ಬಂಟ್ವಾಳ : ಗ್ರಾಮೀಣ ಭಾಗದ ಜನರ ಅಭಿವೃದ್ಧಿಯ ದೃಷ್ಟಿಯಲ್ಲಿ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯು ಸಹಕಾರಿಯಾಗಿದೆ ಎಂದು ವಿಟ್ಲ ಕ್ಷೇತ್ರದ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಹೇಳಿದರು.
ಅವರು ಸೋಮವಾರ ಕಲ್ಲಡ್ಕ ಕೆಳಗಿನ ಪೇಟೆ ಲಲಿತಾ ಎಸ್ ರಾವ್ ರವರ ವಾಣಿಜ್ಯ ಸಂಕೀರ್ಣದಲ್ಲಿ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಕಲ್ಲಡ್ಕ ವಲಯದ ನೂತನ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿದರು.
ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾತೇಶ್ ಭಂಡಾರಿಯವರು ಯೋಜನೆಯು ನಡೆದು ಬಂದ ದಾರಿಯ ಬಗ್ಗೆ ತಿಳಿಸಿ, ಯೋಜನೆಯ ಸವಲತ್ತು ಬಗ್ಗೆ ಮಾಹಿತಿ ನೀಡಿದರು.
ಸುಮಂಗಳ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ಅಧ್ಯಕ್ಷ ನಾಗೇಶ್ ಕೊಳಕೀರು ಮಾತಾಡಿ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಹಣದ ವ್ಯವಹಾರ ಮಾತ್ರವಲ್ಲದೆ ಸಂಸ್ಕಾರ ಯುಕ್ತ ಭಕ್ತಿಭಾವ ತುಂಬಿದ ಸಂಸ್ಥೆಯಾಗಿದೆ ಎಂದರು.
ಕಾರ್ಯಕ್ರಮದ ಮೊದಲು ಭಜನಾ ಸಂಕೀರ್ತನೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಝಾನ್ಸಿ ರಾಣಿ ಮಹಿಳಾ ಮಂಡಲದ ಅಧ್ಯಕ್ಷೆ ಮಿನಾಕ್ಷಿ ಆರ್ ಪೂಜಾರಿ, ಕಟ್ಟಡದ ಮಾಲಿಕರಾದ ಲಲಿತಾ ಎಸ್ ರಾವ್, ಯೋಜನೆಯ ಕಲ್ಲಡ್ಕ ಗೋಳ್ತಮಜಲು ಘಟ ಸಮಿತಿಯ ಅಧ್ಯಕ್ಷರಾದ ಯಮುನ, ಬಂಟ್ಟಾಳ ತಾಲೂಕು ಮೇಲ್ವಿಚಾರಕಾರಕಿ ಜಯಲಕ್ಷ್ಮೀ ಪ್ರಭು, ಎಲ್ಲಾ ಗ್ರಾಮದ ವಲಯ ಸಂಯೋಜಕರು,ಸೇವಾದೀಕ್ಷಿತರು ಲೆಕ್ಕಪರಿಶೋಧಕರು ಹಾಗೂ ಗುರುಬಂಧುಗಳು ಉಪಸ್ಥಿತದ್ದರು.
ಸೇವಾದೀಕ್ಷಿತೆ ನಿಶಾ ರವರು ಸ್ವಾಗತಿಸಿ, ಲೆಕ್ಕಪರಿಶೋದಕಿ ದಯಾ ವಂದಿಸಿದರು. ಗೋಳ್ತಮಜಲು ಗ್ರಾಮದ ಸೇವಾದೀಕ್ಷಿತೆ ಶ್ಯಾಮಲ ಕಾರ್ಯಕ್ರಮ ನಿರೂಪಿಸಿದರು.