ಪುತ್ತೂರು: ಪ್ರತಿಯೊಬ್ಬರಲ್ಲೂ ಆಂತರಿಕ ಅವ್ಯಕ್ತವಾಗಿದೆ, ಅದು ವ್ಯಕ್ತವಾಗಲು ಹಂಬಲಿಸಿದಾಗ, ಲೌಕಿಕ ಜೀವನಕ್ಕಿಂತ ದೊಡ್ಡದು ಯಾವುದಿಲ್ಲ ಎಂದು ಭಾವಿಸಿ ಶಕ್ತಿಯನ್ನು ಮುರಿಯುತ್ತೇವೆ. ಹಾಗಾಗಿ ಒಳಗಿರುವ ಅಂತರ್‌ಶಕ್ತಿ ಮುಸುಕುತ್ತಿದೆ. ಸಮಾಜದ ಆಗುಹೋಗುಗಳನ್ನು ನೇರವಾಗಿ, ದಿಟ್ಟವಾಗಿ ಹೇಳುವ ಧೈರ್ಯ ದಾಸನಿಗಿದೆಯೇ ಹೊರತು ನಾಯಕರಿಗಿಲ್ಲ ದೇವರ ದಾಸನಿಗೆ ಲೋಕದ ದಾಸ್ಯದಿಂದ ಮುಕ್ತಿ ದೊರಕುತ್ತದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಚಿಂತಕ ಲಕ್ಷಿ್ಮೀಶ ತೋಳ್ಪಾಡಿ ನುಡಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ( ಸ್ವಾಯತ್ತ), ವಿವೇಕಾನಂದ ಸಂಶೋಧನಾ ಕೇಂದ್ರ, ದೇರಾಜೆ ಸೀತಾರಾಮಯ್ಯು ಯಕ್ಷಗಾನ ಅಧ್ಯಯನ ಕೇಂದ್ರ, ಭಾರತೀಯ ಸಂಸ್ಕೃತಿ ಮತ್ತು ಲಲಿತಕಲೆಗಳ ಅಧ್ಯಯನ ಕೇಂದ್ರ, ಕನ್ನಡ ಸಂಘ ಮತ್ತು ಐಕ್ಯುಎಸಿ ಘಟಕದ ಸಂಯುಕ್ತ ಆಶ್ರಯದಲ್ಲಿ ನಡೆದ ಕನಕ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನಸ್ಸು ಅಂತರ್ಮುಖವಾಗಿದ್ದರೆ ಮಾತ್ರ ಜ್ಞಾನ ಜಾಗೃತವಾಗಲು ಸಾಧ್ಯ. ತೀರಾ ಬಹಿರ್ಮುಖ ಜೀವನ ವ್ಯಸ್ತ ಮತ್ತು ವ್ಯಗ್ರ. ಹಾಗಾಗಿ ದಾಸರು ಲೌಕಿಕ ಜೀವನವನ್ನು ತ್ಯಜಿಸಿ, ದೇವರತ್ತ ಮುಖ ಮಾಡಿದರು. ಆದ್ದರಿಂದ ಲೋಕದಲ್ಲಿರುವ ವಿಪರ್ಯಾಸವನ್ನು ದಾಕ್ಷಿಣ್ಯವಿಲ್ಲದೆ ಹೇಳುವ ಧೈರ್ಯ ಮೊಳೆಯಿತು. ಸಾವಿನ ಭೀತಿಯನ್ನು ತೊರೆದು ಬದುಕಿ, ಭಾಷೆಯ ಬಹುತ್ವವನ್ನು ಸಾರಿದವರು ಕನಕದಾಸರು. ಕನ್ನಡ ಭಾ಼ಷೆಗೆ ದಾಸ ಸಾಹಿತ್ಯದಿಂದ ಭಗವದನುಗ್ರಹ ದೊರಕಿತು. ಹಾಗಾಗಿ ಕನ್ನಡ ಭಾಷೆಯೂ ದೇವಭಾಷೆಯಾಗಿ ಪರಿಣಮಿಸಿತು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಶ್ರೀಪತಿ ಕಲ್ಲೂರಾಯ ಮಾತನಾಡಿ, ಬದುಕಿನಲ್ಲಿ ವ್ಯವಹಾರದ ಜೊತೆಗೆ ವೇದಾಂತವನ್ನು ಅಳವಡಿಸಿಕೊಳ್ಳಬೇಕು. ಮನುಕುಲಕ್ಕೆ ಆದರ್ಶವಾಗಿದ್ದ ಸಾಧಕರ ದಿನಾಚರಣೆಯಿಂದ ವಿದ್ಯಾರ್ಥಿಗಳ ಬದುಕು ಹಸನಾಗಲು ಸಾಧ್ಯ. ತಮ್ಮ ಮನಸ್ಸಿನ ಅಧ್ಯಯನಕ್ಕೆ ಸಾಧಕರು ಬದುಕಿದ ರೀತಿ ಮಾರ್ಗದರ್ಶನ ನೀಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಸಂಚಾಲಕ ಮುರಳೀಕೃಷ್ಣ ಕೆ.ಎನ್ ಮಾತನಾಡಿ, ಗತಕಾಲದಲ್ಲಿ ಸಮಾಜದ ಅಂಕುಡೊAಕುಗಳನ್ನು ಹಲವಾರು ವಚನಕಾರರು, ಸಾಹಿತಿಗಳು ತಿದ್ದಿದ್ದಾರೆ. ಹಾಗೆಯೇ ಇಂದೂ ನಮ್ಮ ನಡುವೆ ಸದ್ದಿಲ್ಲದೆ ಸಮಾಜವನ್ನು ಉನ್ನತಿಯತ್ತ ಕೊಂಡೊಯ್ಯುವವರು ಅನೇಕ ಮಂದಿಯಿದ್ದಾರೆ ಅಂತಹವರಲ್ಲಿ ತೋಳ್ಪಾಡಿಯವರು ಪ್ರಮುಖರು ಎಂದು ಹೇಳಿದರು.
ಸಭಾಕಾರ್ಯಕ್ರಮದ ಬಳಿಕ ಕನಕ ಕೀರ್ತನೆ ಗಾಯನ ನಡೆಯಿತು. ಕಾಲೇಜಿನ ಬಿಸಿಎ ಬಿಭಾಗದ ಹಿರಿಯ ವಿದ್ಯಾರ್ಥಿನಿ ವಿಭಾಶ್ರೀ, ಬಿಕಾಂ ವಿಭಾಗದ ಹಿರಿಯ ವಿದ್ಯಾರ್ಥಿನಿ ಕೀರ್ತಿ ಕುಡ್ಡ, ಎಂಕಾA ವಿಭಾಗದ ಹಿರಿಯ ವಿದ್ಯಾರ್ಥಿನಿ ರೂಪಾ ವಿಶ್ಲೇಶ್ ಕುಲಾಯಿ, ಅಂತಿಮ ಬಿಕಾಂ ವಿದ್ಯಾರ್ಥಿನಿಯರಾದ ಶ್ರೀಲಕ್ಷಿö್ಮ ಡಿ, ಶ್ರೀದೇವಿ, ಪ್ರಥಮ ಬಿಕಾಂ ವಿದ್ಯಾರ್ಥಿನಿ ದೀಪ್ತಿ ಪ್ರಭು ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ವಿಭಾಗದ ಪರೀಕ್ಷಾಂಗ ಕುಲಸಚಿವ ಡಾ. ಶ್ರೀಧರ ಹೆಚ್.ಜಿ, ಸ್ನಾತಕೋತ್ತರ ವಿಭಾಗದ ಡೀನ್ ಡಾ.ವಿಜಯ ಸರಸ್ವತಿ ಉಪಸ್ಥಿತರಿದ್ದರು.
ಫೋಟೋ ಕ್ಯಾಪ್ಶನ್: ವೇದಿಕೆಯಲ್ಲಿ ಕಾಲೇಜಿನ ಸಂಚಾಲಕ ಮುರಳೀಕೃಷ್ಣ ಕೆ.ಎನ್, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಶ್ರೀಪತಿ ಕಲ್ಲೂರಾಯ, ಸ್ನಾತಕೋತ್ತರ ವಿಭಾಗದ ಪರೀಕ್ಷಾಂಗ ಕುಲಸಚಿವ ಡಾ. ಶ್ರೀಧರ ಹೆಚ್.ಜಿ,
ಸ್ನಾತಕೋತ್ತರ ವಿಭಾಗದ ಡೀನ್ ಡಾ.ವಿಜಯ ಸರಸ್ವತಿ ಉಪಸ್ಥಿತರಿದ್ದರು.
ಕಾಲೇಜಿನ ಬಿಸಿಎ ವಿಭಾಗದ ಹಿರಿಯ ವಿದ್ಯಾರ್ಥಿನಿ ವಿಭಾಶ್ರೀ, ಅಂತಿಮ ಬಿಕಾಂ ವಿದ್ಯಾರ್ಥಿನಿಯ ಶ್ರೀಲಕ್ಷಿö್ಮ ಡಿ,ಕೀರ್ತನೆ ಗಾಯನ ಮಾಡಿದರು.