Sunday, January 19, 2025
ದಕ್ಷಿಣ ಕನ್ನಡ

ರಸ್ತೆ ಅಭಿವೃದ್ಧಿ ನೆಪದಲ್ಲಿ ಖಾಸಗಿ ವ್ಯಕ್ತಿಗಳಿಂದ ಸರ್ಕಾರಿ ಪಶು ಚಿಕಿತ್ಸಾಲಯದ ಆವರಣ ಗೋಡೆ ಧ್ವಂಸ :ವಿಟ್ಲ ಪ.ಪಂ.ಗೆ ಪಶು ವೈದ್ಯರಿಂದ ದೂರು : ಸ್ಥಳದಲ್ಲಿ ಬಿಗುವಿನ ವಾತಾವರಣ- ಕಹಳೆ ನ್ಯೂಸ್ 

ವಿಟ್ಲ ಜೈನ ಬಸದಿ ಮುಂಗಾದಲ್ಲಿನ ಸರ್ಕಾರಿ ಪಶು ಚಿಕಿತ್ಸಾಲಯ ವಠಾರದಲ್ಲಿ ಹಾದುಹೋಗುವ ತೀರಾ ಇಕ್ಕಟ್ಟಾದ ರಸ್ತೆಗೆ ಕಾಂಕ್ರೀಟೀಕರಣ ಮಾಡಲು ಆರು ಲಕ್ಷ ಅನುದಾನ ಮಂಜೂರಾಗಿದೆ. ಇಂದು ಬೆಳಗ್ಗೆ ರಸ್ತೆ ಅಭಿವೃದ್ಧಿಯ ನೆಪದಲ್ಲಿ ಪರಿಸರದ ವ್ಯಕ್ತಿಗಳ ಸಮ್ಮುಖದಲ್ಲಿ ಸ್ಥಳಕ್ಕೆ ಬಂದ ಜೆಸಿಬಿ ವಾಹನ ಪಶು ಚಿಕಿತ್ಸಾಲಯದ ಆವರಣ ಗೋಡೆಯನ್ನು ಕೆಡವಿ ಧ್ವಂಸ ಮಾಡಿದೆ ಎಂದು ಪ.ಪಂ.ಮುಖ್ಯಾಧಿಕಾರಿಗೆ ವೈದ್ಯರು ದೂರು ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಥಳದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನಜಮಾಯಿಸಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ತಕ್ಷಣವೇ ವಿಟ್ಲ ಪೊಲೀಸರು, 112ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಕಾಮಗಾರಿ ತಕ್ಷಣ ನಿಲ್ಲಿಸುವಂತೆ ಆದೇಶಿಸಿದ್ದಾರೆ.