Sunday, January 19, 2025
ಸುದ್ದಿ

ಸಿಎಂಗೆ ಟಿಪ್ಪು ಜಯಂತಿ ಕಾರ‍್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಒತ್ತಾಯ: ಸಚಿವ ಜಮೀರ್ ಅಹಮದ್ – ಕಹಳೆ ನ್ಯೂಸ್

ಬೆಂಗಳೂರು: ರಾಜ್ಯದಲ್ಲಿ ಈ ಹಿಂದೆ ಹಿಂಸೆಯ ಕಿಡಿ ಹೊತ್ತಿಸಿದ್ದ ವಿವಾದಿತ ಟಿಪ್ಪು ಜಯಂತಿ ಆಚರಣೆಗೆ ಕಾಂಗ್ರೆಸ್ ಸಜ್ಜಾಗಿದೆ. ಏನೇ ಆದರೂ ಜಯಂತಿ ಆಚರಿಸಿಯೇ ತೀರುವ ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ನಾಯಕರು ಶನಿವಾರ ಸರ್ಕಾರದ ವತಿಯಿಂದ ಖಾಕಿ ಭದ್ರತೆಯಲ್ಲಿ ಕಾರ‍್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಸನ್ನದ್ಧರಾಗಿದ್ದಾರೆ.

ಸಿಎಂ ಗೈರಿನ ಹೊರತಾಗಿಯೂ ಶನಿವಾರ ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾರ‍್ಯಕ್ರಮವನ್ನು ನಿಭಾಯಿಸುವ ಜವಾಬ್ದಾರಿಯನ್ನು ಸಚಿವ ಜಮೀರ್ ಅಹಮದ್ ಹೊತ್ತಿದ್ದಾರೆ. ಇತರ ಜೆಡಿಎಸ್ ನಾಯಕರು ಕೂಡ ಕಾರ‍್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಕಡಿಮೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಿಎಂ ಕುಮಾರಸ್ವಾಮಿ ಕಾರ‍್ಯಕ್ರಮದಿಂದ ದೂರ ಉಳಿಯುವ ನಿರ‍್ಧಾರದ ಬಗ್ಗೆ ಊಹಾಪೋಹಗಳು ಹರಿದಾಡಿದ್ದು, ಕಾಂಗ್ರೆಸ್​ನ ಕೆಲವು ನಾಯಕರಿಗೆ ಕಿರಿಕಿರಿ ಉಂಟುಮಾಡಿದೆ. ವಿಷಯ ತಿಳಿಯುತ್ತಿದ್ದಂತೆ ಸಿಎಂಗೆ ಕರೆ ಮಾಡಿದ್ದ ಸಚಿವ ಜಮೀರ್, ಕಾರ‍್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಒತ್ತಾಯ ಮಾಡಿದರು ಎನ್ನಲಾಗಿದೆ. ಈ ಕುರಿತಂತೆ ಸಚಿವ ಜಮೀರ್ ಅಹಮದ್ ಸ್ಪಷ್ಟನೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

‘ವಾರ‍್ತಾ ಇಲಾಖೆ ಆಹ್ವಾನ ಪತ್ರಿಕೆ ನೋಡಿ ಶಾಕ್ ಆಯಿತು. ಆಗ ನಿರ‍್ದೇಶಕರನ್ನು ಕೇಳಿದೆ, ಸಿಎಂ ಕಚೇರಿಯಿಂದ ಹೆಸರು ಬೇಡ ಎಂದಿದ್ದಾರೆ ಎಂದು ಮಾಹಿತಿ ನೀಡಿದರು. ಹೀಗಾಗಿ ಖುದ್ದು ಸಿಎಂಗೆ ಕರೆ ಮಾಡಿದೆ. ಸಿಎಂ ಆರೋಗ್ಯ ವಿಚಾರವಾಗಿ ಮೂರು ದಿನ ಬೇರೆ ಊರಿಗೆ ಹೋಗುತ್ತಿದ್ದೇನೆ’ ಎಂದು ವಿವರಿಸಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿ ‘ಸಿಎಂ ಕಾರ‍್ಯಕ್ರಮದಲ್ಲಿ ಪಾಲ್ಗೊಳ್ಳದೇ ಇರಲು ಬೇರೆ ಕಾರಣ ಇದೆ. ತಾವು ಪಾಲ್ಗೊಳ್ಳುತ್ತಿಲ್ಲ ಎಂದು ಮೊದಲೇ ಹೇಳಿದ್ದಾರೆ. ಒಂದು ವೇಳೆ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿ ಪಾಲ್ಗೊಳ್ಳದೇ ಇದ್ದರೆ ಏಕೆ ಬಂದಿಲ್ಲ ಎಂದು ನೀವೇ ಪ್ರಶ್ನಿಸುತ್ತೀರಲ್ಲವೇ?’ ಎಂದರು.

ಟಿಪ್ಪು ಜಯಂತಿ ಕಾರ‍್ಯಕ್ರಮದಲ್ಲಿ ಪಾಲ್ಗೊಂಡರೆ ಅಧಿಕಾರ ಹೋಗುತ್ತದೆ ಎಂಬ ಭಯ ಇಲ್ಲ. ಈಗ ತಾನೇ ಚುನಾವಣೆ ಗೆದ್ದಿದ್ದೇವೆ. ಹೀಗಾಗಿ ಭಯ ಎಲ್ಲಿ ಎಂದು ಅವರು ಮರುಪ್ರಶ್ನೆ ಹಾಕಿದರು.

ಟಿಪ್ಪು ಜಯಂತಿಗೆ ಬಿಜೆಪಿ ವಿರೋಧ ವ್ಯಕ್ತಪಡಿಸುವ ವಿಚಾರವಾಗಿ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಜಮೀರ್, ವಿಡಿಯೋವೊಂದನ್ನು ಪ್ರರ‍್ಶಿಸಿದರು. ‘ಬಿಜೆಪಿ ಬಿಟ್ಟಾಗ ಯಡಿಯೂರಪ್ಪ ಟಿಪ್ಪು ಜಯಂತಿ ಮಾಡಲಿಲ್ಲವೇ? ಅಬ್ಬಬ್ಬಾ ಏನದು ಟಿಪ್ಪು ಕತ್ತಿ, ಟೊಪ್ಪಿ ವೇಷ, ಮುಸ್ಲಿಂ ಬಂಧು ಅಂತ ನಾಟಕ ಮಾಡಿದ್ದರು. ನೋಡಿ ನೋಡಿ ಬಿಜೆಪಿ ಟಿಪ್ಪು ಜಯಂತಿ ಆಚರಣೆ ಡ್ರಾಮ ನೋಡಿ’ ಎಂದು ಕುಟುಕಿದರು.