ಪುತ್ತೂರು: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಗ್ರಾಹಕ ಸಂಘದ ವತಿಯಿಂದ ಗ್ರಾಹಕರಾಗಿ ನಾವು ಎದುರಿಸುವಂತಹ ಮೋಸ, ವಂಚನೆಗಳ ಅರಿವು ಮತ್ತು ನಮ್ಮ ಹಕ್ಕುಗಳ ಸದುಪಯೋಗವಾಗಬೇಕು ಎನ್ನುವ ಉದ್ದೇಶದಿಂದ ಸತತವಾಗಿ ಮೂರು ದಿನಗಳ ಗ್ರಾಹಕ ಹಕ್ಕು ಮತ್ತು ರಕ್ಷಣೆಯ ಕುರಿತ ಮಾಹಿತಿ ಕಾರ್ಯಾಗಾರವು ಇತ್ತೀಚೆಗೆ ಯಶಸ್ವಿಯಾಗಿ ನೆರವೇರಿತು.
ವಿದ್ಯಾರ್ಥಿಗಳು ಮೂರು ತಂಡಗಳಾಗಿ ಮೂರು ಸರಕಾರಿ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳಿಗೆ ಹಲವಾರು ಚಟುವಟಿಕೆಗಳ ಮೂಲಕ ಹೊಸ ರೀತಿಯಲ್ಲಿ ಅರಿವನ್ನು ಮೂಡಿಸಿದರು. ಮೊದಲನೇ ದಿನ ಸ. ಹಿ. ಪ್ರಾ. ಶಾಲೆ ಮುಕ್ವೆ, ಎರಡನೇ ದಿನ ಸ. ಹಿ. ಪ್ರಾ. ಶಾಲೆ ತಿಂಗಳಾಡಿ ಹಾಗೂ ಮೂರನೇ ದಿನ ಸ. ಹಿ. ಪ್ರಾ. ಶಾಲೆ ಸವಣೂರು ಮೊಗರು ಸರಕಾರಿ ಶಾಲೆಗಳಿಗೆ ಭೇಟಿ ಕೊಟ್ಟು, ಉಪನ್ಯಾಸಕರು ಮತ್ತು ಶಾಲಾ ಮುಖ್ಯೋಪಾಧ್ಯಾಯರ ಉಪಸ್ಥಿತಿಯಲ್ಲಿ ಉದ್ಘಾಟಿಸಿ ಕಾರ್ಯಕ್ರಮ ನಡೆಸಲಾಯಿತು.
ಶಾಲಾ ಮಕ್ಕಳಿಗೆ ಗ್ರಾಹಕರು ಹೇಗೆ ಎಚ್ಚೆತ್ತುಕೊಳ್ಳಬೇಕು, ನಮ್ಮ ಹಕ್ಕುಗಳು ಯಾವುವು, ಅವುಗಳ ಬಳಕೆ ಹಾಗೂ ಶೋಷಣೆಯಾದಾಗ ನಾವು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಂತ ಫಿಲೋಮಿನಾದ
ವಿದ್ಯಾರ್ಥಿಗಳು ವಿಭಿನ್ನವಾಗಿ ಸ್ಪರ್ಧೆಗಳನ್ನು ಹಾಗೂ ರಸಪ್ರಶ್ನೆಗಳನ್ನು ಏರ್ಪಡಿಸುವ ಮೂಲಕ ಗ್ರಾಹಕ ಸಂಘದ ಸಂಯೋಜಕರಾದ ಪ್ರವೀಣ್ ಮತ್ತು ಸ್ವಾತಿ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ ತಿಳಿಸಿಕೊಟ್ಟರು.