Recent Posts

Sunday, January 19, 2025
ಸಿನಿಮಾ

ಕೆಜಿಎಫ್ ಹವಾ! ; ಟ್ರೇಲರ್ ರಿಲೀಸಾದ ಎರಡೇ ಗಂಟೆಗಳಲ್ಲಿ ಲಕ್ಷಾಂತರ ವೀವ್ಸ್ – ಕಹಳೆ ನ್ಯೂಸ್

ರಾಜ ಹುಲಿ ಯಶ್ ಸ್ಯಾಂಡಲ್‍ವುಡ್‍ನ ರಾಕಿಂಗ್ ಸ್ಟಾರ್. ಮಾಸ್ ಮಹಾರಾಜ ಕೂಡ. ಸದ್ಯ ಯಶ್ ಅವರ ಬಹು ನಿರೀಕ್ಷಿತ ಕೆಜಿಎಫ್ ಸಿನಿಮಾದ ಟ್ರೇಲರ್ ಇವತ್ತು ರಿಲೀಸಾಗಿದೆ.

ಟ್ರೇಲರ್ ರಿಲೀಸಾದ ಎರಡೇ ಗಂಟೆಗಳಲ್ಲಿ ಲಕ್ಷಾಂತರ ವೀವ್ಸ್‍ಗಾಳಾಗಿದೆ ಅನ್ನೋದು ಹೊಸ ದಾಖಲೆ. ರಾಕಿಂಗ್ ಸ್ಟಾರ್ ಯಶ್ ಏನ್ ಮಾಡಿದ್ರೂ ಡಿಫ್ರೆಂಟಾಗಿ ಮಾಡ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ.ಅಲ್ದೇ ಅದಕ್ಕೆ ಅವರ ಸಿನಿಮಾ ಜರ್ನಿಯೇ ಬೆಸ್ಟ್ ಎಕ್ಸಾಂಪಲ್. ಯಾಕಂದ್ರೆ ಯಶ್ ತಮ್ಮ ಪ್ರತಿಯೊಂದು ಸಿನೆಮಾವನ್ನು ಕೂಡ ತನ್ನ ಮೊದಲ ಸಿನೆಮಾ ಅನ್ನೋ ಫೀಲ್ ಇಟ್ಕೊಂಡೆ ಮಾಡ್ತಾರೆ.ಯಶ್ ಅಂದ್ರೆ ಒಂದು ಹವಾ ಇರುತ್ತೆ . ಅವರ ಸಿನೆಮಾಗಳು ಅಂದ್ರೆ ಒಂದು ಕ್ರೇಝ್ ಇರುತ್ತೆ.ಇನ್ನೂ ಇವರ ಸಿನೆಮಾ ರಿಲೀಸಾದ್ರೆ ಬಾಕ್ಸ್ ಆಫೀಸ್ ಶೇಕ್ ಆಗುತ್ತೆ. ಅದು ಯಶ್ ಸಿನಿಮಾಗಿರೋ ತಾಕತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಸದ್ಯ ಸೌತ್ ಸಿನಿಮಾ ಲೋಕದಲ್ಲಿ ದಿನ ಬೆಳಗಾದ್ರೆ ಯಶ್ ಮತ್ತು ಕೆಜಿಎಫ್ ಸಿನಿಮಾದ ಬಗ್ಗೇನೆ ಸುದ್ದಿ. ಆದ್ರೆ ಇದೀಗ ಕೆಜಿಎಫ್ ಸಿನಿಮಾದ ಟ್ರೇಲರ್ ಬೆಂಗಳೂರಿನ ಓರಿಯನ್ ಮಾಲ್ ನಲ್ಲಿ ಗ್ರ್ಯಾಂಡಾಗಿ ರಿಲೀಸಾಗಿದೆ. ಇನ್ನೂ ಟ್ರೇಲರ್ ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಕೆಜಿಎಫ್ ಸಿನಿಮಾ 5 ಭಾಷೆಗಳಲ್ಲಿ ರಿಲೀಸಾಗ್ತ ಇದ್ದು, ಕನ್ನಡ ಮಲಯಾಳಂ, ತೆಲುಗು, ತಮಿಳು, ಹಾಗೇ ಹಿಂದಿ ಭಾಷೆಗಳಲ್ಲೂ ಮೂಡಿ ಬರ್ತಾ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಇನ್ನೂ ಸಿನಿಮಾದ ಟ್ರೈಲರನ್ನ ಮಂಡ್ಯದ ಗಂಡು ಅಂಬರೀಷ್ ಅವರ ಕೈಯಲ್ಲಿ ರಿಲೀಸ್ ಮಾಡಿದ್ದು ಸಿಂಪ್ಲಿ ಸೂಪರ್ಬ್. ಈ ಚಿತ್ರವನ್ನು `ಉಗ್ರಂ’ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದು, ಹೊಂಬಾಳೆ ಪ್ರೊಡಕ್ಷನ್‍ನಲ್ಲಿ ನಿರ್ಮಾಣವಾಗಿದೆ. ಇದೇ ಮೊದಲ ಬಾರಿಗೆ ಈ ಸಿನಿಮಾದಲ್ಲಿ ಯಶ್ ಜೊತೆ ಶ್ರೀ ನಿಧಿ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಐಟಂ ಹಾಡಿಗೆ ಯಶ್ ಜೊತೆ ಮಿಲ್ಕಿ ಬ್ಯೂಟಿ ಕ್ವೀನ್ ತಮನ್ನಾ ಭಾಟಿಯಾ ಅವರು ಹೆಜ್ಜೆ ಹಾಕಿರೋದು ಸಿನಿಮಾದ ಮೈನ್ ಅಟ್ರ್ಯಾಕ್ಷನ್!. ಟ್ರೇಲರ್ ಲಾಂಚಿಂಗ್ ಕಾರ್ಯಕ್ರಮದಲ್ಲಿ ರಾಧಿಕ ಯಶ್ ಕೂಡ ಕಾಣಿಸಿಕೊಂಡ್ರು. ಒಟ್ಟಾರೆಯಾಗಿ ಕೆಜಿಎಫ್ ಸಿನೆಮಾ ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ರೆಕಾರ್ಡ್ ಕ್ರಿಯೇಟ್ ಮಾಡೋದಂತೂ ಕನ್ಫರ್ಮ್

 ರಕ್ಷಿತ ಆಳ್ವ ಫಿಲ್ಮ್ ಬ್ಯೂರೋ ಕಹಳೆ ನ್ಯೂಸ್