ನವೆಂಬರ್ 30 ರಂದು ಸನಾತನ ಸಂಸ್ಥೆಯ ರಜತ ಮಹೋತ್ಸವ ಸಮಾರಂಭ; ಕಾರ್ಯಕ್ರಮದಲ್ಲಿ ಪ.ಪೂ. ಗೋವಿಂದದೇವ ಗಿರಿ ಮಹಾರಾಜರಿಗೆ ಮುಖ್ಯಮಂತ್ರಿಗಳ ಹಸ್ತದಿಂದ ಅಮೃತಮಹೋತ್ಸವ ಸನ್ಮಾನ-ಕಹಳೆ ನ್ಯೂಸ್
ಪಣಜಿ – ಗೋವಾ ರಾಜ್ಯದಲ್ಲಿ ಸ್ಥಾಪನೆಯಾಗಿರುವ ಮತ್ತು ಪ್ರಸ್ತುತ ಭಾರತದಾದ್ಯಂತ ಸನಾತನ ಹಿಂದೂ ಧರ್ಮದ ತೇಜಸ್ವಿ ಪ್ರಚಾರ ಮಾಡುತ್ತಿರುವ ಸನಾತನ ಸಂಸ್ಥೆಯ ರಜತ ಮಹೋತ್ಸವ ಸಮಾರಂಭವನ್ನು ನವೆಂಬರ್ 30 ರಂದು ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ನಿಮಿತ್ತ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸ ಕೋಶಾಧ್ಯಕ್ಷರಾದ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಮಹಾರಾಜರ ಅಮೃತ ಮಹೋತ್ಸವ ಸನ್ಮಾನ ಗೋವಾದ ಮುಖ್ಯಮಂತ್ರಿ ಶ್ರೀ. ಪ್ರಮೋದ ಸಾವಂತ ಇವರ ಶುಭಹಸ್ತದಿಂದ ನಡೆಯಲಿದೆ.
ಈ ಸಮಾರಂಭದಲ್ಲಿ ಕೇಂದ್ರ ಇಂಧನ ಖಾತೆ ರಾಜ್ಯ ಸಚಿವ ಶ್ರೀ. ಶ್ರೀಪಾದ ನಾಯ್ಕ, ಗೋವಾದ ಪ್ರವಾಸೋದ್ಯಮ ಸಚಿವ ರೋಹನ ಖವಟೆ ಮತ್ತು ಭಾಜಪ ಗೋವಾ ರಾಜ್ಯ ಅಧ್ಯಕ್ಷ ಮತ್ತು ಸಂಸದರಾದ ಶ್ರೀ. ಸದಾನಂದ ತನವಾಡೆ ಇವರ ಪ್ರಮುಖ ಉಪಸ್ಥಿತಿ ಇರಲಿದೆ.
ಈ ಸಮಾರಂಭದಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಡಾ. ಜಯಂತ ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಯಾಗಿರುವ ಶ್ರೀ ಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಅವರ ವಂದನೀಯ ಉಪಸ್ಥಿತಿಯೂ ಇರಲಿದೆ. ಈ ಕಾರ್ಯಕ್ರಮದಲ್ಲಿ ಅಮೃತ ಮಹೋತ್ಸವ ಸನ್ಮಾನ ನಿಮಿತ್ತ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಮಹಾರಾಜರ ಮಾರ್ಗದರ್ಶನವೆಂದರೆ ಗೋಮಾಂತಕರಿಗೆ ಅಮೂಲ್ಯ ಉತ್ಸವವೇ ಆಗಿದೆ. ಈ ಅಮೂಲ್ಯ ಕ್ಷಣದ ಸಾಕ್ಷಿದಾರರಾಗಲು ಗೋಮಾಂತಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರುವಂತೆ ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸ ಇವರು ಪಣಜಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕರೆ ನೀಡಿದರು.ಈ ಪತ್ರಿಕಾ ಗೋಷ್ಠಿಯಲ್ಲಿ `ಗೀತಾ ಪರಿವಾರದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ. ಸುಭಾಷ ನಾಯಿಕ ಮತ್ತು ` ಸನಾತನ ಸಂಸ್ಥೆಯ ಸೌ. ಶುಭಾ ಸಾವಂತ ಇವರು ಹಾಜರಿದ್ದರು.
ಶ್ರೀ. ರಾಜಹಂಸ ಅವರು ಸನಾತನ ಸಂಸ್ಥೆಯ ರಜತ ಮಹೋತ್ಸವದ ಕುರಿತು ಹೆಚ್ಚಿನ ಮಾಹಿತಿ ನೀಡುತ್ತಾ, ಸನಾತನ ಸಂಸ್ಥೆಯು ಆಧ್ಯಾತ್ಮಿಕ ಸಂಸ್ಥೆಯಾಗಿದೆ ಮತ್ತು ಅದರ ಎಲ್ಲಾ ಉಪಕ್ರಮಗಳು ಸಮಾಜದ ಆಧ್ಯಾತ್ಮಿಕ ಕಲ್ಯಾಣವನ್ನು ಸಾಧಿಸುವ ಗುರಿಯನ್ನು ಹೊಂದಿವೆ. ಸನಾತನ ಸಂಸ್ಥೆಯ 25 ವರ್ಷಗಳೆಂದರೆ ಸಮಾಜಕ್ಕೆ ಆಧ್ಯಾತ್ಮಿಕ ಸೇವೆಯ 25 ವರ್ಷಗಳಾಗಿವೆ. ಸನಾತನ ಧರ್ಮದಲ್ಲಿನ ಅಧ್ಯಾತ್ಮವು ವಿಜ್ಞಾನವೆಂದು ಅಂದರೆ ಆಧ್ಯಾತ್ಮ ಶಾಸ್ತ್ರವೆಂದು ಸ್ಥಾಪಿಸಲು ಸನಾತನ ಸಂಸ್ಥೆಯು ಮಹತ್ತರ ಕಾರ್ಯವನ್ನು ಮಾಡಿದೆ. ಅಧ್ಯಾತ್ಮ ಶಾಸ್ತ್ರದ ಮೇಲಿನ ಸನಾತನದ ಗ್ರಂಥಸAಪತ್ತು ಮತ್ತು ಸನಾತನ ಕಲಿಸುತ್ತಿರುವ `ಗುರುಕೃಪಾಯೋಗಾನುಸಾರ ಸಾಧನೆ ಯಿಂದಾಗಿ ಇಂದು 122 ಸಾಧಕರು ಸಂತರಾಗಿದ್ದು, 1 ಸಾವಿರಕ್ಕೂ ಹೆಚ್ಚು ಸಾಧಕರ ಪ್ರವಾಸವು ಸಂತತ್ವದ ಮಾರ್ಗದಲ್ಲಿ ಸಾಗುತ್ತಿದೆ. ಸನಾತನ ಸಂಸ್ಥೆಯ ಮಾರ್ಗದರ್ಶನದಿಂದಾಗಿ ಇಂದು ಸಹಸ್ರಾರು ಜನರು ಒತ್ತಡ ರಹಿತ, ವ್ಯಸನ ಮುಕ್ತ ಹಾಗೂ ಸಂತೋಷದ ಜೀವನ ನಡೆಸುತ್ತಿದ್ದಾರೆ. ರಜತ ಮಹೋತ್ಸವದ ಸಂದರ್ಭದಲ್ಲಿ ಸಂಸ್ಥೆಯು ಸಮಾಜದ ಎಲ್ಲಾ ವರ್ಗದವರಿಗೆ ಉಚಿತವಾಗಿ ಒತ್ತಡ ಮುಕ್ತ ಮತ್ತು ವ್ಯಸನ ಮುಕ್ತ ಜೀವನಕ್ಕಾಗಿ ಕಾರ್ಯಾಗಾರಗಳನ್ನು ಆಯೋಜಿಸಿದೆ. ಇಂತಹ ಸನಾತನ ಸಂಸ್ಥೆಯ ರಜತ ಮಹೋತ್ಸವ ಹಾಗೂ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಮಹಾರಾಜರ ಅಮೃತ ಮಹೋತ್ಸವ ಎಂದರೆ “ಹಾಲು ಸಕ್ಕರೆಯ ಮಧುರ ಸಂಯೋಗವೇ ಆಗಿದೆ.