Sunday, January 19, 2025
ಉದ್ಯೋಗಗೋಕರ್ಣಬಂಟ್ವಾಳಸುದ್ದಿ

ವಾಮದಪದವು ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ 3 ತಿಂಗಳ ಉಚಿತ ಹೊಲಿಗೆ ತರಬೇತಿ ತರಗತಿ ಉದ್ಘಾಟನ ಕಾರ್ಯಕ್ರಮ-ಕಹಳೆ ನ್ಯೂಸ್

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ ) ಬಂಟ್ವಳ ತಾಲೂಕಿನ ವಗ್ಗ ವಲಯದ ವಾಮದಪದವಿನಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಪ್ರೇರಣ ಜ್ಞಾನವಿಕಾಸ ಕೇಂದ್ರದಲ್ಲಿ 3 ತಿಂಗಳ ಉಚಿತ ಹೊಲಿಗೆ ತರಬೇತಿ ತರಗತಿ ಪ್ರಾರಂಭಿಸಲಾಯಿತು.

ಒಂದು ಮಹಿಳೆ ಸ್ವ ಉದ್ಯೋಗ ಕಾರ್ಯಗಳನ್ನು ಮಾಡಿ ಹೇಗೆ ಒಂದು ಮನೆಯನ್ನು ಅಭಿವೃದ್ಧಿ ಪಡಿಸಲು ಸಾಧ್ಯ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಳಿಸಿ ಕೊಟ್ಟಿದೆ ಎಂದು ಬಾಲಭವನ ಸೊಸೈಟಿ ನಿಕಟ ಪೂರ್ವ ಅಧ್ಯಕ್ಷರಾದ ಸುಲೋಚನಾ ಜೆ ಕೆ ಭಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಾಮದಪದವ್ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಯುವರಾಜ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಹಿಳಾ ಜ್ಞಾನವಿಕಾಸ ಕೇಂದ್ರ ಕರ್ನಾಟಕ ರಾಜ್ಯದಲ್ಲಿ ಎಲ್ಲ ಕಡೆ ವಿಸ್ತರಣೆಆಗಿ ಪಸರಿಸಿದೆ. ನಾವು ಯಾವುದೇ ಕೆಲಸ ಮಾಡುವಗ ಉತ್ಸಹ ಬೇಕು. ನಾವು ಸ್ವವಾಲಂಬಿ ಜೀವನ ನಡೆಸಬೇಕು ಎಂದು ಜಿಲ್ಲಾ ನಿರ್ದೇಶಕರು ಮಹಾಬಲ ಕುಲಾಲ್ ರವರು ಅಭಿಪ್ರಾಯ ಪಟ್ಟರು.

3 ತಿಂಗಳ ಉಚಿತ ಹೊಲಿಗೆ ತರಬೇತಿಗೆ ಗ್ರಾಮದ ಸುಮಾರು 40 ಮಂದಿ ಮಹಿಳೆಯರು ತರಗತಿಗೆ ಸೇರಿದ್ದು, ಇದರ ಪ್ರಾಯೋಜನ ಪಡೆಯಲಿದ್ದಾರೆ. ಜನಜಗೃತಿ ವೇದಿಕೆ ಸದಸ್ಯ ನವೀನ್ ಚಂದ್ರಶೆಟ್ಟಿ, ಒಕ್ಕೂಟ ಅಧ್ಯಕ್ಷೆ ಅನಿತಾ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕಿ ಸವಿತಾ, ಹೊಲಿಗೆ ತರಬೇತಿ ಶಿಕ್ಷಕಿ ಪವಿತ್ರ, ಸೇವಾಪ್ರತಿನಿಧಿ ಮೋಹನ್ ದಾಸ್ ಗಟ್ಟಿ, ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.

ಕೇಂದ್ರದ ಸಂಯೋಜಕಿ ಗುಣವತಿ ಸ್ವಾಗತಿಸಿ, ಕೇಂದ್ರದ ಸದಸ್ಯೆ ಕವಿತಾ ವಂದಿಸಿದರು . ಜ್ಞಾನವಿಕಾಸ ಸಮನ್ವಯಧಿಕಾರಿ ಶ್ರುತಿ ಕಾರ್ಯಕ್ರಮ ನಿರೂಪಿಸಿದರು.