Breaking News : ಕಸಬ್, ವೀರಪ್ಪನ್ ಜಯಂತಿ ಮಾಡಿದರೂ ಅಚ್ಚರಿ ಇಲ್ಲ ; ಟಿಪ್ಪು ಜಯಂತಿ ವಿರೋಧಿ ಪ್ರತಿಭಟನೆಯಲ್ಲಿ ಬಿಜೆಪಿ ಆಕ್ರೋಶ – ಕಹಳೆ ನ್ಯೂಸ್
ಮಂಗಳೂರು : ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯನ್ನು ವಿರೋಧಿಸಿ ದ.ಕ. ಜಿಲ್ಲಾ ಬಿಜೆಪಿಯ ವತಿಯಿಂದ ದ.ಕ. ಜಿಲ್ಲಾಧಿಕಾರಿ ಕಚೇರಿಯೆದುರು ನ.೦೯ ರ ಶುಕ್ರವಾರ ಬೆಳಗ್ಗೆ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬ್ರಿಜೇಶ್ ಚೌಟ, ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆರಂಭಿಸಿದ ಟಿಪ್ಪು ಜಯಂತಿಯನ್ನು ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಮುಂದುವರಿಸಿ ತಪ್ಪು ಮಾಡಿದೆ. ಟಿಪ್ಪು ಸುಲ್ತಾನ್ ಒಬ್ಬ ನೈಜವಾದ ಮುಸ್ಲಿಂ ಅಲ್ಲ ಎನ್ನುವುದನ್ನು ಅವರದೇ ಸಮುದಾಯ ಒಪ್ಪಿಕೊಂಡಿದೆ. ರಾಜ್ಯದ ಜನತೆ ಒಪ್ಪಿಕೊಳ್ಳದ ಟಿಪ್ಪು ಜಯಂತಿಯನ್ನು ಕೇವಲ ಸರಕಾರ ಮಾತ್ರ ಆಚರಿಸಲು ಉತ್ಸುಕತೆ ತೋರುತ್ತಿದೆ? ರಾಜ್ಯ ಸರ್ಕಾರ ಈ ಜಯಂತಿಯನ್ನು ಆಚರಿಸಿ ಸಮಾಜವನ್ನು ಧರ್ಮದ ಆಧಾರದಿಂದ ವಿಭಾಗಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಆ ಬಳಿಕ ಮಾತನಾಡಿದ ಕ್ರೈಸ್ತ ರಾಷ್ಟ್ರೀಯ ಒಕ್ಕೂಟದ ಸದಸ್ಯ, ರಾಬರ್ಟ್ ರೊಸರಿಯೊ ಮಾತನಾಡಿ, ಟಿಪ್ಪು ಒಬ್ಬ ಮತಾಂಧ, ಈತ ಅನೇಕ ಕ್ರೈಸ್ತ ಹಾಗೂ ಹಿಂದೂ ಜನರನ್ನು ಹತ್ಯೆ ಮಾಡಿದ್ದಾರೆ. ದಕ್ಷಿಣ ಕರಾವಳಿ ಅನೇಕ ಚರ್ಚ್ ನಾಶಗೊಳಿದ್ದಾನೆ. 2015ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಆರಂಭಿಸಿದ ಟಿಪ್ಪು ಜಯಂತಿಯನ್ನು ಕುಮಾರಸ್ವಾಮಿ ಸರ್ಕಾರ ಮುಂದುವರಿಸಿ ದೊಡ್ಡ ತಪ್ಪು ಮಾಡುತ್ತಿದೆ. ಮುಸ್ಲಿಮರು ಎಂದು ಟಿಪ್ಪು ಜಯಂತಿ ಆಚರಣೆ ಮಾಡುವಂತೆ ಕೇಳಿಲ್ಲ. ಒಂದು ವೇಳೆ ಇದೇ ಪರಿಸ್ಥಿತಿ ಮುಂದುವರಿದರೆ ನಾಳೆ ಕಸಬ್ ಜಯಂತಿ ಅಥವಾ ವೀರಪ್ಪನ್ ಜಯಂತಿ ಮಾಡಿದರೂ ಅಚ್ಚರಿ ಇಲ್ಲ. ಹೀಗಾಗಿ ತಕ್ಷಣ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯನ್ನು ಸರ್ಕಾರ ಹಿಂಪಡೆಯಬೇಕೆಂದು ಆಗ್ರಹಿಸಿದರು
ಪ್ರತಿಭಟನೆಯಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಪಕ್ಷದ ಮುಖಂಡರಾದ ಅನ್ವರ್ ಮಾಣಿಪ್ಪಾಡಿ, ಪ್ರತಾಪ್ ಸಿಂಹ ನಾಯಕ್, ಸಂತೋಷ್ ಕುಮಾರ್ ಬೋಳಿಯಾರ್, ಮಾಜಿ ಶಾಸಕ ಯೋಗೀಶ್ ಭಟ್ ಮೊದಲಾದವರು ಭಾಗವಹಿಸಿದ್ದರು.