Thursday, December 12, 2024
ದಕ್ಷಿಣ ಕನ್ನಡಪುತ್ತೂರುಶಿಕ್ಷಣ

ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಪೋಕ್ಸೋ ಜಾಗೃತಿ ಕಾರ್ಯಕ್ರಮ ; ಗುಡ್ ಟಚ್, ಬ್ಯಾಡ್ ಟಚ್ ಯಾವುದು ಎಂದು ತಿಳಿದಿರಬೇಕು : ಹರಿಣಾಕ್ಷಿ ಶೆಟ್ಟಿ-ಕಹಳೆ ನ್ಯೂಸ್

ಪುತ್ತೂರು: ಮಕ್ಕಳಿಗೆ ಗುಡ್ ಟಚ್, ಬ್ಯಾಡ್ ಟಚ್ ಯಾವುದು ಎಂಬುದರ ತಿಳುವಳಿಕೆ ಇರಬೇಕು. ಇದರಿಂದ ಅವರು ತಮ್ಮ ಮೇಲೆ ಏನೂ ಅನಾಹುತ ನಡೆಯದಂತೆ ಎಚ್ಚರ ವಹಿಸಬಹುದು. ಇದರ ಜತೆಗೆ ಕಾನೂನು ಕೂಡ ಮಕ್ಕಳೊಂದಿಗಿದೆ. ಏನೇ ಸಮಸ್ಯೆ ಆದರೂ ಪೊಲೀಸರು ಮನೆಗೆ ಬಂದು ಎಫ್.ಐ.ಆರ್. ತೆಗೆದುಕೊಳ್ಳುತ್ತಾರೆ ಹಾಗೂ ತೊಂದರೆ ನೀಡಿದವರಿಗೆ ಕಠಿಣ ಶಿಕ್ಷೆ ಕೊಡಿಸುತ್ತಾರೆ ಎಂದು ಲಯನ್ ಕ್ಲಬ್ ಸದಸ್ಯೆ ಹರಿಣಾಕ್ಷಿ ಜೆ. ಶೆಟ್ಟಿ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಶನಿವಾರ ಲಯನ್ ಕ್ಲಬ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಪೋಕ್ಸೋ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಲಯನ್ ಕ್ಲಬ್‌ನ ಅಧ್ಯಕ್ಷೆ ಪ್ರೇಮಲತಾ ರಾವ್ ಮಾತಾಡಿ ಮಕ್ಕಳು ಸಮಾಜದಲ್ಲಿರುವ ಕಾಮುಕರಿಂದ ಜಾಗೃತರಾಗಿರಬೇಕೆಂದರು. ಅಂಬಿಕಾ ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ.ಡಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಕ್ಕಳು ಅಪಾಯಕಾರಿ ಸನ್ನಿವೇಶ ಬರುವುದಕ್ಕೂ ಮೊದಲು ಜಾಗೃತರಾಗಿರಬೇಕು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಲಯನ್ ಕ್ಲಬ್‌ನ ಸದಸ್ಯೆಯರಾದ, ದಕ್ಷಿಣ ಕನ್ನಡ ಶೈಕಣಿಕ ಸಂಪನ್ಮೂಲ ಒಕ್ಕೂಟದ ಲಯನ್ ನಯನಾ ರೈ, ಲಯನ್ ಪ್ರೇಮ, ಸಂಸ್ಥೆಯ ಉಪಪ್ರಾಚಾರ್ಯೆ ಸುಜನಿ ಬೋರ್ಕರ್,
ಶಾಲಾ ಶಿಕ್ಷಕಿಯರಾದ ಕೃತಿಕಾ, ಶ್ರೀಲಕ್ಷ್ಮಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಸಾನ್ವಿಕಾ ಸ್ವಾಗತಿಸಿದರೆ, ವಿದ್ಯಾ ಪೈ ವಂದಿಸಿದರು ಹಾಗೂ ಹೃನ್ಮಯಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.