ತಂದೆ ತಾಯಿಗಳ ಕನಸನ್ನು ಮಕ್ಕಳು ನನಸಾಗಿಸಬೇಕು- ಯಶೋಧ ಹೊಸುರ ಕೆಎಎಸ್ -ಕಹಳೆ ನ್ಯೂಸ್
ಮುಡಬಿದ್ರೆ: ಶಾಲೆಯೊಂದು ಕೈತೋಟ ದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಪರಿಮಳ ಸೂಸುವ ಹೂವಿನಂತೆ. ಎಲ್ಲರಲ್ಲೂ ಒಂದ್ದಲ್ಲಾ ಒಂದು ಪ್ರತಿಭೆ ಇರುತ್ತದೆ. ಆ ಪ್ರತಿಭೆಯನ್ನು ಅನಾವರಣ ಮಾಡಲು ಈ ಎಕ್ಸಲೆಂಟ್ ವಿದ್ಯಾ ಸಂಸ್ಥೆ ಅವಕಾಶ ನೀಡುತ್ತಿದೆ. ಸಿಗುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಸಾಧನೆ ಮಾಡಬೇಕು. ತಂದೆಯನ್ನು ಮೀರಿಸುವ ಮಗನಾಗಿ ಗುರುವನ್ನು ಮೀರಿಸುವ ವಿದ್ಯಾರ್ಥಿ ಆಗುವಂತೆ ಇಂದಿನ ಮಕ್ಕಳು ಬೆಳೆಯಬೇಕು.ವಿದ್ಯಾರ್ಥಿ ಜೀವನ ಚಿನ್ನದ ಜೀವನ ಇದ್ದ ಹಾಗೆ. ವಿದ್ಯಾರ್ಥಿಗಳು ಮೊದಲು ಖುಷಿಯಿಂದ ಇರಬೇಕು. ಅದು ಜ್ಞಾನಾರ್ಜನೆಗೆ ದಾರಿಯಾಗುತ್ತದೆ. ಪ್ರತಿಯೊಬ್ಬರಲ್ಲೂ ದೊಡ್ಡದೊಂದು ಗುರಿ ಇರಬೇಕು. ಆ ಗುರಿಯ ಕಡೆಗೆ ಸತತ ಅಭ್ಯಾಸ ನಿರತವಾಗಿ ಪರಿಶ್ರಮದಿಂದ ಗುರಿಯನ್ನು ತಲುಪಬೇಕು.
ಅಪ್ಪನ ಭರವಸೆಯ ಮಾತುಗಳು ನನ್ನ ಕನಸುಗಳಿಗೆ ರೆಕ್ಕೆಗಳಾದವು. ಕಷ್ಟಪಟ್ಟವರಿಗೆ ದೇವರು ದಾರಿ ತೋರಿಸುತ್ತಾನೆ. ವಿದ್ಯಾರ್ಥಿಗಳು ಸದಾ ಧನಾತ್ಮಕ ಚಿಂತನೆ ಹೊಂದಿರಬೇಕು. ಪೋಷಕರು ಕೂಡ ಮಕ್ಕಳಿಗೆ ಮನೆಯಲ್ಲಿ ಒಳ್ಳೆಯ ಮಾನವೀಯ ಗುಣಗಳನ್ನು ಕಲಿಸಬೇಕು. ನೀವು ಕನಸು ಕಾಣಬಲ್ಲವರಾಗಿದ್ದರೆ ಅದನ್ನು ನನಸಾಗಿಸುತ್ತೀರಿ. ಸಜ್ಜನರ ಸಹವಾಸ ಒಳ್ಳೆಯ ಮಾತು ಮಾದರಿ ವ್ಯಕ್ತಿತ್ವಗಳಿಂದ ಜ್ಞಾನವನ್ನು ಸಂಪಾದಿಸಬೇಕು. ಎಂದು ಬೆಂಗಳೂರಿನ ಕೋರಮಂಗಲದಲ್ಲಿ ಕಮರ್ಷಿಯಲ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ನಲ್ಲಿ ಡೆಪ್ಯೂಟಿ ಕಮೀಷನರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಯಶೋಧ ಹೊಸೂರ (ಕೆಎಎಸ್) ಅವರು ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಹೇಳಿದರು.
