Tuesday, April 8, 2025
ಬೆಂಗಳೂರುರಾಜ್ಯಸಂತಾಪಸುದ್ದಿ

” ಯಾರನ್ನೂ ದ್ವೇಷಿಸಲಿಲ್ಲ ” ಎಸ್.ಎಂ ಕೃಷ್ಣ ಅಗಲಿಕೆಯ‌ ಕುರಿತು ನೋವು ಹಂಚಿಕೊಂಡ ನಟಿ ರಮ್ಯಾ – ಕಹಳೆ ನ್ಯೂಸ್

ಬೆಂಗಳೂರು/ಮಂಡ್ಯ: ಕರುನಾಡು ಕಂಡ ಅದಮ್ಯ ಚೇತನ, ಸೌಮ್ಯ ಸ್ವಭಾವದ ಅಜಾತಶತ್ರು, ದೂರದೃಷ್ಟಿಯ ಕನಸುಗಾರ ಮಾಜಿ ಸಿಎಂ ಎಸ್‌.ಎಂ‌ ಕೃಷ್ಣ (SM ಕೃಷ್ಣ) ಅವರ ಅಗಲಿಕೆಯ ಕುರಿತು ನಟಿ ಹಾಗೂ ಮಾಜಿ ಸಂಸದೆ ರಮ್ಯಾ ನೋವಿನ ನುಡಿಗಳನ್ನು ಹಂಚಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ತಮ್ಮ ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಕುರಿತು ಭಾವುಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ʻʻಒಬ್ಬ Statesman ಎಲ್ಲಾ ಅರ್ಥಗಳಲ್ಲಿ ರಾಜಕಾರಣಿ ಎಂದಿಗೂ ಅಲ್ಲ. ಅವರು ಯಾರನ್ನೂ, ತಮ್ಮ ಪ್ರತಿಸ್ಪರ್ಧಿಗಳನ್ನು ಸಹ ದ್ವೇಷಿಸಿ ಮಾತನಾಡಲಿಲ್ಲ. ಭವಿಷ್ಯದ ದೃಷ್ಟಿಯುಳ್ಳವ, ದಯಾಮಯಿ ಅನುಕಂಪದಿಂದ ಕೂಡಿರುವ, ಸುಂದರವಾಗಿ ಮಾತನಾಡುವ, ವಿದ್ಯಾವಂತ, ಹಾಸ್ಯಭರಿತ ವ್ಯಕ್ತಿತ್ವದವರು ನೀವು… ನಿಮ್ಮಂತೆ ಮತ್ತೊಬ್ಬರು ಇರಲು ಆಗುವುದಿಲ್ಲ.. ಎಲ್ಲದಕ್ಕಾಗಿ ಧನ್ಯವಾದಗಳು… ಎಂದು ಬರೆದುಕೊಂಡಿದ್ದಾರೆ. ಕೊನೆಯಲ್ಲಿ ನೀವು ಈಗ ನಿಮ್ಮ ಬೆಸ್ಟ್‌ಫ್ರೆಂಡ್‌ ಜೊತೆಗೆ ಇದ್ದೀರಾ ಎಂದು ಬರೆದು ಹಾರ್ಟ್‌ ಎಮೊಜಿ ಹಾಕಿದ್ದಾರೆ.

ಮಂಗಳವಾರ (ಡಿ.10) ಸದಾಶಿವನಗರ ಆಗಮಿಸಿ ಎಸ್‌ಎಂ ಕೃಷ್ಣ (SM Krishna) ಪಾರ್ಥಿವ ಶರೀರಕ್ಕೆ ಆಗಮಿಸಿದ್ದ ರಮ್ಯಾ ಅಂತಿಮ ನಮನ ಸಲ್ಲಿಸಿ, ಯಾವುದೇ ಪ್ರತಿಕ್ರಿಯೆ ನೀಡದೇ ಹೊರಟಿದ್ದರು. ಈಗ ನಾನು ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಎಂದು ಹೇಳಿ ತೆರಳಿದ್ದರು.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