Thursday, November 21, 2024
ದಕ್ಷಿಣ ಕನ್ನಡಮಂಗಳೂರುಸುದ್ದಿ

ಪಕ್ಷದ ಕಾರ್ಯಕರ್ತರೊಂದಿಗೆ ‘ದಿ ಸಬರಮತಿ ರಿಪೋರ್ಟ್’ ಸಿನಿಮಾ ವೀಕ್ಷಿಸಿದ ಸಂಸದ ಕ್ಯಾ. ಚೌಟ- ಕಹಳೆ ನ್ಯೂಸ್

ಮಂಗಳೂರು: ಗೋಧ್ರಾ ರೈಲು ದುರಂತವನ್ನು ಆಧರಿಸಿ ನಿರ್ಮಾಣಗೊಂಡಿರುವ ‘ದಿ ಸಬರಮತಿ ರಿಪೋರ್ಟ್’ ಸಿನಿಮಾವನ್ನು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಬಿಜೆಪಿ ಕಾರ್ಯಕರ್ತರ ಜತೆಗೆ ಇಂದು ನಗರದ ಭಾರತ್ ಚಿತ್ರಮಂದಿರದಲ್ಲಿ ವೀಕ್ಷಣೆ ಮಾಡಿದ್ದಾರೆ.

‘ಸಬರಮತಿ ರಿಪೋರ್ಟ್’ ಸಿನಿಮಾ ವೀಕ್ಷಣೆ ಬಳಿಕ ಪ್ರತಿಕ್ರಿಯಿಸಿರುವ ಸಂಸದ ಕ್ಯಾ. ಚೌಟ ಅವರು  ನಮ್ಮ ಶತಮಾನದ ಪ್ರಮುಖ ಘಟನೆಯ ಕುರಿತು ತಿಳಿಸುವ ಈ ಸಿನೆಮಾವನ್ನು ವೀಕ್ಷಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ಕೂಡ ತಮ್ಮ ಎಕ್ಸ್ ಖಾತೆಯಲ್ಲಿ ಅನಿಸಿಕೆ ಹಂಚಿಕೊAಡಿದ್ದರು ಅದರಂತೆ ಸಿನೆಮಾವನ್ನು ನಮ್ಮ ಕಾರ್ಯಕರ್ತರೊಂದಿಗೆ ವೀಕ್ಷಿಸಲು ಬಯಸಿದ್ದೆ. ಅದರಂತೆ ನಮ್ಮ ಪಾರ್ಟಿಯ ಕಾರ್ಯಕರ್ತರ ಜತೆಗೆ ಕುಳಿತುಕೊಂಡು ‘ಸಬರಮತಿ ರಿಪೋರ್ಟ್’ ಸಿನಿಮಾ ವೀಕ್ಷಿಸಿದ್ದು, ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ದೇಶದಲ್ಲಿ ನಡೆದಿದ್ದ ಈ ಮತೀಯ ಸಂಚಿನ ಹಿಂದಿನ ಸತ್ಯ ಸಿನಿಮಾ ರೂಪದಲ್ಲಿ ಹೊರಬಂದಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕೆಲ ವರ್ಷಗಳ ಹಿಂದೆ ನಡೆದು ಹೋದ ಅಮಾನವೀಯ ಘಟನೆಯ ಹಿಂದಿರುವ ಸತ್ಯ ವಿಚಾರಗಳಿಗೆ ಯಾವ ರೀತಿಯಲ್ಲಿ ರಾಜಕೀಯ ಬಣ್ಣ ಬಳಿಯಲಾಯಿತು ಎನ್ನುವುದನ್ನು ಸಬರಮತಿ ರಿಪೋರ್ಟ್ ಸಿನಿಮಾದಲ್ಲಿ ಬಹಳ ಅಚ್ಚುಕಟ್ಟಾಗಿ ಚಿತ್ರಿಸಲಾಗಿದೆ ಎಂದು ಕ್ಯಾ. ಚೌಟ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಕಲಿ ನಿರೂಪಣೆಗಳ ಮೂಲಕ ಸತ್ಯವನ್ನು ಏಕೆ ಮತ್ತು ಹೇಗೆ ಮರೆಮಾಚಲಾಯಿತು ಎಂಬ ಹಲವು ವಿಚಾರಗಳನ್ನು ಈ ಸಿನೆಮಾದಲ್ಲಿ ಅರ್ಥವತ್ತಾಗಿ ವಿವರಿಸಲಾಗಿದೆ. ಒಟ್ಟಾರೆ ದಿ ಸಬರಮತಿ ರಿಪೋರ್ಟ್ ಚಿತ್ರವು ಪ್ರತಿಯೊಬ್ಬರೂ ನೋಡಲೇಬೇಕಾದ ಸಿನಿಮಾ ಎಂದು ಸಂಸದರು ಇದೇವೇಳೆ ಅಭಿಪ್ರಾಯಪಟ್ಟರು.

ಕ್ಯಾ. ಚೌಟ ಅವರೊಂದಿಗೆ ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಮನಪಾ ಸದಸ್ಯರು, ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹಾಗೂ ಯುವ ಸಮುದಾಯ ಚಿತ್ರವನ್ನು ವೀಕ್ಷಿಸಿದರು.