ಮುಂದುವರೆದು ಮಾತನಾಡಿದ ಅವರು ಯಾರಿಗೆ ಹೆಚ್ಚು ಜ್ಞಾನ ಪಡೆದುಕೊಳ್ಳುವ ಹಂಬಲ ಇರುತ್ತದೆಯೋ ಅವರು ಉನ್ನತವಾದ ಸಾಧನೆಯನ್ನು ಮಾಡುತ್ತಾರೆ. ಅನುಷ್ಠಾನ ವಿಲ್ಲದ ವಿದ್ಯೆ ಯಾವುದಕ್ಕೂ ಪ್ರಯೋಜನವಿಲ್ಲ ನಿಮ್ಮ ಆಸಕ್ತಿದಾಯಕ ಕ್ಷೇತ್ರದಲ್ಲಿ ನಿರಂತರವಾದ ಅಭ್ಯಾಸವನ್ನು ಮಾಡಿ ಛಲದೊಂದಿಗೆ ಏನನ್ನಾದರೂ ಸಾಧಿಸಬೇಕು ಎನ್ನುವ ಗಟ್ಟಿತನ ನಿಮ್ಮಲ್ಲಿರಬೇಕು. ತಂದೆ ತಾಯಿಗಳ ಕನಸನ್ನು ಮಕ್ಕಳು ನನಸಾಗಿಸಬೇಕು. ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬೆಂಗಳೂರಿನ ಸೌಂದರ್ಯ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್ ನ ಸಿಇಓ ಆದ ಕೀರ್ತನ್ ಕುಮಾರ್ ಮಾತನಾಡಿ ವಿದ್ಯಾರ್ಥಿಗಳು ಸಾಧಕರನ್ನು ಮಾದರಿಯಾಗಿಟ್ಟುಕೊಳ್ಳಬೇಕು. ಕರ್ನಾಟಕದ ಟಾಪ್ 5 ಶಿಕ್ಷಣ ಸಂಸ್ಥೆಗಳಲ್ಲಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಒಂದಾಗಿದೆ. ಇಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಇಲ್ಲಿ ಸಿಗುವ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡು ವಿದ್ಯಾರ್ಥಿಗಳು ಸಾಧಕರಾಗಬೇಕು. ಭವಿಷ್ಯ ನಿಮ್ಮ ಮುಂದಿದೆ. ಆ ನಿಮ್ಮ ಭವಿಷ್ಯದ ನಿರ್ಮಾತೃಗಳು ನೀವುಗಳೆ ಆಗಿದ್ದೀರಿ. ಪೋಷಕರು ತಮಗೆ ಸಿಗಲಾರದಂತಹ ಸೌಲಭ್ಯಗಳನ್ನು ನಿಮಗೆ ಒದಗಿಸಿಕೊಡುತ್ತಿದ್ದಾರೆ. ಅದನ್ನು ಮನದಲ್ಲಿಟ್ಟುಕೊಂಡು ಓದಿನ ಕಡೆಗೆ ಗಮನ ಕೊಡಬೇಕು.
ಕಲಿಕೆ ಜೀವನ ಪರ್ಯಂತ ಇರುವಂಥದ್ದು ಪ್ರತಿದಿನ ಹೊಸಹೊಸ ವಿಚಾರಗಳನ್ನು ಕಲಿಯುತ್ತಾ ಇರಿ. ಇಂದಿನ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ಅಂತಹ ಒಳ್ಳೆಯ ಶಿಕ್ಷಣವನ್ನು ಎಕ್ಸಲೆಂಟ್ ವಿದ್ಯಾಸಂಸ್ಥೆ ನೀಡುತ್ತದೆ. ಅದನ್ನು ಸರಿಯಾಗಿ ಬಳಸಿಕೊಂಡು ಜೀವನದಲ್ಲಿ ಸಾಧನೆಯನ್ನು ಮಾಡಿ ಎಂದು ಹೇಳಿದರು.
