Sunday, January 19, 2025
ಉಡುಪಿಸುದ್ದಿ

ಡಿ.1ರಿಂದ ನಗರಸಭೆ ಕುಡಿಯುವ ನೀರಿನ ದರದಲ್ಲಿ ಶೇ. 18 ರಿಂದ ಶೇ. 25 ರ ವರೆಗೆ ಕಡಿತ ಜಾರಿ : ಯಶ್ ಪಾಲ್ ಸುವರ್ಣ-ಕಹಳೆ ನ್ಯೂಸ್

ಉಡುಪಿ : ನಗರಸಭೆ ಗೃಹ ಬಳಕೆ , ವಾಣಿಜ್ಯ, ಕೈಗಾರಿಕಾ ಸಂಪರ್ಕದ ಕುಡಿಯುವ ನೀರಿನ ದರದಲ್ಲಿ ಕಡಿತಗೊಳಿಸಲಾಗಿದ್ದು, ಡಿ.1 ರಿಂದ ಜಾರಿಯಾಗಲಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಹಾಗೂ ನಗರಸಭೆ ಅಧ್ಯಕ್ಷರಾದ ಶ್ರೀ ಪ್ರಭಾಕರ ಪೂಜಾರಿ ತಿಳಿಸಿದ್ದಾರೆ.

ನಗರಸಭೆ ಆಡಳಿತಾಧಿಕಾರಿ ಅವಧಿಯಲ್ಲಿ ಅವೈಜ್ಞಾನಿಕ ಕುಡಿಯುವ ನೀರಿನ ದರ ಏರಿಕೆಯಿಂದ ಸಾರ್ವಜನಿಕರಿಗೆ ಆರ್ಥಿಕ ಹೊರೆಯಾಗಿರುವ ಹಿನ್ನಲೆಯಲ್ಲಿ ಉಡುಪಿ ಜನತೆಯ ಹಿತದೃಷ್ಟಿಯಿಂದ ಗೃಹ ಬಳಕೆಯ ಸಂಪರ್ಕಕ್ಕೆ ನೀರಿನ ಬಳಕೆಗೆ ಅನುಗುಣವಾಗಿ ಶೇ. 18 ರಿಂದ ಶೇ. 25 ರವರೆಗೂ ದರ ಕಡಿತ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನಗರ ಸಭೆಯ ಕುಡಿಯುವ ನೀರಿನ ಸಂಪರ್ಕದ ಗೃಹ ಬಳಕೆಯ ಮಾಸಿಕ ಕನಿಷ್ಠ ದರವನ್ನು 88 ರೂಪಾಯಿಗಳಿಂದ 72 ರೂ. ಗಳಿಗೆ ಇಳಿಸಲಾಗಿದೆ. 8000 ಲೀಟರ್ ವರೆಗಿನ ಬಳಕೆಗೆ ಪ್ರತಿ ಸಾವಿರ ಲೀಟರ್ ಗೆ ರೂಪಾಯಿ 11 ರಿಂದ 9 ಕ್ಕೆ, 15 ಸಾವಿರದ ವರೆಗೆ ದರವನ್ನು ರೂ 15 ರಿಂದ 12 ಮತ್ತು 25,000 ವರೆಗಿನ ದರವನ್ನು ರೂ 20 ರಿಂದ 15 ಕ್ಕೆ ಇಳಿಸಲಾಗಿದೆ. ವಾಣಿಜ್ಯ ಮತ್ತು ಕೈಗಾರಿಕಾ ಸಂಪರ್ಕದ ಬಳಕೆ ಶುಲ್ಕಗಳಲ್ಲೂ ಇಳಿಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.