Recent Posts

Sunday, January 19, 2025
ಸುದ್ದಿ

Breaking News : #MeToo ಶ್ರುತಿ ಹರಿಹರನ್​​ಗೆ ಮಹಿಳಾ ಆಯೋಗದಿಂದ ಲೆಫ್ಟ್ ರೈಟ್ – ಕಹಳೆ ನ್ಯೂಸ್

ಬೆಂಗಳೂರು: ನಟ ಅರ್ಜುನ್​​ ಸರ್ಜಾ ವಿರುದ್ಧ #MeToo ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್​​ ವಿಚಾರಣೆಗೆ ಹಾಜರಾಗದ ಕಾರಣ ಮಹಿಳಾ ಆಯೋಗ ಗರಂ ಆಗಿದೆ. #MeToo ಅಭಿಯಾನದಡಿ ಶ್ರುತಿ ಹರಿಹರನ್, ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು. ಆದ್ರೆ ಈ ಬಗ್ಗೆ ವಿಚಾರಣೆಗಾಗಿ ಮಹಿಳಾ ಆಯೋಗದಿಂದ 15 ಬಾರಿ ಕರೆ ಮಾಡಿದ್ರೂ ಶ್ರುತಿಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಶ್ರುತಿಹರಿಹರನ್​​​ಗೆ ಮಹಿಳಾ ಆಯೋಗ ಫುಲ್ ಕ್ಲಾಸ್ ತೆಗೆದುಕೊಂಡಿದೆ. ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಶ್ರುತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಕೊನೆಗೆ ಮಹಿಳಾ ಆಯೋಗದ ಮೆಸೇಜ್ ನೋಡಿ ಕಂಗಾಲಾದ ಶ್ರುತಿ, ಆಯೋಗದ ಮುಂದೆ ಕ್ಷಮೆ ಯಾಚಿಸಿದ್ದಾರೆ. ಸೋಮವಾರದಂದು ವಿಚಾರಣೆಗೆ ಹಾಜರಾಗೋ ಭರವಸೆ ನೀಡಿದ್ದಾರೆ. ಸೋಮವಾರ ಬಂದು ಮಹಿಳಾ ಆಯೋಗದ ಮುಂದೆ ಶ್ರುತಿ ಹರಿಹರನ್ ಸ್ಟೇಟ್ ಮೆಂಟ್ ಕೊಡಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು