ಡಿ.13ರಂದು ತೆರೆ ಮೇಲೆ ಮೂಡಿಬರಲಿರುವ ಬಹು ನಿರೀಕ್ಷಿತ “ದಸ್ಕತ್” ತುಳು ಚಲನಚಿತ್ರ – ಕಹಳೆ ನ್ಯೂಸ್
ಬೆಳ್ತಂಗಡಿ : ಮಾಜಿ ಸಚಿವರಾದ ಕೃಷ್ಣ ಜೆ.ಪಾಲೆಮಾರ್ ಅರ್ಪಿಸುವ ಸೆವೆಂಟಿ ಸೆವೆನ್ ಸ್ಟೂಡಿಯೋಸ್ ರಾಘವೇಂದ್ರ ಕುಡ್ವರವರ ನಿರ್ಮಾಣದ “ದಸ್ಕತ್” ತುಳು ಚಲನಚಿತ್ರದ ಚಿತ್ರೀಕರಣ ಸಂಪೂರ್ಣಗೊಂಡು ಡಿ.13ರಂದು ಚಿತ್ರಮಂದಿರದಲ್ಲಿ ಬಿಡುಗಡೆಗೊಳ್ಳಲಿದೆ.
ಕಾಮಿಡಿ ಕಿಲಾಡಿಗಳು ಖ್ಯಾತಿಯ ಅನೀಶ್ ಪೂಜಾರಿ ವೇಣೂರು ಅವರ ಚಿತ್ರದ ರಚನೆ ಮತ್ತು ನಿರ್ದೇಶನ ಮೂಡಿಬರಲಿರುವ ಈ ಚಿತ್ರದಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ ಪ್ರಜ್ಞೇಶ್ ಶೆಟ್ಟಿ, ಕಾರ್ಯ ನಿರ್ವಹಿಸಿದ್ದಾರೆ.
ಇನ್ನು ಸಂತೋμï ಆಚಾರ್ಯ ಗುಂಪಲಾಜೆಯವರ ಅದ್ಭುತ ಛಾಯಾಗ್ರಹಣವಿರುವ ದಸ್ಕತ್ ಚಿತ್ರಕ್ಕೆ ಗಣೇಶ್ ನೀರ್ಚಾಲ್ ರವರ ಸಂಕಲನವಿದ್ದು, ಮರ್ಥನ್ ಎಸ್ ರಾವ್ ಕಂಠದಾನ ಮಾಡಿದ್ದಾರೆ.
ಈ ವಿಭಿನ್ನ ಚಿತ್ರದಲ್ಲಿ ದೀಕ್ಷಿತ್ ಕೆ ಅಂಡಿಂಜೆ ,ಚಂದ್ರಹಾಸ್ ಉಲ್ಲಾಳ್, ಯುವ ಶೆಟ್ಟಿ , ಮೋಹನ್ ಶೇಣಿ, ದೀಪಕ್ ರೈ ಪಾಣಾಜೆ, ನೀರಜ್ ಕುಂಜರ್ಪ, ಮಿಥುನ್ ರಾಜ್, ತಿಮ್ಮಪ್ಪ ಕುಲಾಲ್, ಯೋಗಿಶ್ ಶೆಟ್ಟಿ ,ಚೇತನ್ ಪಿಲಾರ್ ಹೀಗೆ ಇನ್ನೂ ಅನೇಕ ತಾರಗಣವಿದೆ.
ನಾಯಕಿಯಾಗಿ ತುಳುನಾಡ ಬೆಡಗಿ ಭವ್ಯ ಪೂಜಾರಿಯವರು ಬಣ್ಣ ಹಚ್ಚಿದ್ದಾರೆ. ಚಲನಚಿತ್ರವು ಬೋಧಿ ಪೆÇ್ರೀಡಕ್ಷನ್ಸ್ ಸಹಯೋಗದೊಂದಿಗೆ ಮೂಡಿಬಂದಿದೆ. ತಂಡದಲ್ಲಿ ಸ್ಮಿತೇಶ್ ಬಾರ್ಯ, ವಿನೋದ್ ರಾಜ್ ಕಲ್ಮಂಜ, ನಿಶಿತ್ ಶೆಟ್ಟಿ, ದೀಕ್ಷಿತ್ ಧರ್ಮಸ್ಥಳ, ಮನೋಜ್ ಆನಂದ್ ಮುಂತಾದವರು ಕಾರ್ಯ ನಿರ್ವಹಿಸಿದ್ದಾರೆ.