Sunday, January 19, 2025
ಸುದ್ದಿ

ದೇಶದ ವಿವಿಧ ರಾಜ್ಯಗಳಲ್ಲಿ ವಿಸ್ತಾರಗೊಳ್ಳುತ್ತಿರುವ ಪಟ್ಲ ಫೌಂಡೇಶನ್ !

ಮಂಗಳೂರು : ಕರಾವಳಿಯ ಗಂಡುಕಲೆಯಾಗಿರುವ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕಲಾವಿದರು (ತೆಂಕು,ಬಡಗು ಮತ್ತು ಬಡಾಬಡಗು) ಅಶಕ್ತತೆಗೆ ಒಳಗಾದಾಗ ಅವರ ಬಾಳಿಗೆ ಬೆಳಕಾಗಿ ಬಂದ ಟ್ರಸ್ಟೇ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು

ಟ್ರಸ್ಟ್ ಸ್ಥಾಪನೆಯಾದಾಗಿನಿಂದ ಈವರೆಗಿನ ಸೇವಾ- ಕಾರ್ಯಚಟುವಟಿಕೆಗಳ ವಿವರಗಳು ಹಾಗೂ ಮುಂದೆ ಹಮ್ಮಿಕೊಂಡಿರುವ ಕಾರ್ಯಯೋಜನೆಗಳು ಈಗಾಗಲೇ ಸಾರ್ವಜನಿಕವಾಗಿ ಜನಜನಿತವಾಗಿದೆ. ಪ್ರಾರಂಭದಲ್ಲಿ ಟ್ರಸ್ಟ್ ಕರಾವಳಿಯ ಕೇಂದ್ರ ಬಿಂಧುವಾಗಿ ಮಂಗಳೂರಿನಲ್ಲಿ ಉದಯಿಸಿ, ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರು ಒಳಗೊಂಡಂತೆ ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಟ್ರಸ್ಟ್ ಘಟಕಗಳು ಸ್ಥಾಪನೆಯಾದವು,ತದನಂತರ ಮಹಾರಾಷ್ಟ್ರದ ಮುಂಬಯಿ ಮತ್ತು ಪೂನಾದಲ್ಲಿ,ತದನಂತರ ದೇಶದ ರಾಜಧಾನಿ ದೆಹಲಿಯಲ್ಲಿ, ಆ ನಂತರ ಕೇರಳ ರಾಜ್ಯದ ಕುಂಬ್ಳೆ ಮತ್ತು ಉಪ್ಪಳದಲ್ಲಿ ಘಟಕಗಳು ಸ್ಥಾಪನೆಯಾಗಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ.
ಇದೀಗ ಮಹಾತ್ಮ ಗಾಂಧಿ ಹುಟ್ಟೂರು ರಾಜ್ಯವಾದ ಗುಜರಾತಿನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ನೂತನ ಘಟಕದ ಉದ್ಘಾಟನೆಯು ನವಂಬರ್ 2 ರಂದು ಬರೋಡಾದಲ್ಲಿ ಜರಗಲಿರುವುದು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಯಕ್ಷಧ್ರುವದ ಬಗ್ಗೆ ಪಟ್ಲರು ಹೇಳಿದಿಷ್ಟು :

ಹತ್ತಾರು ವರ್ಷಗಳ ಕಲಾ ಯಕ್ಷಗಾನ ಕಲಾವಿದ ಮೇಳದಲ್ಲಿ ದುಡಿಯುತ್ತಾನೆ, ಆದರೆ ಆತ ಅನಾರೋಗ್ಯದಿಂದ ಅಥವಾ ಅಕಾಲಿಕ ಸವಿಗೀಡಾದ ಸಂದರ್ಭದಲ್ಲಿ ಅವನ ಕುಟುಂಬದ ಕತೆ ಏನು ? ಅಲ್ಲದೇ ಜೀವನ ಪೂರ್ತಿ ಯಕ್ಷಗಾನ ರಂಗದಲ್ಲಿ ಸೇವೆ ಸಲ್ಲಿಸಿದ ಕಲಾವಿದನ ಜೀವಿತದ ಕೊನೆಗಾಲದಲ್ಲಿ ಅವನ ಸ್ಥಿತಿ ಏನು ? ಇವೆಲ್ಲದಕ್ಕೂ ಶಾಶ್ವತ ಪರಿಹಾರ ಒದಗಿಸುವ ದೃಷ್ಟಿಯಿಂದ, ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಹುಟ್ಟಿಕೊಂಡದ್ದು ಈ ಯಕ್ಷಧ್ರುವ ಫೌಂಡೇಷನ್. ಈ ಟ್ರಸ್ಟ್ ಕೇವಲ ಪಟ್ಲರದಲ್ಲ ಇದು ಇಡೀ ಯಕ್ಷಗಾನ ಕುಟುಂಬದ್ದು. ಇಲ್ಲ ನಾನು ನಿಮಿತ್ತ ಮಾತ್ರ, ಎಲ್ಲವೂ ಕಲಾಭಿಮಾನಿಗಳಿಂದ ಕಲಾವಿದರಿಗೋಸ್ಕರ, ಹನಿ ಗುಡಿ ಹಳ್ಳ ಎಂಬಂತೆ ಹತ್ತಾರು ಕೈಗಳು ಸೇರಿ ಈ ಯಕ್ಷಧ್ರುವ ಫೌಂಡೇಷನ್, ನಿಮ್ಮೆಲ್ಲರ ಸಹಕಾರ ಮತ್ತು ಆಶೀರ್ವಾದ ಯಾವತ್ತೂ ನಮ್ಮ ಮೇಲಿರಲಿ. ಯಕ್ಷಗಾನ ಶ್ರೀಮಂತ ಕಲೆ ಆದರೆ, ಕಲಾವಿದರು ಬಡವರು. ಪ್ರತಿಯೊಬ್ಬ ಕಲಾವಿದನೂ ತನ್ನ ಸ್ವಂತ ಕಾಲಿನ ಮೇಲೆ ನಿಂತು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತ್ತಾಗಬೇಕು. ಕಲಾವಿದರಿಗೆ ಎಲ್ಲೆಡೆ ಮಾನ್ಯತೆ ದೊರಕಬೇಕು. ಯಕ್ಷಗಾನ ವಿಶ್ವದಾದ್ಯಂತ ಬೆಳಗಬೇಕು.

Leave a Response