ವಿದ್ಯಾರ್ಥಿಗಳಲ್ಲಿ ನಿರ್ದಿಷ್ಟವಾದ ಗುರಿ ಇರಬೇಕು ಯಾವುದನ್ನು ಸಾಧಿಸಲಾಗದೆ ಇರುವ ಹಲವು ಗುರಿಗಳನ್ನು ಇಟ್ಟುಕೊಳ್ಳಬಾರದು. ಉತ್ತಮವಾದ ಆರೋಗ್ಯ ದೈಹಿಕ ಹಾಗೂ ಮಾನಸಿಕ ಗಟ್ಟಿತನವೊಂದಿದ್ದರೆ ಎಂತಹ ಕಷ್ಟದ ಸಾಧನೆಯನ್ನಾದರೂ ಮಾಡಬಹುದು. ದೊಡ್ಡ ದೊಡ್ದ ಕನಸುಗಳೊಂದಿಗೆ ನಿಮ್ಮ ನಿರಂತರ ಅಭ್ಯಾಸ ಇರಲಿ ಮುಂದೊAದು ದಿನ ಎಲ್ಲರೂ ಗುರುತಿಸುವ ಗೌರವಿಸುವ ವ್ಯಕ್ತಿಗಳು ನೀವಾಗಿ ಎಂದು ಎಕ್ಸಲೆಂಟ್ ವಿದ್ಯಾಸಂಸ್ಥೆಯ ಹಳೆಯ ವಿದ್ಯಾರ್ಥಿ ಐಐಟಿ(ಮದ್ರಾಸ್) ಸಾಧಕ ಚಿನ್ಮಯ್ ಬೋರ್ಕರ್ ಹೇಳಿದರು.
ಎಕ್ಸಲೆಂಟ್ ಸಂಸ್ಥೆ ಸಂಸ್ಕಾರಯುತ ಶಿಕ್ಷಣ ನೀಡುತ್ತಿದೆ. ನಾವು ಕಲಿತ ವಿದ್ಯೆ ನಮ್ಮ ಬದುಕನ್ನು ರೂಪಿಸುತ್ತದೆ. ಅಂತಹ ಶಿಕ್ಷಣವನ್ನು ಈ ಶಿಕ್ಷಣ ಸಂಸ್ಥೆ ನೀಡುತ್ತಾ ಬಂದಿದೆ. ಇದರ ಸುಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಂಡು ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಬೇಕು. ಹಿರಿಯರು ತಂದೆ ತಾಯಿಗಳೊಂದಿಗೆ ಸದಾ ಗೌರವಯುತವಾಗಿ ನಡೆದುಕೊಳ್ಳಬೇಕು. ನಾವು ಇನ್ನಿಬ್ಬರಿಗೆ ಮಾದರಿಯಾಗುವಂತೆ ಜೀವಿಸಬೇಕು. ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು. ದೇಶಭಕ್ತಿಯನ್ನು ಸದಾ ಮನಸ್ಸಿನಲ್ಲಿಟ್ಟುಕೊಂಡು ದೇಶ ಮೆಚ್ಚುವಂತಹ ವ್ಯಕ್ತಿತ್ವವನ್ನು ನೀವು ಬೆಳೆಸಿಕೊಳ್ಳಬೇಕು. ಎಂದು ಮೂಡುಬಿದಿರೆ ಪುರಸಭೆಯ ಉಪಾಧ್ಯಕ್ಷರಾದ ನಾಗರಾಜ್ ಪೂಜಾರಿ ಶಾಲಾ ವಾರ್ಷಿಕೋತ್ಸವದ ಸಾಂಸ್ಕçತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಮೂಡುಬಿದಿರೆಯ ಪ್ರಸಿದ್ಧ ಉದ್ಯಮಿ ಶ್ರೀಪತಿ ಭಟ್ ಸಂಸ್ಥೆಯ ಸಾಧಕ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿಗಳಾದ ರಶ್ಮಿತಾ ಜೈನ್ ಮಾತನಾಡಿ ಪೋಷಕರಿಗೆ ಇರುವ ಮಕ್ಕಳ ಮೇಲಿನ ಭಾವನಾತ್ಮಕ ಸಂಬAಧ ತುಂಬಾ ಮಹತ್ವದ್ದು. ನಮ್ಮ ಸಂಸ್ಥೆಗೆ ತಮ್ಮ ಮಕ್ಕಳನ್ನು ಸೇರಿಸಿ ಉತ್ತಮ ಜ್ಞಾನಾರ್ಜನೆ ಹೊಂದುವAತೆ ಪೋಷಕರು ಸಹಕರಿಸುತ್ತಿದ್ದಾರೆ. ವಿದ್ಯಾರ್ಥಿಗಳು ಹೆತ್ತವರ ಕನಸುಗಳನ್ನು ಗೌರವಿಸುತ್ತಾ ಚೆನ್ನಾಗಿ ಓದಿನಲ್ಲಿ ತೊಡಗಿಕೊಳ್ಳಬೇಕು. ಓದು ನಿಮ್ಮ ಬದುಕನ್ನು ಬೆಳಗುತ್ತದೆ. ನೀವು ಸದಾ ಕ್ರೀಯಾಶೀಲರಾಗಿದ್ದರೆ ಸಾಧನೆ ನಿಮ್ಮ ಹಿಂದೆಯೆ ಬರುತ್ತದೆ.
ವಿದ್ಯಾರ್ಥಿಗಳು ಒಂದು ಒಳ್ಳೆಯ ಮೂರ್ತಿಯಾಗಬೇಕಾದರೆ ಉಳಿಪೆಟ್ಟು ತಿನ್ನಲೇಬೇಕು ಆ ಮೂಲಕ ಮಾದರಿಯುತ ಜೀವನ ನಡೆಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಯುವರಾಜ ಜೈನ್ ಮಾತನಾಡಿ ಕಷ್ಟದ ಜೀವನ ನಮಗೆ ಒಳ್ಳೆಯ ಪಾಠವನ್ನು ಕಲಿಸುತ್ತದೆ. ಯಾರು ಕಠಿಣ ಪರಿಶ್ರಮದಿಂದ ಕಾರ್ಯಪ್ರವೃತ್ತರಾಗುತ್ತಾರೆಯೋ ಅವರು ಸಾಧಕರಾಗುತ್ತಾರೆ. ವಿದ್ಯಾರ್ಥಿಗಳಾದ ನಿಮಗೆ ತಂದೆ ತಾಯಿಯರ ಕಷ್ಟ ಅವರು ನಿಮಗಾಗಿ ಮಾಡುತ್ತಿರುವ ತ್ಯಾಗ ತಿಳಿದಿರಬೇಕು.
ಎಲ್ಲಾ ತಂದೆತಾಯಿಯರು ನಿಮ್ಮ ಬೆಳವಣಿಗೆಗಾಗಿ ಹಗಲು ರಾತ್ರಿ ದುಡಿಯುತ್ತಿದ್ದಾರೆ ಅವರ ದುಡಿಮೆಗೆ ತ್ಯಾಗಕ್ಕೆ ನಿಮ್ಮ ಸಾಧನೆಯ ಮೂಲಕ ಗೌರವವನ್ನು ಸಲ್ಲಿಸಬೇಕು. ಚಿಕ್ಕ ಚಿಕ್ಕ ಸಮಸ್ಯೆಗಳಿಗೆ ಹೆದರಿ ಸುಮ್ಮನೆ ಕೂರದೆ ದೊಡ್ಡ ಗುರಿಯ ಕಡೆಗೆ ಗಮನ ಹರಿಸಬೇಕು. ಜೀವನದಲ್ಲಿ ಬರುವ ಸೋಲುಗಳನ್ನು ಗೆಲುವಿನ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ನಿಮ್ಮ ಜೀವನವನ್ನು ಗೆಲುವಿನತ್ತ ಕೊಂಡೊಯ್ಯಬೇಕು ಎಂದು ಹೇಳಿದರು.
ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್ ವಾರ್ಷಿಕ ವರದಿಯನ್ನು ವಾಚಿಸಿದರು. ಉಪಮುಖ್ಯೋಪಾಧ್ಯಾಯ ಜಯಶೀಲ ಸ್ವಾಗತಿಸಿದರು. ಶಿಕ್ಷಕರಾದ ವೆಂಕಟೇಶ್ ಭಟ್, ನಿರಂಜನ್ ಪೂಜಾರಿ ಅತಿಥಿಗಳನ್ನು ಪರಿಚಯಿಸಿದರು. ಶಾಲಾ ಸಂಸತ್ತಿನ ನಾಯಕ ಶಶಾಂಕ್ ಎ ಪಿ ವಂದಿಸಿದರು ಶಿಕ್ಷಕಿ ವೆನೆಸ್ಸಾ ನೊರೊನ್ಹಾ ನಿರೂಪಿಸಿದರು.