Recent Posts

Monday, November 25, 2024
ಕಾಸರಗೋಡುಕೇರಳರಾಜ್ಯಸುದ್ದಿ

ಎಡನೀರು ಮಠಾಧೀಷರಾದ ಸಚ್ಚಿದಾನಂದಭಾರತೀ ಮಹಾಸ್ವಾಮಿಗಳ ವಾಹನದ ಮೇಲಿನ ದಾಳಿ ಘಟನೆ‌ ಖಂಡಿಸಿ, ಅಖಿಲ ಭಾರತೀಯ ಸಂತ ಸಮಿತಿಯ ಮಹತ್ವದ ಸಭೆ ; ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಸಂತ ಸಮಿತಿಯ ಸಂತರು ಭಾಗಿ – ಕಾಸರಗೋಡು ಜಿಲ್ಲಾಧಿಕಾರಿಗಳ ಭೇಟಿ, ಸೂಕ್ತ ರಕ್ಷಣೆಗೆ ಸರಕಾರಕ್ಕೆ ಆಗ್ರಹ – ಕಹಳೆ ನ್ಯೂಸ್ಎಡನೀರು ಮಠಾಧೀಷರಾದ ಸಚ್ಚಿದಾನಂದಭಾರತೀ ಮಹಾಸ್ವಾಮಿಗಳ ವಾಹನದ ಮೇಲಿನ ದಾಳಿ ಘಟನೆ‌ ಖಂಡಿಸಿ, ಅಖಿಲ ಭಾರತೀಯ ಸಂತ ಸಮಿತಿಯ ಮಹತ್ವದ ಸಭೆ ; ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಸಂತ ಸಮಿತಿಯ ಸಂತರು ಭಾಗಿ – ಕಾಸರಗೋಡು ಜಿಲ್ಲಾಧಿಕಾರಿಗಳ ಭೇಟಿ, ಸೂಕ್ತ ರಕ್ಷಣೆಗೆ ಸರಕಾರಕ್ಕೆ ಆಗ್ರಹ – ಕಹಳೆ ನ್ಯೂಸ್

ಕಾಸರಗೋಡು : ಕೆಲ ದಿನಗಳ ಹಿಂದೆ ಎಡನೀರು ಮಠಾಧೀಶರು ಸಂಚರಿಸುತ್ತಿದ್ದ ವಾಹನದ ಮೇಲೆ ಪುಂಡರ ತಂಡವೊಂದು ದಾಳಿ ಮಾಡಿತ್ತು. ಈ ಹಿನ್ನಲೆಯಲ್ಲಿ ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ ಪ್ರದೇಶ ಕಮಿಟಿಯ ನೇತೃತ್ವದಲ್ಲಿ ಎಡನೀರು ಮಠದಲ್ಲಿ ಸನ್ಯಾಸಿ ಸಭೆ ನ. 25 ರಂದು ಬೆಳಿಗ್ಗೆ 10 ಗಂಟೆಗೆ ನಡೆಯಿತು. ಸಭೆಯಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ದಕ್ಷಿಣ ಭಾರತ ಸಂಸ್ಥಾನಗಳಿಂದ ಅಖಿಲ ಭಾರತೀಯ ಸಂತಸಮಿತಿಯ ಕಾರ್ಯಕರ್ತರು ಭಾಗವಹಿಸಿದರು.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸನಾತನ ಸಂಸ್ಕೃತಿಯ ಶ್ರೇಷ್ಠ ಭೂಮಿಯಾದ ಭಾರತದಲ್ಲಿ ಸಂಸ್ಕೃತಿ ಸಂರಕ್ಷಣೆಯೂ ಕೇಂದ್ರ ಸಂಸ್ಥಾನ ಸರ್ಕಾರದ ಜವಾಬ್ದಾರಿಯಾಗಿದೆ. ಸನಾತನ ಧರ್ಮ ಸಂರಕ್ಷಣೆಗೆ ಪ್ರವರ್ತಿಸುವ ಮಠಾಧೀಶ್ವರರ ಯಾತ್ರಾ ಮದ್ಯೆ ಸಾಮೂಹಿಕ ದ್ರೋಹಿಗಳು ನಿರೀಶ್ವಾರವಾದಿಗಳು ಧರ್ಮ ವಿರೋಧಿಗಳಿಂದ ಬರುವಂತಹ ಆಕ್ರಮಣವನ್ನು ಕ್ಷಮಿಸಲು ಅಸಾಧ್ಯ. ಸಂಚಾರ ಸ್ವಾತಂತ್ರ್ಯ ಎಲ್ಲಾರ ಹಕ್ಕು ಅದೇ ರೀತಿ ಆಧ್ಯಾತ್ಮಿಕ ಆಚಾರ್ಯರ ಯಾತ್ರೆ ಸಂದರ್ಭ ಅವರಿಗೆ ತೊಂದರೆ ಉಂಟಾದಲ್ಲಿ ಆ ತೊಂದರೆಯನ್ನು ಬಗೆಹರಿಸಿ ಯಾತ್ರೆಗೆ ಬೇಕಾದ ಸೌಕರ್ಯವನ್ನು ನೀಡುವುದು ಪೊಲೀಸರ ಜವಾಬ್ದಾರಿ. ರಾಷ್ಟ್ರೀಯತೆ ಯಾವುದೇ ರಾಷ್ಟ್ರೀಯ ಪಕ್ಷದವರಲ್ಲಿ ಪ್ರತ್ಯೇಕ ಮಮತೆಯಿಲ್ಲದೆ ಧರ್ಮ ಸಂರಕ್ಷಕರಾದ ಸ್ವಾಮೀಜಿಯವರ ಯಾತ್ರೆಯಲ್ಲಿ ಈ ರೀತಿ ದುರಂತ ಅನುಭವಗಳು ಸಂಭವಿಸಬಾರದು.

