ಮಲ್ಲಿಗೆಪ್ರಿಯೆ ಬಲ್ನಾಡು ಶ್ರೀ ಉಳ್ಳಾಲ್ತಿ ತಾಯಿಗೆ ಸ್ವರ್ಣದ ಮಲ್ಲಿಗೆ ಮೊಗ್ಗಿನ ಹಾರ, ರಜತ ಗಗ್ಗರ ಸಮರ್ಪಿಸುವ ಭಕ್ತಾದಿಗಳಿಗೊಂದು ಸುವರ್ಣಾವಕಾಶ-ಕಹಳೆ ನ್ಯೂಸ್
ಪುತ್ತೂರು: ಪುತ್ತೂರು ಸೀಮೆಯ ಕಾರ್ಣಿಕ ಲಕ್ಷಾಂತರ ಭಕ್ತರ ಭಕ್ತಿಯ ಕೇಂದ್ರ ಬಲ್ನಾಡಿನ ಶ್ರೀ ದಂಡನಾಯಕ ಉಳ್ಳಾಲ್ತಿ ಅಮ್ಮನಿಗೆ ನೂತನ ದೈವಸ್ಥಾನವನ್ನು ಕೆಲವರ್ಷಗಳ ಹಿಂದೆ ಊರ ಪರವೂರ
ಭಕ್ತಾದಿಗಳ ಸರ್ವ ಸಹಕಾರರಿಂದ ನಿರ್ಮಿಸಲಾಗಿತ್ತು.
ಅಮ್ಮನಿಗೆ ಬೆಳ್ಳಿಯ ಪಲ್ಲಕ್ಕಿಯನ್ನೂ ಸಮರ್ಪಿಸಲಾಗಿದ್ದು, ವಾರ್ಷಿಕ ನೇಮ ನಡೆಯುವ ವೇಳೆ ಬಂಗಾರದ ಮುಗುಳ ಮಲ್ಲಿಗೆಯನ್ನು 2013ರಲ್ಲಿ ಶ್ಯಾರ ಮನೆತನದವರು ಶ್ರೀ ಉಳ್ಳಾಲ್ತಿ ತಾಯಿಗೆ ಸುಮಾರು 1/4ಕೆ.ಜಿ ಚಿನ್ನದ ಕರಿಮಣಿ ಸರವನ್ನು ಸಮರ್ಪಣೆ ಮಾಡಿದ್ದರು. ಇದೀಗ ತಾಯಿಗೆ ಸ್ವರ್ಣದ ಮಲ್ಲಿಗೆ ಮೊಗ್ಗಿನ ಹಾರ ಮತ್ತು ರಜತ ಗಗ್ಗರವನ್ನು ಸಮರ್ಪಿಸಲಿಚ್ಚಿಸುವ ಭಕ್ತಾದಿಗಳಿಗೆ ಒಂದು ಸುವರ್ಣಾವಕಾಶವಿದ್ದು, ಇದೇ ಬರುವ 2025 ರ ಏ.28 ರಂದು ಸೀಮೆಯ ಭಕ್ತಾದಿಗಳು ಸೇರಿ ತಾಯಿಗೆ ಸ್ವರ್ಣದ ಮಲ್ಲಿಗೆ ಮೊಗ್ಗಿನ ಹಾರ ಮತ್ತು ರಜತ ಗಗ್ಗರವನ್ನು ಸಮರ್ಪಿಸಬಹುದು.
ಈ ಪುಣ್ಯಕಾರ್ಯಕ್ರಮಕ್ಕೆ ಚಿನ್ನ,ಬೆಳ್ಳಿ ಹಾಗೂ ಧನರೂಪದ ಸಹಕಾರವನ್ನು ನೀಡಿ ನಮ್ಮೆಲ್ಲರ ಜೀವಮಾನದ ಅಪೂರ್ವ ಅವಕಾಶದಲ್ಲಿ ತಾವೆಲ್ಲರೂ ಶಕ್ತ್ಯಾನುಸಾರ ಸೇವೆ ಸಲ್ಲಿಸಿ ಕೃತಾರ್ಥರಾಗಿ ಎಂದು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಪ್ರಧಾನ ಅರ್ಚಕರು ಊರ ಹತ್ತು ಸಮಸ್ತರು ವಿನಂತಿಸಿ ಕೊಂಡಿದ್ದಾರೆ.
ಇನ್ನು ಈ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಚನಿಲ ತಿಮ್ಮಪ್ಪ ಶೆಟ್ಟಿ-9448869132, ರವಿಕೃಷ್ಣಭಟ್ ಕಲ್ಲಾಜೆ-7892857156, ಸಂತೋಷ್(ಆಶಾ ಜ್ಯುವೆಲ್ಲರ್ಸ್) 7892817872, ಲೋಕೇಶ್ ಆಚಾರ್ಯ ಬಿರುಮಲೆ 9900970284, ಭಾನುಪ್ರಕಾಶ್ ಕೋರ್ಟ್ ರೋಡ್ 9980881312, ಜಗದೀಶ್ ಆಚಾರ್ಯ (ಹಾರ್ದಿಕ್ ಡೈವರ್ಕ್ಸ್ ಕೋರ್ಟ್ ರೋಡ್ 9844475793 ಇವರನ್ನು ಸಂಪರ್ಕಿಸಿ.