Sunday, January 19, 2025
ಉದ್ಯೋಗಕಡಬಗೋಕರ್ಣದಕ್ಷಿಣ ಕನ್ನಡಪುತ್ತೂರುಬದಿಯಡ್ಕಬಳ್ಳಾರಿಬೆಂಗಳೂರುಬೈಂದೂರುಭಟ್ಕಳಮಡಿಕೇರಿಮಂಡ್ಯಮಾಹಿತಿಮೈಸೂರುರಾಜ್ಯರಾಮನಗರರಾಷ್ಟ್ರೀಯಸಕಲೇಶಪುರಸುದ್ದಿಹಾಸನಹುಬ್ಬಳ್ಳಿಹೆಚ್ಚಿನ ಸುದ್ದಿ

ನಾಡಕಚೇರಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿ ಕಂದಾಯ ಕಾರ್ಯದರ್ಶಿಗೆ ಶಾಸಕ ಅಶೋಕ್ ರೈ ಮನವಿ-ಕಹಳೆ ನ್ಯೂಸ್

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೊಳಪಡುವ ಉಪ್ಪಿನಂಗಡಿ ಮತ್ತು ವಿಟ್ಲ ನಾಡಕಚೇರಿಗೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಪುತ್ತೂರು ಶಾಸಕರಾದ ಅಶೋಕ್ ರೈ ಅವರು ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ ಅವರಿಗೆ ಮನವಿ ಮಾಡಿದ್ದಾರೆ.
ಶುಕ್ರವಾರ ಬೆಂಗಳೂರಿನಲ್ಲಿ ಕಂದಾಯ ಇಲಾಖೆ ಕಾರ್ಯದರ್ಶಿಯವರನ್ನು ಭೇಟಿಯಾದ ಶಾಸಕರು ನಾಡಕಚೇರಿಯಲ್ಲಿ ಗ್ರಾಮೀಣ ಭಾಗದ ಜನರ ಕಂದಾಯ ವಿಚಾರಕ್ಕೆ ಸಂಬAಧಿಸಿದAತೆ ಕೆಲಸ ಕಾರ್ಯಗಳು ನಡೆಯುತ್ತದೆ. ನಾಡ ಕಚೇರಿಯ ಕಟ್ಟಡವಿದ್ದರೂ ಅಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಸೌಕರ್ಯ ಕೊರತೆ ಇದ್ದ ಕಾರಣ ಇದರಿಂದ ಕಚೇರಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಕಂದಾಯ ಇಲಾಖೆ ಈ ವಿಚಾರವನ್ನು ಆದ್ಯತೆ ಮೇರೆಗೆ ಪರಿಗಣಿಸಿ ತಕ್ಷಣ ಎರಡು ನಾಡಕಚೇರಿಗಳಿಗೆ ಮೂಲಭೂತ ಸೌಕರ್ಯವನ್ನು ಕಲ್ಪಿಸುವಂತೆ ಮನವಿ ಸಲ್ಲಿಸಿದ್ದಾರೆ. ಶಾಶಕರ ಮನವಿಗೆ ಸ್ಪಂದನೆ ನೀಡಿದ ಕಾರ್ಯದರ್ಶಿ ಶೀಘ್ರದಲ್ಲೇ ನಿಮ್ಮ ಭೇಡಿಕೆಯನ್ನು ಪೂರ್ಣಗೊಳಿಸುವ ಭರವಸೆಯನ್ನು ನೀಡಿದ್ದಾರೆ.
ಕೋಟ್
ವಿಟ್ಲ ಮತ್ತು ಉಪ್ಪಿನಂಗಡಿ ನಾಡಕಚೇರಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ, ಹಲವು ವರ್ಷಗಳಿಂದ ಇಲ್ಲಿನ ಮೂಲಭೂತ ಸೌಕರ್ಯದ ವ್ಯವಸ್ಥೆಯಾಗಿಲ್ಲ. ಈ ವಿಚಾರವನ್ನು ಸ್ಥಳೀಯರು ನನ್ನ ಗಮನಕ್ಕೆ ತಂದಿದ್ದಾರೆ. ಎರಡೂ ಕಚೇರಿಗಳಲ್ಲಿ ಮೂಲಭೂತ ಸೌಕರ್ಯಕ್ಕೆ ಸರಕಾರಕ್ಕೆ ಮನವಿ ಮಾಡಿದ್ದೇನೆ. ಶೀಘ್ರದಲ್ಲೇ ಸೌಕರ್ಯ ಕಲ್ಪಿಸಲಾಗುವುದು.

ಜಾಹೀರಾತು

ಜಾಹೀರಾತು
ಜಾಹೀರಾತು