರಯೋಗಾಲಯ ಸೇವೆ,ಅಸಾಂಕ್ರಾಮಿಕ ರೋಗ ತಪಾಸಣೆ (NCP Clinic),ಆಯುಷ್ಯ, ಆಯುರ್ವೇದಿಕ್, ಸಿದ್ಧ,ಹೋಮಿಯೋಪತಿ, ಯುನಾನಿ ಔಷದಿ,ಕ್ಷಯರೋಗ, ಮಲೇರಿಯಾ, ಹಿಮೋಗ್ಲೋಬಿನ್ ಪರೀಕ್ಷೆ,ಆಪ್ತ ಸಮಾಲೋಚನೆ (ಹದಿಹರೆಯದ ಮಕ್ಕಳಿಗೆ),ಮಧುಮೇಹ, ರಕ್ತದೊತ್ತಡ, ಕೊಲೆಸ್ಟ್ರಾಲ್ ತಪಾಸಣೆ ಮತ್ತು “ಮಹಿಳೆಯರಿಗೆ ಅತ್ಯಾಧುನಿಕ ತಂತ್ರಜ್ಞಾನದ Screening test for breast (Mammogram) ಮೊಬೈಲ್ ಕ್ಲಿನಿಕ್ ಬಸ್ಸಿನಲ್ಲಿ ತಪಾಸಣಾ ವ್ಯವಸ್ಥೆ,ಮುಂತಾದ ಎಲ್ಲಾ ಸೌಲಭ್ಯಗಳ ಸೇವೆ ಮತ್ತು ನುರಿತ ವೈದ್ಯರುಗಳಿಂದ ತಪಾಸಣೆ ಮತ್ತು ಸಲಹೆಗಳನ್ನು ನೂರಾರು ಪಡೆದುಕೊಂಡರು.ರಕ್ತದಾನ ಶಿಬಿರದಲ್ಲಿ ಹತ್ತಾರು ಜನ ರಕ್ತದಾನ ಮಾಡಿದರು.

” ನೂತನ ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾಗಿ “ಅಧ್ಯಕ್ಷರು – ಮ್ಯಾಕ್ಸಿಮ್ ಲೋಬೊ, ಉಪಾಧ್ಯಕ್ಷರು-ರಾಧಾಕೃಷ್ಣ ಗೌಡ (ASI), ಲೋಹಿತಾಕ್ಷ ಬರಮೇಲು, ಸುಚಿತ್ರಾ ನಾಯಕ್ ಶಕ್ತಿನಗರ-ಮಂಗಳೂರು, ಕಾರ್ಯದರ್ಶಿ – ಸನತ್ ಆಳ್ವ ಅಮೈ ಭಂಡಾಸಾಲೆ, ಕೋಶಾಧಿಕಾರಿ– ಶ್ರೀಮತಿ ಮಮತಾ ಟಿ(ಉಪನ್ಯಾಸಕಿ), ಸಂಘಟನಾ ಕಾರ್ಯದರ್ಶಿ – ಸುರೇಶ್ ಶೆಟ್ಟಿ ದುರ್ಗಿಪಾಲ್, ಮೊಹಮ್ಮದ್ ನಝಿರ್, ಶರತ್ ಶೆಟ್ಟಿ ಅಮೈ, ಮಾಧ್ಯಮ ಸಂಚಾಲಕರು — ವಿಕ್ರಂ ಬಿಳಿಯೂರು ,ಅಕ್ಷತ್ ಬಿಳಿಯೂರು, ಕ್ರೀಡಾ ಕಾರ್ಯದರ್ಶಿ -ಸೀತಾರಾಮ ಕಾರ್ಲ, ನಿತಿನ್ ಅತ್ರಬೈಲು, ಸಾಂಸ್ಕೃತಿಕ ಸಂಚಾಲಕರು- ಆಯಿಷಾ.ಪಿ, ಸುನೀಲ್ ನೆಕ್ಕರೆ ಆಯ್ಕೆಯಾದರು.

“ಅಧ್ಯಕ್ಷರು – ಮ್ಯಾಕ್ಸಿಮ್ ಲೋಬೊ, ಕಾರ್ಯದರ್ಶಿ – ಸನತ್ ಆಳ್ವ ಅಮೈ ಭಂಡಾಸಾಲೆ