Recent Posts

Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಅಕ್ಷಯ ಕಾಲೇಜಿನಲ್ಲಿ ಪ್ರಿನ್ಸ್ ಆ್ಯಂಡ್ ಪ್ರಿನ್ಸೆಸ್ ಪುತ್ತೂರು ಫ್ಯಾಷನ್ ಶೋ ಅಡಿಷನ್ ಉದ್ಘಾಟನೆ-ಕಹಳೆ ನ್ಯೂಸ್

ಪುತ್ತೂರು: ಅಕ್ಷಯ ಎಜ್ಯುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ನಡಿಯಲ್ಲಿ ಸಂಪ್ಯದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಕಾಲೇಜಿನ ಫ್ಯಾಷನ್ ಡಿಸೈನ್ ವಿಭಾಗ `ಫಸೇರಾ ಹಾಗೂ ಸಾಂಸ್ಕೃತಿಕ ಲಲಿತಾ ಕಲಾ ಸಂಘದ ವತಿಯಿಂದ ಪ್ರಿನ್ಸ್ ಆ್ಯಂಡ್ ಪ್ರಿನ್ಸೆಸ್ ಪುತ್ತೂರು ಫ್ಯಾಷನ್ ಶೋ ಅಡಿಷನ್ ಕಾರ್ಯಕ್ರಮದ ಉದ್ಘಾಟನೆಯು ಕಾಲೇಜಿನ ಸಭಾಭವನದಲ್ಲಿ ನೆರವೇರಿತು.

ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಮಾಜಿ ಅಧ್ಯಕ್ಷ ಹಾಗೂ ಬನ್ನೂರು ಎ.ವಿ.ಜಿ ಸ್ಕೂಲ್ ಇದರ ಸಂಚಾಲಕ ವೆಂಕಟ್ರಮಣ ಗೌಡ ಕಳುವಾಜೆರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಕನಸು ಕಾಣಬೇಕು. ಆದರೆ ಆ ಕನಸು ನಿದ್ರಾಸ್ಥಿತಿಯಲ್ಲಿದ್ದಾಗ ಇರದೆ ಎಚ್ಚರದಲ್ಲಿದ್ದಾಗ ಆಗಬೇಕು. ಇದಕ್ಕೆ ಉತ್ತಮ ಉದಾಹರಣೆ ಜಯಂತ್ ನಡುಬೈಲುರವರು. ಯಾಕೆಂದರೆ ಅವರು ಜೀವನದಲ್ಲಿ ಮೇಲೆ ಬರಬೇಕೆಂದು ಕನಸು ಕಂಡವರು. ಪುತ್ತೂರಿನಲ್ಲಿ ಅಕ್ಷಯ ಕಾಲೇಜು ಪ್ರಥಮ ಬಾರಿಗೆ ಫ್ಯಾಷನ್ ಡಿಸೈನ್ ಕಾಲೇಜು ಆರಂಭಿಸಿದ್ದು, ಇಂದು ಇದೇ ಕಾಲೇಜಿನಲ್ಲಿ ಫ್ಯಾಷನ್ ಶೋ ಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಧ್ಯಕ್ಷತೆ ವಹಿಸಿದ ಅಕ್ಷಯ ಕಾಲೇಜು ಚೇರ್‌ಮ್ಯಾನ್ ಜಯಂತ್ ನಡುಬೈಲು ಮಾತನಾಡಿ, ಕಳೆದ ನಾಲ್ಕೆöÊದು ವರ್ಷದಿಂದ ಫ್ಯಾಷನ್ ಡಿಸೈನ್ ಕೋರ್ಸ್ ಅಕ್ಷಯ ಕಾಲೇಜಿನಲ್ಲಿ ಆರಂಭಿಸಿದ್ದೇವೆ. ಹದಿನೆಂಟು ವರ್ಷದೊಳಗಿನ ಮಕ್ಕಳ ಪ್ರತಿಭೆಯನ್ನು ಗುರುತಿಸುವ ನಿಟ್ಟಿನಲ್ಲಿ ಪ್ರಥಮ ಹೆಜ್ಜೆಯಾಗಿ ಪುತ್ತೂರಿನಲ್ಲಿ ತಾಲೂಕು ಮಟ್ಟದ ಫ್ಯಾಷನ್ ಶೋ ಸ್ಪರ್ಧೆಯನ್ನು ಮಾಡುತ್ತಿದ್ದೇವೆ. ಫ್ಯಾಷನ್ ಡಿಸೈನ್ ಕೋರ್ಸ್ನಲ್ಲಿ ಸಾರ್ವಜನಕರಿಗೆ ಗೊಂದಲವಿದೆ. ಮಕ್ಕಳ ಮನಸ್ಸಿನಲ್ಲಿ ಕೀಳೀರಿಮೆಯನ್ನು ಹೋಗಲಾಡಿಸುವುದೇ ಕಾರ್ಯಕ್ರಮದ ಉದ್ಧೇಶವಾಗಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

೩ ವಿಭಾಗಗಳಲ್ಲಿ ಸ್ಪರ್ಧೆ:
ವಯಸ್ಸು ೬ರಿಂದ ೧೦ರ ವರೆಗೆ, ವಯಸ್ಸು ೧೧ರಿಂದ ೧೪ರ ವರೆಗೆ ಹಾಗೂ ವಯಸ್ಸು ೧೫ರಿಂದ ೧೮ರ ವರೆಗೆ ಹೀಗೆ ಸ್ಪರ್ಧೆಯನ್ನು ಮೂರು ವಿಭಾಗಗಳನ್ನಾಗಿ ಸಂಯೋಜಿಸಲಾಗಿತ್ತು. ಪ್ರಥಮ ಆಡಿಷನ್ ಸ್ಪರ್ಧೆಯಲ್ಲಿ ತಲಾ ೨೦ ವಿದ್ಯಾರ್ಥಿಗಳಂತೆ ವಿಂಗಡಿಸಲಾಗಿ ಸ್ಪರ್ಧಿಸುವ ಅವಕಾಶ ನೀಡಲಾಗಿತ್ತು. ಈ ಪ್ರಥಮ ಆಡಿಷನ್ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ `ಎಕ್ಸಲೆಂಟ್ ಫರ್ಫಾಮೆನ್ಸ್ ಫ್ಯಾಷನ್ ಶೋ ಪ್ರಮಾಣಪತ್ರವನ್ನು ವಿತರಿಸಲಾಯಿತು.

ಕಾಲೇಜು ಪ್ರಾಂಶುಪಾಲ ಸಂಪತ್ ಕೆ.ಪಕ್ಕಳರವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಹಾಗೂ ಕಾರ್ಯಕ್ರಮದ ಸಂಯೋಜಕ ಕಿಶನ್ ಎನ್.ರಾವ್ ಸ್ವಾಗತಿಸಿದರು. ವಿದ್ಯಾರ್ಥಿನಿ ಪ್ರಕೃತಿ ಪ್ರಾರ್ಥಿಸಿದರು. ಕಾಲೇಜು ಉಪ ಪ್ರಾಂಶುಪಾಲ ರಕ್ಷಣ್ ಟಿ.ಆರ್, ಫ್ಯಾಷನ್ ಡಿಸೈನ್ ವಿಭಾಗದ ಫಸೇರಾ ಅಧ್ಯಕ್ಷೆ ದೀಕ್ಷಾ, ಕಾರ್ಯದರ್ಶಿ ನವಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಕಾಲೇಜಿನ ಗ್ರಂಥಪಾಲಕಿ ಶ್ರೀಮತಿ ಪ್ರಭಾವತಿ, ದೀಪ್ತಿ, ಫ್ಯಾಶನ್ ಡಿಸೈನ್ವಿ ಭಾಗದ ಮುಖ್ಯಸ್ಥೆ ಅನುಷಾ, ಅಕ್ಷಯ ಕಾಲೇಜಿನ ಹಿರಿಯ ಫ್ಯಾಶನ್ ಡಿಸೈನ್ ವಿದ್ಯಾರ್ಥಿನಿ ಧನ್ಯಶ್ರೀರವರು ಭಾಗವಹಿಸಿದರು. ಉಪನ್ಯಾಸಕಿ ರಶ್ಮಿ ಹಾಗೂ ಫ್ಯಾಷನ್ ಡಿಸೈನ್ ವಿದ್ಯಾರ್ಥಿನಿ ಧನ್ಯಶ್ರೀ ಕಾರ್ಯಕ್ರಮ ನಿರ್ವಹಿಸಿದರು.

ಬಾಕ್ಸ್
೨೦೦ಕ್ಕೂ ಮಿಕ್ಕಿ ಸ್ಪರ್ಧಿಗಳು..
ಇದೇ ಮೊದಲ ಬಾರಿಗೆ ಅಕ್ಷಯ ಕಾಲೇಜು ಆಯೋಜಿಸುತ್ತಿರುವ ಪ್ರಿನ್ಸ್ ಆ್ಯಂಡ್ ಪ್ರಿನ್ಸೆಸ್ ಪುತ್ತೂರು ಫ್ಯಾಷನ್ ಶೋ ಕಾರ್ಯಕ್ರಮದ ಹೆಸರು ನೋಂದಣಿಗೆ ನ.೨೭ ರಂದು ಗಡುವನ್ನು ನೀಡಲಾಗಿತ್ತು. ಪುತ್ತೂರು, ಮಂಗಳೂರು, ಸುಳ್ಯ, ಸುರತ್ಕಲ್ಹೀ ಗೆ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ವಿವಿಧ ಭಾಗಗಳಿಂದ ಸುಮಾರು ೨೦೦ಕ್ಕೂ ಮಿಕ್ಕಿ ಸ್ಪರ್ಧಾಳುಗಳು ಹೆಸರನ್ನು ನೋಂದಾಯಿಸಿದ್ದರು.

ದ್ವಿತೀಯ ಆಡಿಷನ್‌ನಲ್ಲಿ ವಿಜೇತರ ಅನೌನ್ಸ್..
ಪ್ರಥಮ ಆಡಿಷನ್‌ನಲ್ಲಿ ಸುಮಾರು ೨೦೦ಕ್ಕೂ ಮಿಕ್ಕಿ ಸ್ಪರ್ಧಿಗಳು ಭಾಗವಹಿಸಿದ್ದು, ಮೂರು ವಿಭಾಗಗಳನ್ನಾಗಿ ಮಾಡಲಾಗಿತ್ತು. ಈ ಮೂರು ವಿಭಾಗಗಳಲ್ಲಿ ಉತ್ತಮ ಪ್ರದರ್ಶನಗೈಯ್ದ ತಲಾ ೨೦ ವಿದ್ಯಾರ್ಥಿಗಳನ್ನು ಮುಂದಿನ ಎರಡನೇ ಪ್ರಶಸ್ತಿ ಸುತ್ತಿಗೆ ಆಯ್ಕೆ ಮಾಡಲಾಗುತ್ತದೆ. ಈ ಎರಡನೇ ಪ್ರಶಸ್ತಿ ಸುತ್ತಿನ ಕಾರ್ಯಕ್ರಮದಲ್ಲಿ ಆಯಾ ವಿಭಾಗದಲ್ಲಿ ಯಾರು ಉತ್ತಮ ಪ್ರದರ್ಶನ ನೀಡುತ್ತಾರೋ ಅವರಿಗೆ ಪ್ರಿನ್ಸ್ ಆ್ಯಂಡ್ ಪ್ರಿನ್ಸೆಸ್ ಪ್ರಶಸ್ತಿಯನ್ನು ಅನೌನ್ಸ್ ಮಾಡಲಾಗುತ್ತದೆ. ದ್ವಿತೀಯ ಸುತ್ತಿನ ಆಡಿಷನ್ಕಾ ರ್ಯಕ್ರಮದ ದಿನಾಂಕವನ್ನು ಸಂಘಟಕರು ಇನ್ನಷ್ಟೇ ಸೂಚಿಸಬೇಕಾಗಿದೆ. ಈ ಕಾರ್ಯಕ್ರಮವನ್ನು ಕಾಲೇಜಿನ ಫ್ಯಾಶನ್ಡಿ ಸೈನ್ ವಿಭಾಗದ ೧೦೮ ವಿದ್ಯಾರ್ಥಿ/ವಿದ್ಯಾರ್ಥಿನಿಯರು, ಉಪನ್ಯಾಸಕರು ಯಶಸ್ವಿಯಾಗಿ ಸಂಘಟಿಸಿದ್ದರು.