Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಸ್ವರ ಸಿಂಚನ ಸಂಗೀತೋತ್ಸವ -2024 ರಲ್ಲಿ ಕುಮಾರ್ ಪೆರ್ನಾಜೆ ಸೌಮ್ಯ ಪೆರ್ನಾಜೆ ದಂಪತಿಗಳಿಗೆ ಗೌರವ ಪುರಸ್ಕಾರ-ಕಹಳೆ ನ್ಯೂಸ್

ಪೆರ್ನಾಜೆ: ಸಂಗೀತ ಶಾಲೆ ವಿಟ್ಲ ,ಪಡಿಬಾಗಿಲು ಹಾಗೂ ಕೋಡಂದೂರು ಶಾಖೆಯ ವಿದ್ಯಾರ್ಥಿಗಳಿಂದ ಸಂಗೀತೋತ್ಸವ ಸಮಾರಂಭವು ಡಿ.1ರಂದು ಸಭಾಭವನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಭಕ್ತಿಗಾನ ಸಂಗೀತ ಕಾರ್ಯಕ್ರಮವು ವಿದ್ಯಾರ್ಥಿಗಳಿಂದ ವೈವಿಧ್ಯಮಯವಾಗಿ ನಡೆಯಿತು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಪುರಸ್ಕೃತ ಕುಮಾರ್ ಪೆರ್ನಾಜೆ ಸೌಮ್ಯ ಪೆರ್ನಾಜೆ ದಂಪತಿಗಳಿಗೆ ಕಲಾ ನಿರ್ದೇಶಕರು ಕಲಾ ಪೋಷಕರು ಸಂಶೋಧಕರು ಜೇನು ಗಡ್ಡ ಹವ್ಯಾಸಿ ಪತ್ರಕರ್ತರು ವಿಶೇಷ ಬರಹಗಳಿಂದ ಗಮನ ಸೆಳೆದ ಇವರನ್ನು ಸ್ವರ ಸಿಂಚನ ಸಂಗೀತ ಶಾಲೆಯ ಶಿಕ್ಷಕಿ ಸವಿತಾ ಕೋಡಂದೂರ್ ಮತ್ತು ರಘುರಾಮ ಶಾಸ್ತ್ರಿ ಕೊಡಂದೂರ್ ಶಾಲು ಹೊದಿಸಿ ಸ್ಮರಣಿಕೆಯನ್ನಿತ್ತು. ಗೌರವಿಸಿದರು ವೇದಿಕೆಯಲ್ಲಿ ಗೋಪಾಲಕೃಷ್ಣ ನಾಯಕ್ ಪಡಿಬಾಗಿಲು , ವಿದ್ವಾನ್ ಡಾ . ಎ ಆರ್ ನಾರಾಯಣ ಪ್ರಕಾಶ್ ಕ್ಯಾಲಿಕಟ್ ,ವಿದ್ವಾನ್ ಕೊಂಡಪಪಳ್ಳಿ ಗೋಪ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು .
ಪದ್ಮರಾಜ ಚಾರ್ಮಾಕ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು