Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ನ.30ರಂದು ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ : ದೇವರ ಬಲಿ, ಕಟ್ಟೆಪೂಜೆ, ಚಂದ್ರಮಂಡಲ ಹಾಗೂ ಕೆರೆ ಉತ್ಸವ – ಕಹಳೆ ನ್ಯೂಸ್

ಪುತ್ತೂರು : ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನ.30ರಂದು ( ನಾಳೆ) ಒಂದು ದಿನದ ಜಾತ್ರೆ ಲಕ್ಷದೀಪೋತ್ಸವ ನಡೆಯಲಿದೆ.
ದೀಪಾವಳಿಯಂದು ಬಲಿ ಪ್ರಾರಂಭವಾಗಿ ಹಸ್ತಾ ನಕ್ಷತ್ರ ಒದಗುವ ದಿನ ಪೊಕರೆ ಉತ್ಸವದ ಬಳಿಕ ಪ್ರತಿ ಸೋಮವಾರ ರಾತ್ರಿ ಉತ್ಸವ ಬಲಿಯಲ್ಲಿ ಉಡಿಕೆ, ಚೆಂಡೆ ಸುತ್ತು, ವರ‍್ಷಿಕ ಎಲ್ಲ ದೊಡ್ಡ ಉತ್ಸವಗಳು ಆರಂಭವಾಗಲಿದೆ.

ಕರ‍್ತಿಕ ಮಾಸದ ಅಮಾವಾಸ್ಯೆಯ ರಾತ್ರಿ ದೇವರ ಪೂಜೆ ಬಳಿಕ ದೇವರ ಬಲಿ ಹೊರಟು ದೇವರ ಒಳಾಂಗಣ ಮತ್ತು ಹೊರಾಂಗಣದಲ್ಲಿ ಉತ್ಸವ, ಕಟ್ಟೆಪೂಜೆ, ಚಂದ್ರಮಂಡಲ ಉತ್ಸವ, ಕೆರೆ ಉತ್ಸವ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು