Sunday, January 19, 2025
ಉದ್ಯೋಗಕಡಬಗೋಕರ್ಣದಕ್ಷಿಣ ಕನ್ನಡಬದಿಯಡ್ಕಬಳ್ಳಾರಿಬೆಂಗಳೂರುಬೈಂದೂರುಭಟ್ಕಳಮಡಿಕೇರಿಮಂಡ್ಯಮಾಹಿತಿಮೈಸೂರುರಾಜ್ಯರಾಮನಗರರಾಷ್ಟ್ರೀಯಶಿಕ್ಷಣಸಕಲೇಶಪುರಸುದ್ದಿಸುಳ್ಯಹಾಸನಹುಬ್ಬಳ್ಳಿಹೆಚ್ಚಿನ ಸುದ್ದಿ

ಸುಳ್ಯ: ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಶಿಬಿರ 2024 ಸಮಾರೋಪ ; ಯಾವುದೇ ಸಂಸ್ಕೃತಿ ಅಳಿದರೆ ವಿಕೃತಿ ಮರೆಯುವುದು: ಚಂದ್ರಶೇಖರ ಪೇರಾಲು-ಕಹಳೆ ನ್ಯೂಸ್

ಸುಳ್ಯ:ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘ ಹಾಗೂ ಐಕ್ಯೂಎಸಿ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲಾ ಮಟ್ಟದ ಎರಡು ದಿನಗಳ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಶಿಬಿರ -2024 ಕಾಲೇಜಿನ ಸಭಾಂಗಣದಲ್ಲಿ ದಿನಾಂಕ 05.12.2024 ರಂದು ಪ್ರಾರಂಭಗೊAಡು 06.12.2024ರಂದು ಸಂಪನ್ನಗೊAಡಿತು.
ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಇದರ ಅಧ್ಯಕ್ಷರಾದ ಸದಾನಂದ ಮಾವಜಿ ಇವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮವನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಕಾರ್ಯದರ್ಶಿ ಗಳಾದ ಕೆ.ವಿ. ಹೇಮನಾಥ್ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಖ್ಯ ಅತಿಥಿಗಳಾಗಿ ನೆಹರು ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ.ಎA., ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ರತ್ನಾವತಿ ಡಿ., ಭಾಗವಹಿಸಿದ್ದರು. ವೇದಿಕೆಯಲ್ಲಿ ಅರೆಭಾಷೆ ಅಕಾಡೆಮಿಯ ಸದಸ್ಯರು ಹಾಗೂ ಕಾರ್ಯಕ್ರಮದ ಸದಸ್ಯ ಸಂಚಾಲಕರಾದ ಚಂದ್ರಶೇಖರ್ ಪೇರಾಲು, ಅಕಾಡೆಮಿಯ ಸದಸ್ಯರಾದ ಲತಾ ಪ್ರಸಾದ್ ಕುದ್ಪಾಜೆ, ಚಂದ್ರಾವತಿ ಬಡ್ಡಡ್ಕ, ವಿನೋದ್ ಮೂಡಗದ್ದೆ, ನೆಹರು ಮೆಮೋರಿಯಲ್ ಕಾಲೇಜಿನ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘದ ಸಂಚಾಲಕರಾದ ಸಂಜೀವ ಕುದ್ಪಾಜೆ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘದ ಅಧ್ಯಕ್ಷರಾದ ಕು. ಹವ್ಯಶ್ರೀ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ತೃತೀಯ ಬಿಎ ವಿದ್ಯಾರ್ಥಿನಿ ಕು. ಪ್ರಾಪ್ತಿ ಕೆ. ಸಿ. ಪ್ರಾರ್ಥಿಸಿ ಪ್ರೊ. ಸಂಜೀವ ಕುದ್ಪಾಜೆ ಸ್ವಾಗತಿಸಿ, ಕೃಪಾ ಕೆ ಎನ್ ವಂದಿಸಿದರು. ಡಾ. ಅನುರಾಧ ಕುರುಂಜಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶೋಬಾನೆ, ಅಜ್ಜಿಕಥೆ, ಒಗಟು ಬಿಡಿಸುವುದು, ಆಶುಕವಿತೆ, ಅರೆಭಾಷೆ ಪೊಳ್ಮೆ ಇತ್ಯಾದಿ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಿತು. ಸುಳ್ಯ ಹಾಗೂ ಕಡಬ ತಾಲೂಕಿನ ವಿವಿಧ ವಿದ್ಯಾಸಂಸ್ಥೆಗಳ ಸುಮಾರು 90ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದರು ಹಾಗೂ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಎರಡನೇ ದಿನ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಕುರಿತಾಗಿ ವಿಚಾರ ಗೋಷ್ಠಿಗಳು ನಡೆದವು. ಮೊದಲನೇ ಅವಧಿಯಲ್ಲಿ ಅರೆಭಾಷೆ ಸಂಸ್ಕೃತಿಯ ಕುರಿತು ಮಹಾತ್ಮ ಗಾಂಧಿ ಮಲ್ನಾಡ್ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ದೊಡ್ಡಣ್ಣ ಬರೆಮೇಲು ವಿಚಾರ ಮಂಡಿಸಿದರು. ದ್ವಿತೀಯ ಅವಧಿಯಲ್ಲಿ ಗೋಪಾಲ್ ಪೆರಾಜೆಯವರು ಅರೆಭಾಷೆ ಸಂಸ್ಕೃತಿಯಲ್ಲಿ ನಡೆಸಲ್ಪಡುವ ಹಬ್ಬ ಹರಿದಿನಗಳ ಬಗ್ಗೆ ವಿವರಣೆ ನೀಡಿದರು.

ಈ ಸಂದರ್ಭದಲ್ಲಿ ಯಶವಂತ ಕುಡೆಕಲ್ಲು, ಜಯಪ್ರಕಾಶ್ ಕಲ್ಲಪಳ್ಳಿ, ಪವನ್ ಕೋಲ್ಚರ್, ಕು. ಪ್ರಾಪ್ತಿ ಕೆ. ಸಿ ಅರೆಭಾಷೆ ಹಾಡುಗಳನ್ನು ಹಾಡಿ ಮನರಂಜಿಸಿದರು.
ನAತರ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅರೆಭಾಷೆ ಅಕಾಡೆಮಿಯ ಸದಸ್ಯರು ಹಾಗೂ ಕಾರ್ಯಕ್ರಮದ ಸದಸ್ಯ ಸಂಚಾಲಕರಾದ ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ್ ಪೇರಾಲು ಜಾತಿ ಮತ ಮೀರಿ ಬೆಳೆದು ಬಂದ ಅರೆಭಾಷೆ ಮತ್ತು ಇದರ ಭಾಗವಾಗಿರುವ ಸಂಸ್ಕೃತಿಯ ಮಹತ್ವವನ್ನು ವಿವರಿಸುತ್ತಾ ಯಾವುದೇ ಸಂಸ್ಕೃತಿ ಅಳಿದರೆ ವಿಕೃತಿ ಮರೆಯುವುದು. ನಮ್ಮ ಸಂಸ್ಕೃತಿ ಉಳಿವಿಗೆ ಇಂತಹ ಕಾರ್ಯಕ್ರಮಗಳು ಅಗತ್ಯ. ಹೆಚ್ಚು ಯುವ ಸಮೂಹ ಪಾಲ್ಗೊಂಡಿರುವುದು ಆಶಾದಾಯಕ ಎಂದು ಅಭಿಪ್ರಾಯಪಟ್ಟರು.