ಡಿ.09ರಿಂದ ಡಿ.10ರವೆರೆಗೆ ಆಲಂತಡ್ಕ ರಕೇಶ್ವರೀ, ಧೂಮವತಿ ಹಾಗೂ ಪರಿವಾರ ದೈವಗಳ ನೇಮೋತ್ಸವ – ಕಹಳೆ ನ್ಯೂಸ್
ಆಲಂತಡ್ಕ ರಕೇಶ್ವರೀ, ಧೂಮವತಿ ಹಾಗೂ ಪರಿವಾರ ದೈವಗಳ ನೇಮೋತ್ಸವವು ಇಂದು ನಡೆಯಲಿದೆ.
ಇಂದು ಬೆಳಿಗ್ಗೆ ಗಣಹೋಮ, ನಾಗತಂಬಿಲ ನಡೆದು, ಮಧ್ಯಾಹ್ನ ಧೂಮವತಿ ದೈವಗಳ ಭಂಡಾರ ಬಂದು ಸಂಜೆ ರಕೇಶ್ವರಿ, ಸತ್ಯಜಾವತೆ, ವರ್ಣರ ಪಂಜುರ್ಲಿ ದೈವಗಳ ನೇಮೋತ್ಸವ ಹಾಗೂ ಪ್ರಾತಃಕಾಲ 3.00ರಿಂದ ರಕ್ತೇಶ್ವರಿ ದೈವದ ನೇಮೋತ್ಸವ ಮತ್ತು ಪ್ರಸಾದ ವಿತರಣೆ ನಡೆಯಲಿದೆ.
ಇನ್ನು ಡಿ.10ರಂದು ಬೆಳಿಗ್ಗೆ ಧೂಮವತಿ ದೈವದ ನೇಮೋತ್ಸವ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಪಾಷಣಮೂರ್ತಿ, ಕಲ್ಕುಡ, ಕುಪ್ಪೆ ಪಂಜುರ್ಲಿ ಗುಳಿಗ ದೈವಗಳ ಭಂಡಾರ ತೆಗೆದು ನೇಮೋತ್ಸವ, ಪ್ರಾತಃಕಾಲ 4 ರಿಂದ ರಕೇಶ್ವರೀ ದೈವದ ಹರಕೆಯ ನೇಮೋತ್ಸವ ನಡೆಯಲಿದೆ.