Recent Posts

Sunday, January 19, 2025
ಸುದ್ದಿ

ಟಿಪ್ಪು ಟೆನ್ಷನ್..! ಕೊಡಗು ಸಂಪೂರ್ಣ ಬಂದ್ , ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಟಿಪ್ಪು ಜಯಂತಿ ಬಿಸಿ – ಕಹಳೆ ನ್ಯೂಸ್

ಮಡಿಕೇರಿ/ ದ.ಕ. : ಟಿಪ್ಪು ಸುಲ್ತಾನ್ ನ ಜಯಂತಿಯನ್ನು ಆಚರಿಸಲು ರಾಜ್ಯ ಸರಕಾರ ನಿರ್ಧಾರ ಮಾಡಿದ ಮರುಕ್ಷಣವೇ ರಾಜ್ಯಾದ್ಯಂತ ಬಿಜೆಪಿ ಸೇರಿದಂತೆ ಹಿಂದೂ ಪರ ಸಂಘಟನೆಗಳು ಹೋರಾಟ ನಡೆಸಿದೆ‌.

ಕೊಡಗು ಬಂದ್ !

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಟಿಪ್ಪು ಜಯಂತಿಯಂದು ಅತೀ ಹೆಚ್ಚು ಸಾವು ನೋವು ಸಂಬಂಧಿಸಿದ ಕೊಡಗನ್ನು ಈ ಭಾರಿ ಸಂಪೂರ್ಣ ಬಂದ್ ಮಾಡಲಾಗಿದೆ, ಅಲ್ಲದೇ ಸುಮಾರು 2000ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದ್ದು, ಪ್ರಸ್ತುತ ಸಂಪೂರ್ಣ ಕೊಡಗು ಪೊಲೀಸ್ ಸುಪರ್ದಿಯಲ್ಲಿದೆ.

ದಕ್ಷಿಣ ಕನ್ನಡದಲ್ಲಿ ಟಿಪ್ಪು ಬಿಸಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಟಿಪ್ಪು ಬಿಸಿ ತೀವ್ರವಾಗಿದ್ದು, ಜಿಲ್ಲೆಯಲ್ಲಿ ನಿನ್ನೆಯಿಂದಲೇ ಬಿಜೆಪಿ ಫ್ಲಿಲ್ಡಿಗಿಳಿದಿದೆ, ಸಂಸದ ನಳೀನ್ ಕುಮಾರ್ ಕಟೀಲ್, ಬ್ರಿಜೇಶ್ ಚೌಟ ಸೇರಿದಂತೆ ‌ಅನೇಕ ಬಿಜೆಪಿ ನಾಯಕರು ಬೆಂಕಿ ಉಗುಳಿದ್ದಾರೆ. ಕೇಸರಿ ಪಾಳದಯ ಹೋರಾಟದ ಹಿನ್ನಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದ್ದು, ಪರಿಸ್ಥಿತಿ ಎದುರಿಸಲು ಪೊಲೀಸರು ಸಂಪೂರ್ಣ ಸನ್ನಧರಾಗಿದ್ದಾರೆ.

ಮುಂದೇನಾಗುತ್ತೇ ಅನ್ನುದನ್ನು ಕಾದು ನೋಡಬೇಕಿದೆ.

ರಂಜಿತ್ ಸುವರ್ಣ , ಕಹಳೆ ನ್ಯೂಸ್ ಮಂಗಳೂರು