ಪುತ್ತೂರು; ದೂರದೃಷ್ಟಿ, ಕಠಿಣ ಪರಿಶ್ರಮಗಳೇ ಯಶಸ್ಸಿನ ಮೆಟ್ಟಿಲು. ಅವಕಾಶಗಳು ಸಿಕ್ಕಾಗಲೆಲ್ಲಾ ನಿಮ್ಮ ಗುರಿಯನ್ನು ತಲುಪಲು ಅವುಗಳನ್ನು ಬಳಸಿಕೊಳ್ಳಿ’ ಎಂದು ಮಂಗಳೂರಿನ ವಾಣಿಜ್ಯೋದ್ಯಮಿ ಶ್ರೀ ವಿಜಿತ್ ಶೆಟ್ಟಿ ಅವರು ಹೇಳಿದರು. ಪುತ್ತೂರಿನ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ವ್ಯವಹಾರ ಆಡಳಿತ ವಿಭಾಗವು ಆಯೋಜಿಸಿದ ಫುಡೀಪ್ರೆನಿಯರ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅವರು ವಿದ್ಯಾರ್ಥಿಗಳೊಂದಿಗೆ ವ್ಯವಹಾರದ ಕುರಿತ ಚಿಂತನೆಗಳನ್ನು ಹಂಚಿಕೊAಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ರೆ. ಡಾ. ???ಂಟನಿ ಪ್ರಕಾಶ್ ಮೊಂತೇರೊ ಅವರು ಪ್ರತಿಯೊಬ್ಬ ವಿದ್ಯಾರ್ಥಿಯು ಉತ್ತಮ ಮತ್ತು ವಿಭಿನ್ನ ಸಾಮರ್ಥ್ಯಗಳನ್ನು ಹೊಂದಿರುತ್ತಾರೆ. ಇದು ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಅನನ್ಯವಾಗಿಸುತ್ತದೆ ಎಂದು ನುಡಿದರು.
ಕಾರ್ಯಕ್ರಮ ಸಂಯೋಜಕರಾದ ಅಭಿಷೇಕ್ ಸುವರ್ಣ, ಉಪನ್ಯಾಸಕರು ವ್ಯವಹಾರ ಆಡಳಿತ ವಿಭಾಗ, ವ್ಯವಹಾರ ಆಡಳಿತ ಸಂಘದ ಸಂಚಾಲಕಿ ಪುಷ್ಪಾ ಎನ್, ಪ್ರಶಾಂತ್ ರೈ ಉಪನ್ಯಾಸಕರು ವ್ಯವಹಾರ ಆಡಳಿತ ವಿಭಾಗ, ವ್ಯವಹಾರ ಆಡಳಿತ ಸಂಘದ ವಿದ್ಯಾರ್ಥಿ ಪ್ರತಿನಿಧಿ ಮನೋಜ್ ಅಂತಿಮ ಬಿಬಿಎ , ವಿದ್ಯಾರ್ಥಿ ಸಂಯೋಜಕ ಸಾಗರ್ ಎ, ಅಂತಿಮ ಬಿಬಿಎ ವೇದಿಕೆಯಲ್ಲಿ
ಉಪಸ್ಥಿತರಿದ್ದರು.
ಬಿಬಿಎಯ ಮುಖ್ಯಸ್ಥರಾದ ಡಾ. ರಾಧಾಕೃಷ್ಣ ಗೌಡ ಸ್ವಾಗತಿಸಿ, ಶಿಶಿಕಾ ದ್ವಿತೀಯ ಬಿಬಿಎ ವಂದಿಸಿ, ಚಮನ್ ತೃತೀಯ ಬಿಬಿಎ ಕಾರ್ಯಕ್ರಮ ನಿರೂಪಿಸಿದರು. ಸಂಭ್ರಮಾಚರಣೆಗೆ ಪೂರಕವಾಗಿ, ಅಂತರ ತರಗತಿ ಸ್ಪರ್ಧೆ ರಲ್ಲಿ ಜಯಗಳಿಸಿದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಟ್ರೋಫಿಗಳನ್ನು ನೀಡಿ ಗೌರವಿಸಲಾಯಿತು.