Recent Posts

Sunday, January 19, 2025
ಸುದ್ದಿ

Breaking News : ಪುತ್ತೂರಿನ ಪೋಳ್ಯ ಮಠದಿಂದ 900 ವರ್ಷ ಪುರಾತನ ವಿಗ್ರಹಗಳ ಕಳ್ಳತನ – ಕಹಳೆ ನ್ಯೂಸ್

ಪುತ್ತೂರು : ನವೆಂಬರ್ 09: ಅತೀ ಪುರಾತನ ವಿಗ್ರಹ ಗಳನ್ನು ದುಷ್ಕರ್ಮಿಗಳು ಕಳವು ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಪುತ್ತೂರಿನ ಪೋಳ್ಯ ಎಂದಬಲ್ಲಿ ಈ ಘಟನೆ ನಡೆದಿದೆ. ಪೋಳ್ಯ ದಲ್ಲಿರುವ ಲಕ್ಷ್ಮೀ ವೆಂಕಟರಮಣ ಮಠಕ್ಕೆ ಇಂದು ಬೆಳ್ಳಂಬೆಳಿಗ್ಗೆ ನುಗ್ಗಿದ ಕಳ್ಳರು ಬೆಲೆ ಬಾಳುವ ಅತೀ ಪುರಾತನ ಮೂರು ಪಂಚಲೋಹದ ವಿಗ್ರಹಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.
ಇಂದು ಬೆಳಿಗ್ಗಿನ ಜಾವ ಸುಮಾರು ಸುಮಾರು 1.50 ರ ಹೊತ್ತಿಗೆ ಈ ಕಳ್ಳತನ ನಡೆದಿದೆ ಎಂದು ಸಂಶಯ ವ್ಯಕ್ತಪಡಿಸಲಾಗಿದೆ. ಕಳ್ಳರು ಸುಮಾರು 900 ವರ್ಷಗಳ ಹಿಂದಿನ ಲಕ್ಷ್ಮೀ ವೆಂಕಟರಮಣ, ಗಣಪತಿ ಸೇರಿದಂತೆ ಮೂರು ವಿಗ್ರಹಗಳನ್ನು ಕಳವು ಮಾಡಿದ್ದಾರೆ.
ಅಲ್ಲದೆ ಇನ್ನು ಮೂರು ವಿಗ್ರಹಗಳಿಗೆ ಹೊದಿಸಿದ ಬೆಳ್ಳಿಯ ಕವಚ, ಪ್ರಭಾವಳಿ ಗಳನ್ನು ಕದ್ದೊಯ್ದಿದ್ದಾರೆ. ಮುಂಜಾನೆ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ.

ಈ ಕುರಿತು ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಳ್ಳತನ ನಡೆದ ಲಕ್ಷ್ಮೀ ವೆಂಕಟರಮಣ ಮಠಕ್ಕೆ ಬೆರಳಚ್ಚು ತಜ್ಞರ ತಂಡ ಸೇರಿದಂತೆ ಶ್ವಾನದಳವೂ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು