ಶ್ರೀ ಕ್ಷೇತ್ರ ಪಡುಮಲೆಯಲ್ಲಿ 06-12-2024 ರಂದು ಜಾತ್ರೋತ್ಸವದ ಪೂರ್ವ ತಯಾರಿ ಸಭೆ-ಕಹಳೆ ನ್ಯೂಸ್

ಪುತ್ತೂರು: ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ, ಶ್ರೀ ಕ್ಷೇತ್ರ ಪಡುಮಲೆಯಲ್ಲಿ ಇದೇ ಕ್ರೋಧಿ ಸಂವತ್ಸರದ ಧನುರ್ಮಾಸದಲ್ಲಿ, ಬರುವ ಜನವರಿ ತಿಂಗಳ 12 ರಿಂದ 14 ರವರೆಗೆ ಆಡಳಿತಾಧಿಕಾರಿಗಳು ಮತ್ತು ನಿಕಟಪೂರ್ವ ವ್ಯವಸ್ಥಾಪನಾ ಸಮಿತಿಯ ನೇತೃತ್ವದಲ್ಲಿ ನಡೆಯಲಿರುವ ಶ್ರೀ ದೇವರ ಜಾತ್ರೋತ್ಸವದ ಸಂದರ್ಭದಲ್ಲಿ ವಿವಿಧ ಜವಾಬ್ಧಾರಿಗಳನ್ನು ಹಂಚಲು ಮತ್ತು ಪೂರ್ವ ತಯಾರಿ ಬಗ್ಗೆ ಚರ್ಚಿಸಲು ಭಕ್ತರ ಸಭೆಯನ್ನು 06-12-2024 ನೇ ಶುಕ್ರವಾರ ಸಂಜೆ 6 ಗಂಟೆಗೆ ಕರೆಯಲಾಗಿದೆ.
ಆದ್ದರಿಂದ ಶ್ರೀ ಕ್ಷೇತ್ರದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆ ಸೂಚನೆ ನೀಡಿ ಮುಂದೆ ಬರುವ ಜಾತ್ರೆಯ ಸಂದರ್ಭದಲ್ಲಿ ತ್ರಿಕರಣಪೂರ್ವಕವಾಗಿ ಸೇವೆ ಸಲ್ಲಿಸಬೇಕೆಂದು ವಿನಂತಿಸುವ. ಆಡಳಿತಾಧಿಕಾರಿಗಳು ಹಾಗೂ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ನಿಕಟ ಪೂರ್ವ ವ್ಯವಸ್ಥಾಪನಾ ಸಮಿತಿ. ಅಧ್ಯಕ್ಷರು ಮತ್ತು ಸರ್ವಸದಸ್ಯರು ಜೀರ್ಣೋದ್ಧಾರ ಸಮಿತಿ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ಪಡುಮಲೆ.