Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ತೀರ ಕಡು ಬಡತನದಲ್ಲಿದ್ದ ಆದಿದ್ರಾವಿಡ ಸಮುದಾಯದ ಜೀತು ನೇಲ್ಯಪಲ್ಕೆಯವರಿಗೆ ವಿಶ್ವ ಹಿಂದೂ ಪರಿಷದ್ ಬಜರಂಗದಳದಿAದ ಸಹಾಯಧನ ಹಸ್ತಾಂತರ-ಕಹಳೆ ನ್ಯೂಸ್

ಬಂಟ್ವಾಳ: ತೀರ ಕಡು ಬಡತನದಲ್ಲಿದ್ದ ಆದಿದ್ರಾವಿಡ ಸಮುದಾಯದ ಜೀತು ನೇಲ್ಯಪಲ್ಕೆ ಇವರು ಆಕಸ್ಮಿಕವಾಗಿ ಬೆಂಕಿಗೆ ಬಿದ್ದು ಮುಖ, ಕಿವಿ ಹಾಗೂ ದೇಹದ ಭಾಗ ಸುಟ್ಟು ಹೋಗಿದ್ದು, ಈ ಬಡ ಕುಟುಂಬದ ಕಷ್ಟ ಜೀವನದ ಪರಿಸ್ಥಿತಿಯನ್ನು ಅರಿತ ವಿಶ್ವ ಹಿಂದೂ ಪರಿಷದ್ ಬಜರಂಗದಳ ವೀರ ಕೇಸರಿ ಶಾಖೆ ಮೀಯಾರುಪಲ್ಕೆ ಸರಪಾಡಿಯ ಕಾರ್ಯಕರ್ತರು ದಾನಿಗಳ ಮೂಲಕ ಸಂಗ್ರಹಿಸಲ್ಪಟ್ಟ 25,950 ರೂಪಾಯಿಗಳನ್ನು ಸಂತ್ರಸ್ತ ಕುಟುಂಬಕ್ಕೆ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಬಜರಂಗದಳದ ಜಿಲ್ಲಾ ಸುರಕ್ಷಾ ಪ್ರಮುಖ್ ಸಂತೋಷ್ ಸರಪಾಡಿ, ಬಜರಂಗದಳ ಮೀಯಾರುಪಲ್ಕೆ ಘಟಕದ ಸಂಯೋಜಕ ಸುನೀಲ್ ಮೀಯಾರುಪಲ್ಕೆ, ಬಜರಂಗದಳದ ಸಹಸಂಯೋಜಕರಾದ ಜಗದೀಶ್ ಮೀಯಾರುಪಲ್ಕೆ ಪ್ರಮುಖರಾದ ಚಂದ್ರ ಕೈಯಾಳ, ಶಿವರಾಜ್ ಮಜಲು, ಪ್ರಕಾಶ್ ಕೊಟ್ಟುಂಜ ಮತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು