Saturday, January 18, 2025
ಕುಂದಾಪುರಸುದ್ದಿ

ಲಯನ್ಸ್ ಕ್ಲಬ್ ಹಂಗಳೂರು ವತಿಯಿಂದ ರಕ್ತದಾನ ಶಿಬಿರ-ಕಹಳೆ ನ್ಯೂಸ್

ಕುಂದಾಪುರ: ಕೋಣಿಯ ಸ ಹಿ. ಪ್ರಾ ಶಾಲೆಯಲ್ಲಿ ಹಂಗಳೂರು ಲಯನ್ಸ್ ಕ್ಲಬ್ ಸ್ಥಳೀಯ ವಿವಿದ ಸಂಘಗಳಾದ ಹಳೆ ವಿದ್ಯಾರ್ಥಿ ಸಂಘ,ಕೇಳಕೇರಿ ಸಂಘ, ನಿತ್ಯಾಧರ ಸಂಘ ಮತ್ತು ಎಚ್ ಡಿ ಎಫ್ ಸಿ ಬ್ಯಾಂಕ್ ಸಹಕಾರದೊಂದಿಗೆ ಬ್ರಹತ್ ರಕ್ತದಾನ ಶಿಬಿರ ಕುಂದಾಪುರದ ರೆಡ್ ಕ್ರೋಸ್ ಸಂಸ್ಥೆ ನೆರವಿನೊಂದಿಗೆ ಜರಗಿತು.

ಲಯನ್ ರೋವನ್ ಡಿಕೊಸ್ತಾ ರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಜಯಕರ ಶೆಟ್ಟಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿ ರಕ್ತದಾನದ ವಿಚಾರವಾಗಿ ಮಾಹಿತಿ ನೀಡಿದರು.ಲಯನ್ ರಾಜೀವ ಕೋಟಿಯನ್ ಮಾತನಾಡಿ ಲಯನ್ಸ್ ಕ್ಲಬ್ ಹಂಗಳೂರಿನ ಕ್ಲಬ್ ನ ಸೇವಾ ಕಾರ್ಯವನ್ನು ಮೆಚ್ಚಿ ಜಿಲ್ಲೆಯಲ್ಲಿ ಪ್ರಥಮ ಪಡೆಯಲಿ ಎಂದು ಹಾರೈಸಿದರು
ಸಭೆಯಲ್ಲಿ ಹೆಚ್ಚು ಬಾರಿ ರಕ್ತದಾನ ಮಾಡಿದ ಲಯನ್ ವಿಜಯರ ವರನ್ನು ಗೌರವಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಥಳೀಯ ಸಂಘ ಸಂಸ್ಥೆಗಳು ಲಯನ್ ರೋವನ್ ಡಿಕೊಸ್ತಾ ರವರನ್ನು ಅವರ ಸೇವಾ ಕಾರ್ಯಕ್ಕೆ ಸನ್ಮಾನಿಸಿದರು.
ಲಯನ್ ರೋವನ್ ಡಿಕೊಸ್ತಾ ರವರು ಶಿಬಿರಕ್ಕೆ ನೆರವು, ಸಹಕಾರ ನೀಡಿದ ಸಂಘಗಳಿಗೆ ಕ್ರತಜ್ಞತೆ ಸಲ್ಲಿಸಿದರು. ಸಶಿಬಿರದಲ್ಲಿ. 65 ಯುನಿಟ್ ರಕ್ತವನ್ನು ಸಂಗ್ರಹಿಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು