Wednesday, December 4, 2024
ಬೆಂಗಳೂರುಸಿನಿಮಾಸುದ್ದಿ

ಆತ್ಮಹತ್ಯೆಗೆ ಯತ್ನಿಸಿದ ‘ಕಲ್ಟ್’ ಚಿತ್ರದ ಟೆಕ್ನಿಷಿಯನ್ : ಸಚಿವ ಜಮೀರ್ ಅಹ್ಮದ್ ಪುತ್ರ ಜೈದ್ ಖಾನ್ ವಿರುದ್ಧ ಗಂಭೀರ ಆರೋಪ-ಕಹಳೆ ನ್ಯೂಸ್

ಬೆಂಗಳೂರು : ಸಚಿವ ಜಮೀರ್ ಅಹ್ಮದ್ ಪುತ್ರ ಜೈದ್ ಖಾನ್ ನಟಿಸಿ, ನಿರ್ಮಿಸುತ್ತಿರುವ ‘ಕಲ್ಟ್’ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ಈ ಚಿತ್ರದ ಟೆಕ್ನಿಷಿಯನ್ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದು, ಜೈದ್ ಖಾನ್ ಸೇರಿದಂತೆ ಚಿತ್ರತಂಡದ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಕಲ್ಟ್ ಸಿನಿಮಾದ ಡ್ರೋನ್ ಉಸ್ತುವಾರಿಯನ್ನು ಸಂತೋಷ್ ಎಂಬವರು ವಹಿಸಿಕೊಂಡಿದ್ದರು. ಚಿತ್ರತಂಡದ ತಪ್ಪಿನಿಂದಾಗಿ ಇದೀಗ ಆತ್ಮಹ*ತ್ಯೆಗೆ ಯತ್ನಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾರ್ಟಿನ್, ಯುವ ಚಿತ್ರಗಳಿಗೆ ಕೆಲಸ ಮಾಡಿರುವ ಸಂತೋಷ್ ದಿನಕ್ಕೆ 25 ಸಾವಿರ ರೂಪಾಯಿ ನಿಗದಿ ಮಾಡಿ ಕಲ್ಟ್ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ನ.25ರಂದು ಚಿತ್ರದುರ್ಗದಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಶೂಟಿಂಗ್ ಸಂದರ್ಭ ವಿಂಡ್ ಫ್ಯಾನ್‌ಗೆ ಟಚ್ ಆಗಿ ಡ್ರೋನ್ ತುಂಡಾಗಿತ್ತು. ಆದರೆ, ಚಿತ್ರತಂಡ ನಷ್ಟ ತುಂಬಿಸಿಲ್ಲ ಎಂಬುದು ಸಂತೋಷ್ ಆರೋಪ.

ಜಾಹೀರಾತು
ಜಾಹೀರಾತು
ಜಾಹೀರಾತು

ಚಿತ್ರತಂಡದ ಬಳಿ ಕೇಳಿದರೂ ಪ್ರಯೋಜನವಾಗಿಲ್ಲ. ನಷ್ಟ ಪರಿಹಾರ ನೀಡದೆ ಒಂದುವರೆ ಲಕ್ಷ ರೂಪಾಯಿ ಬೆಲೆಯ ಮೆಮೊರಿ ಕಾರ್ಡ್ ಕಿತ್ತುಕೊಂಡಿರುವ ಆರೋಪ ಕೇಳಿ ಬಂದಿದೆ. ಇದರಿಂದ ಸಂತೋಷ್ ಆತ್ಮಹ*ತ್ಯೆಗೆ ಯತ್ನಿಸಿದ್ದಾರೆ. ಸದ್ಯ ಸಂತೋಷ್ ಸಹೋದರಿ ಮಾಗಡಿ ರೋಡ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.