ಮಂಗಳೂರು: ದಿನದಿಂದ ದಿನಕ್ಕೆ ಕರವಾಳಿಯಲ್ಲಿ ಗಾಂಜಾ ಮಾರಾಟ ಜಾಲ ಪತ್ತೆಯಾಗುತ್ತಿದೆ. ಬೇರೆ ಜಿಲ್ಲೆಯ ವ್ಯಕ್ತಿಗಳು ಮಂಗಳೂರು ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಕಲ್ ಕ್ರಾಸ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಜಾಲವೊಂದು ಪತ್ತೆಯಾಗಿದೆ.
ಬೆಳಗಾಂ ಮತ್ತು ಬಿಜಾಪುರ ಜಿಲ್ಲೆಯ 3 ವ್ಯಕ್ತಿಗಳೂ ಸೇರಿ ವಿಜಯಪುರದಿಂದ ಕೇರಳ ರಾಜ್ಯ ಕಾಸರಗೋಡು ಜಿಲ್ಲೆಗೆ ಗಾಂಜಾ ಮಾರಾಟ ಮಾಡಲು ಪ್ಲಾನ್ ಮಾಡಿಕೊಂಡಿದ್ದರು.
ಆದ್ರೆ ಮಂಗಳೂರು ನಗರ ಕೇಂದ್ರ ಉಪವಿಭಾಗದ ರೌಡಿ ನಿಗ್ರಹ ದಳದ ಅಧಿಕಾರಿ ಹಾಗೂ ಸಿಬ್ಬಂದಿಯವರು ಕಾಯ್ಚರಣೆ ವೇಳೆ ಈ ಕೃತ್ಯ ಬೆಳಕಿಗೆ ಬಂದಿದೆ.
ಕರೆಪ್ಪ ಲಕ್ಷ್ಮಣ ಸುಣದೋಳಿ, ಗಂಗಪ್ಪ ಪಡೆಪ್ಪ ಮಾದೆರ, ಸಿದ್ದರಾಯಪ್ಪ ಕೂರಿ ಹೋಲಿ ಎಂಬ ಮೂರು ವ್ಯಕ್ತಿಗಳಿಂದ 7.100 ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು, 3 ಮೊಬೈಲ್ ಫೋನ್, 2 ಮೋಟಾರ್ ಸೈಕಲ್, ನಗದನ್ನು ವಶಕ್ಕೆ ಪಡೆದಿದ್ದು, ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 3,13,315 ಆಗಿರುತ್ತದೆ. ಈ ಬಗ್ಗೆ ಉರ್ವ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿರುತ್ತದೆ.