Saturday, January 18, 2025
ಉದ್ಯೋಗಕಡಬಗೋಕರ್ಣದಕ್ಷಿಣ ಕನ್ನಡಬದಿಯಡ್ಕಬಳ್ಳಾರಿಬೆಂಗಳೂರುಬೈಂದೂರುಭಟ್ಕಳಮಡಿಕೇರಿಮಂಡ್ಯಮಾಹಿತಿಮೂಡಬಿದಿರೆಮೈಸೂರುರಾಜ್ಯರಾಮನಗರರಾಷ್ಟ್ರೀಯಸಕಲೇಶಪುರಸುದ್ದಿಹಾಸನಹುಬ್ಬಳ್ಳಿಹೆಚ್ಚಿನ ಸುದ್ದಿ

ಮೂಡಬಿದ್ರೆ : ವ್ಯಕ್ತಿಯೊಬ್ಬರು ಬೈಕ್ ನಿಂದ ಬಿದ್ದು ಸಾ*ವು

ಮೂಡಬಿದ್ರೆ: ಬೈಕ್ ನಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಮೃ*ತಪಟ್ಟ ಘಟನೆ ಮೂಡಬಿದ್ರೆ-ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ಪಡುಮಾರ್ನಾಡು ಗ್ರಾಮದ ಬನ್ನಡ್ಕ ಎಂಬಲ್ಲಿ ನಡೆದಿದೆ.
ಚಿನ್ನದ ಕೆಲಸಗಾರ, ತೋಡಾರು ಗ್ರಾಮದ ಸೀತಾರಾಮ ಆಚಾರ್ಯ (46) ಮೃತಪಟ್ಟವರು. ಮೂಡುಬಿದಿರೆ ಜ್ಯೋತಿನಗರದಲ್ಲಿ ಚಿನ್ನದ ವೃತ್ತಿಗೆ ಸಂಬAಧಿಸಿದ ವಿಘ್ನೇಶ್ ಮೆಷಿನ್ ಕಟ್ಟಿಂಗ್ ಉದ್ಯಮವನ್ನು ನಡೆಸುತ್ತಿದ್ದು ಜನವರಿ 3ರಂದು ನಡೆಯಲಿದ್ದ ಅವರ ಪುತ್ರನ ಉಪನಯನದ ಕಾಗದವನ್ನು ವಿತರಿಸಿ ವಾಪಸ್ಸು ಬರುತ್ತಿದ್ದ ವೇಳೆ ಬನ್ನಡ್ಕ ಬಳಿ ಬೈಕ್‌ನಿಂದ ಬಿದ್ದಿದ್ದರು.

ಸ್ಥಳೀಯರು ಕೂಡಲೇ ಅಲಂಗಾರ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದರು. ಮೃತರ ಸಹೋದರ ನೀಡಿದ ದೂರಿನಂತೆ ಪೊಲಿಸರು ಸಂಶಯಾಸ್ಪದ ಸಾವು ಪ್ರಕರಣ ದಾಖಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು