ಡಿ ದೇವರಾಜ ಅರಸು ಅಭಿವೃದ್ದಿ ನಿಗಮ ದಡಿ ಮಂಗಳೂರು ನಗರ ಉತ್ತರ ವಿದಾನ ಸಬಾ ಕ್ಷೇತ್ರ ದ 35 ಹಿಂದುಳಿದ ವರ್ಗಗಳ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ-ಕಹಳೆ ನ್ಯೂಸ್
ಮಂಗಳೂರು: ಡಿ ದೇವರಾಜ ಅರಸು ಅಭಿವೃದ್ದಿ ನಿಗಮ ದಡಿ ಮಂಗಳೂರು ನಗರ ಉತ್ತರ ವಿದಾನ ಸಬಾ ಕ್ಷೇತ್ರ ದ ಆಯ್ದ 35 ಹಿಂದುಳಿದ ವರ್ಗಗಳ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮವು ತುಳು ಭವನ ಉರ್ವ ಸ್ಟೋರ್ ನಲ್ಲಿ ನಡೆಯಿತು.
ಹೊಲಿಗೆ ಯಂತ್ರ ವಿತರಿಸಿ ಮಾತನಾಡಿದ ಶಾಸಕರಾದ ಡಾ ಭರತ್ ಶೆಟ್ಟಿ ವೈ ರವರು ” ಈ ಹೊಲಿಗೆ ಯಂತ್ರದ ಸದುಪಯೋಗ ಪಡೆದುಕೊಂಡು ಜೀವನ ಮಟ್ಟದಲ್ಲಿ ಸುದಾರಣೆಯಾಗಿ ಸ್ವಾವಲಂಬಿಗಳಾಗಿರಿ” ಎಂದು ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಡಿ ದೇವರಾಜ ಅರಸು ಅಭಿವೃದ್ದಿ ನಿಗಮ ದ ಜಿಲ್ಲಾ ವ್ಯವಸ್ಥಾಪಕಾರಾದ ಶ್ರೀ ಮಂಜು ರವರು ನಡೆಸಿಕೊಟ್ಟರು.