ಎಡನೀರು ಮಠಾಧಿಪತಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಯಾತ್ರೆ ಸಂದರ್ಭ ದಾರಿ ಬ್ಲಾಕ್ ಮಾಡಿ ವಾಹನಕ್ಕೆ ಆಕ್ರಮಣ ಎಸಗಿದವರನ್ನು ಬಂಧನಕ್ಕೊಳಪಡಿಸಲಿಲ್ಲ. ಅದು ಸರಿಯಲ್ಲ ಆದ್ದರಿಂದ ಆದಷ್ಟು ಬೇಗ ದುಷ್ಕರ್ಮಿಗಳನ್ನು ಅರೆಸ್ಟ್ ಮಾಡಿ ಕಾನೂನು ವ್ಯವಸ್ಥೆಯಿಂದ ತಕ್ಕದಾದ ಶಿಕ್ಷೆ ನೀಡಬೇಕು. ಸ್ವಾಮೀಜಿಗಳ ಯಾತ್ರೆ ಹಾಗೂ ವಾಹನಕ್ಕೆ ಬೇಕಾದ ಸಂರಕ್ಷಣೆ ನೀಡಲು ಸರಕಾರ ಸಂಬಂಧಪಟ್ಟವರಿಗೆ ನಿರ್ದೇಶನವನ್ನು ಕೊಡಬೇಕು. ಆತ್ಮೀಯ ಆಚಾರ್ಯರು ಆಕ್ರಮಣಕ್ಕೆ ಗುರಿಯಾಗಬಾರದೆಂದು ಸನ್ಯಾಸ ಸಭೆಯಲ್ಲಿ ಸರಕಾರವನ್ನು ಒತ್ತಾಯಿಸಲಾಯಿತು. ಅಲ್ಲದೇ ಆಕ್ರಮಣವನ್ನು ತೀವ್ರವಾಗಿ ಖಂಡಿಸಲಾಯಿತು.

ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ ರಾಜ್ಯಾಧ್ಯಕ್ಷ ಮಹಾಮಂಡಲೇಶ್ವರ ಸ್ವಾಮಿ ಓಂ ಶ್ರೀ ವಿದ್ಯಾನಂದ ಸರಸ್ವತಿ ಯವರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 10 ಗಂಟೆಗೆ ಸೇರಿದ ಸಭೆಯಲ್ಲಿ ಮಂಗಳೂರು ಓಂ ಶ್ರೀ ಮಠದ ಮಾತಾಶ್ರೀ ಓಂ ಶ್ರೀ ಶಿವ ಜ್ಞಾನಮಹಿ ಸರಸ್ವತಿ, ಅಖಿಲ ಭಾರತಿಯ ಸಂತ ಸಮಿತಿ ಕರ್ನಾಟಕ ಕೋಶಾಧಿಕಾರಿ ಪರಂಪೂಜ್ಯ ಶ್ರೀ ಮಹಾಬಲೇಶ್ವರ ಸರಸ್ವತಿ ಸ್ವಾಮೀಜಿ, ಮುಖ್ಯ ಕಾರ್ಯದರ್ಶಿ ಶ್ರೀ ರಾಜೇಶ್ ನಾಥ್ ಗುರೂಜಿ, ಸಂಘಟನಾ ಕಾರ್ಯದರ್ಶಿ ಶ್ರೀ ಜಯಪ್ರಕಾಶ್ ಗುರೂಜಿ. ಅಖಿಲ ಭಾರತೀಯ ಸಂತಸಮಿತಿ ಕೇರಳ ಪ್ರದೇಶ ಅಧ್ಯಕ್ಷ ಶ್ರೀ ಪ್ರಭಾಕರಾನಂದ ಸರಸ್ವತಿ, ಉಪಾಧ್ಯಕ್ಷ ಶ್ರೀ ಸ್ವಾಮಿ ಸಾಯಿ ಈಶ್ವರಾನಂದ ಸರಸ್ವತಿ, ಮುಖ್ಯ ಕಾರ್ಯದರ್ಶಿ ಸ್ವಾಮಿ ಶ್ರೀ ಕೈಲಾಸಾನಂದ ಸರಸ್ವತಿ, ಕಾರ್ಯದರ್ಶಿ ಸ್ವಾಮಿ ಶ್ರೀ ವಿಶ್ವಾನಂದ ಸರಸ್ವತಿ, ವಿಶ್ವಕರ್ಮ ಶಂಕರಾಚಾರ್ಯ ಪೀಠಾಧೀಶ್ವರ ದಂಡಿ ಸ್ವಾಮಿ ಶ್ರೀ ಸಾಧು ಕೃಷ್ಣಾನಂದ ಸರಸ್ವತಿ, ಚೆರುಕೋಡ್ ಆಂಜನೇಯ ಆಶ್ರಮ ಮಠಾಧೀಶ್ವ‌ರ್ ಸ್ವಾಮಿ ಶ್ರೀ ರಾಮಾನಂದನಾಥ್ ಚೈತನ್ಯ.ಅಖಿಲ ಭಾರತೀಯ ಸಂತಸಮಿತಿ ತಮಿಳುನಾಡು ಪ್ರದೇಶ ಅಧ್ಯಕ್ಷ ವಿಶ್ವ ಲಿಂಗ ತಂಬಿರಾನ್ ಶ್ರೀ ಶ್ರೀ ಯುಕೇಶ್ವರ ಸ್ವಾಮಿ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಪರಮಹಂಸ ಶ್ರೀ ಮೋಹನದಾಸ್ ಸ್ವಾಮೀಜಿ ಭಾಗವಹಿಸಿ ಮಾತನಾಡಿದರು.