Thursday, December 5, 2024
ಮೂಡಬಿದಿರೆಸುದ್ದಿ

ಎಕ್ಸಲೆಂಟ್ ಮೂಡುಬಿದಿರೆಯಲ್ಲಿ ಆಹಾರೋತ್ಸವ 2024-ಕಹಳೆ ನ್ಯೂಸ್

ಮೂಡುಬಿದಿರೆ: ಅಡುಗೆ ಮಾಡುವುದು ಒಂದು ಕಲೆ. ಇದು ವ್ಯಕ್ತಿತ್ವ ನರ‍್ಮಾಣದಲ್ಲಿ ಮಹತ್ತರ ಪಾತ್ರ ನಿರ್ವಹಿಸಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತದೆ. ನಾಯಕತ್ವ ಗುಣ ಸಹಬಾಳ್ವೆ, ಆರ್ಥಿಕ ಕೌಶಲ್ಯ, ಸಮಯಪರಿಪಾಲನೆಯ ಗುಣ ವೃದ್ಧಿಗೊಳ್ಳುತ್ತದೆ. ಎಂದು ಎಕ್ಸಲೆಂಟ್ ಸಂಸ್ಥೆಯ ಕರ‍್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್ ಹೇಳಿದರು. ಅವರು ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಕಾಮರ್ಸ್ ಎಸೋಷಿಯೇಷನ್ ಸಹಭಾಗಿತ್ವದಲ್ಲಿ ನಡೆದ ಆಹಾರೋತ್ಸವ 2024 ಉದ್ಘಾಟಿಸಿ ಮಾತಾಡಿದರು.
ಮುಖ್ಯ ತೀರ್ಪುಗಾರರಾದ ಬಿಗ್‌ಮಿಶ್ರಾ ಪೇಡದ ಮಾಲಕರಾದ ಶ್ರೀ ಪೃಥ್ವಿ ಜೈನ್ ಪ್ಲಾಸ್ಟಿಕ್ ರಹಿತ ಆಹಾರ ತಯಾರಿ, ಆರೋಗ್ಯಕ್ಕೆ ಪೂರಕವಾದ ಆಹಾರ ಪದಾರ್ಥಗಳನ್ನು ತಯಾರಿಸುವಲ್ಲಿ
ವಿದ್ಯಾರ್ಥಿಗಳ ಸೃಜನಶೀಲತೆ ಅವರ ಬದುಕನ್ನು ಕಟ್ಟಿಕೊಳ್ಳುವಲ್ಲಿ ಅವರಿಗೆ ನೆರವಾಗುತ್ತದೆ ಎಂದರು.

ಇದು ನಮಗೆ ಹೊಸ ಅನುಭವ ನಿಗದಿತ ಸಮಯದೊಳಗೆ ವಿವಿಧ ತಿಂಡಿ ತಿನಸುಗಳನ್ನು ಸಿದ್ಧಪಡಿಸುವುದು ನಿಜಕ್ಕೂ ಒಂದು ಸವಾಲು, ಇದರಿಂದ ಕುಟುಂಬ ನಿರ್ವಹಣೆಯಲ್ಲಿ ಅಮ್ಮನ ಪಾತ್ರ ಏನು ಎಂಬುವುದು ಮನವರಿಕೆಯಾಯಿತು ಎಂದು ಆಹಾರೋತ್ಸದಲ್ಲಿ ಭಾಗವಹಿಸಿದ ದ್ವೀತಿಯ ಪಿಯು ಕಾಮರ್ಸ್ ವಿದ್ಯಾರ್ಥಿ ಗೌರವ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವೇದಿಕೆಯಲ್ಲಿ ತೀರ್ಪುಗಾರರಾದ ಶ್ರೀಮತಿ ಶೈಲಶ್ರೀ ಬಾಲಾಜಿ ಹೋಟೆಲ್ ಪಡಿವಾಲ್ ಮೂಡಬಿದ್ರೆ, ಅಮೃತ್ ಪ್ರಭು ಸ್ಕೂಪ್ ಐಸ್‌ಕ್ರೀಂ ಪಾರ್ಲರ್ ಮೂಡಬಿದ್ರೆ, ಪ್ರಣಮ್ ಜೈನ್
ಅಮೂಲ್ ಐಸ್‌ಕ್ರೀಂ ಪಾರ್ಲರ್ ಮೂಡಬಿದ್ರೆ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕುಮಾರಿ ಲಿಖಿತಾ ಸ್ವಾಗತಿಸಿ ಕುಮಾರಿ ಸಮೀಕ್ಷಾ ವಂದಿಸಿದರು. ಪ್ರತಿಜ್ಞಾ ಜೈನ್ ನಿರೂಪಿಸಿದರು.