Recent Posts

Sunday, November 17, 2024
ಸುದ್ದಿ

ಲವ್ ಜಿಹಾದ್ ಪ್ರಕರಣಗಳು ರಾಷ್ಟ್ರೀಯ ತನಿಖಾ ವಿಭಾಗಕ್ಕೆ ಹಸ್ತಾಂತರ, ಪಿ ಎಫ್ ಐ ನಿಷೇಧ ಸಾಧ್ಯತೆ.

ನವದೆಹಲಿ : ಕೇರಳದಲ್ಲಿ ಹೆಚ್ಚುತ್ತಿರುವ ಲವ್ ಜಿಹಾದ್ ನ ಮೇಲೆ ಕಣ್ಣಿಟ್ಟು ರಾಷ್ಟ್ರೀಯ ತನಿಖಾ ದಳ (ಎನ್ ಐ ಎ)ದ ತನಿಖೆಯನ್ನು ವಿರೋಧಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದ ಕೇರಳ ಸರಕಾರವೇ ಅನುಮಾನಾಸ್ಪದ ಬರೋಬ್ಬರಿ 90 ಪ್ರಕರಣಗಳ ಪಟ್ಟಿಯನ್ನು ಸಿದ್ದಪಡಿಸಿ ಎನ್ ಐ ಎ ಗೆ ಹಸ್ತಾಂತರಿಸಿದೆ. ತನ್ಮೂಲಕ ರಾಜಕೀಯಕ್ಕೂ ಹೊರತಾದ ಆಡಳಿತ ವಿರೋಧಿ ಅಲೆಗೆ ಮಣಿದು ಕೇರಳ ಸರ್ಕಾರ ಈ ತೀರ್ಮಾನ ಕೈಗೊಂಡಿರುವುದು ಜಿಹಾದಿಗಳ ಹೆಡೆಮುರಿಕಟ್ಟಲು ಎನ್ ಐ ಎ ಗೆ ಕೇರಳದಲ್ಲಿ ದಾರಿ ಸಲೀಸಾದಂತಾಗಿದೆ. ಬಲವಂತದ ಮತಾಂತರ, ಅಂತರ್ ಧರ್ಮೀಯ ವಿವಾಹ ಹಾಗೂ ಮತಾಂತರಗೊಳ್ಳಲು ಆಮಿಷವೊಡ್ಡಿ ಮತಾಂತರಗೊಳಿಸುವ ಜಾಲದ ಬೆನ್ನುಹತ್ತಲು ಇದು ಅನುಕೂಲವಾಗಲಿದೆ.
ದೇಶದಲ್ಲಿ ಇತ್ತೀಚೆಗೆ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣಗಳ ಪಟ್ಟಿ ದೊಡ್ಡದಿದ್ದರೂ ಅದರ ಮೂಲ ಕಾರಣ ಪಿ ಎಫ್ ಐ ಎಂಬುದು ವಾಸ್ತವಿಕ ಸತ್ಯ. ಹಾಗಾಗಿ ಪಿ ಎಫ್ ಐ ಯನ್ನು ನಿಷೇಧಿಸಲು ಕೇಂದ್ರದ ಗೃಹ ಇಲಾಖೆ ಸೂಕ್ತ ಕಾರಣಗಳನ್ನು ಹುಡುಕುತ್ತಿದ್ದು, ಅದನ್ನು ಕಾನೂನು ಬಾಹಿರ ಎಂದೋ ಅಥವಾ ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸಬೇಕೋ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಒಂದು ವೇಳೆ 90 ಪ್ರಕರಣಗಳಲ್ಲಿ ಅತೀ ಹೆಚ್ಚಿನ ಬಾರಿ ಪಿ ಎಫ್ ಐ ನ ಪಾತ್ರ ಕಂಡುಬಂದರೆ ದೇಶದ ಒಳಗಿನ ಶಾಂತಿ ಕದಡುವ ಸಂಘಟನೆ ಆದಷ್ಟು ಬೇಗ ನಿಷೇಧಕ್ಕೆ ಗುರಿಯಾಗಲಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು

Leave a Response