Recent Posts

Monday, January 20, 2025
ಸುದ್ದಿ

ಮಧ್ಯ ಪ್ರದೇಶ ಇಂದೋರ್-3ನೇ ವಿಧಾನಸಭಾ ಚುನಾವಣೆಗೆ ಸದಸ್ಯರ ಆಯ್ಕೆ – ಕಹಳೆ ನ್ಯೂಸ್

ದೆಹಲಿ: ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಮಗ ಮಂದರ್ ಮಹಾಜನ್‌ಗೆ ಮಧ್ಯ ಪ್ರದೇಶದ ಇಂದೋರ್-3ನೇ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನಿರಾಕರಿಸಿದೆ. ಬಿಜೆಪಿಯ ಪ್ರಭಾವಿ ಮುಖಂಡ ಕೈಲಾಸ್ ವಿಜಯವರ್ಗೀಯ ಅವರ ಮಗ ಆಕಾಶ್ ವಿಜಯವರ್ಗೀಯ ಅವರು ಈ ಕ್ಷೇತ್ರದ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಹಿರಿಯ ಮುಖಂಡ ಬಾಬುಲಾಲ್ ಗೌರ್ ಅವರ ಸೊಸೆ ಕೃಷ್ಣಾ ಗೌರ್ ಅವರಿಗೆ ಗೋವಿಂದಪುರ ಕ್ಷೇತ್ರದಿಂದ ಟಿಕೆಟ್ ಕೊಡಲಾಗಿದೆ.ಮಧ್ಯ ಪ್ರದೇಶದ 32 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಯನ್ನು ಬಿಜೆಪಿ ನಿನ್ನೆ ಬಿಡುಗಡೆ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

231 ಕ್ಷೇತ್ರಗಳಿರುವ ಇಲ್ಲಿನ ವಿಧಾನಸಭೆಗೆ ನವೆಂಬರ್ 28 ರಂದು ಮತದಾನ ನಡೆಯಲಿದ್ದು, 194 ಕ್ಷೇತ್ರಗಳಿಗೆ ಈಗಾಗಲೇ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಮಂದರ್‌ಗೆ ಟಿಕೆಟ್ ಇಲ್ಲ ಎಂಬುದು ಪಕ್ಷದ ವಲಯದಲ್ಲಿಯೇ ಅಚ್ಚರಿಗೆ ಕಾರಣವಾಗಿದೆ. ಸುಮಿತ್ರಾ ಮತ್ತು ವಿಜಯವರ್ಗೀಯ ನಡುವಣ ಹಗ್ಗಜಗ್ಗಾಟದಲ್ಲಿ ವಿಜಯವರ್ಗೀಯ ಗೆದ್ದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸುಮಿತ್ರಾ ಅವರು ಬಹಳ ಹಿಂದಿನಿಂದಲೂ ಆರ್‌ಎಸ್‌ಎಸ್‌ನ ನಿಷ್ಠಾವಂತೆ. ಮಧ್ಯ ಪ್ರದೇಶ ಬಿಜೆಪಿಯ ಅತ್ಯಂತ ಹಿರಿಯ ನಾಯಕಿ. ಇಂದೋರ್ ಲೋಕಸಭಾ ಕ್ಷೇತ್ರದಿಂದ ಅವರು 1989ರಿಂದ ಎಂಟು ಬಾರಿ ಆಯ್ಕೆಯಾಗಿದ್ದಾರೆ.