ಮಂಗಳೂರಲ್ಲಿ ಸಹಾಯ ಮಾಡಲು ಬಂದು ಜ್ಯೂಸ್ ನೀಡಿ ಪ್ರಜ್ಞೆ ತಪ್ಪಿಸಿ ಅನ್ಯಮತೀಯ ಯುವತಿ ಮೇಲೆ ಕಾಮುಕ ಮಹಮ್ಮದ್ ಶಫೀನ್ ನಿಂದ ಅತ್ಯಾಚಾರ – ಕಹಳೆ ನ್ಯೂಸ್
– ಯುವತಿಯ ಹಣ, ಕಾರು ದೋಚಿ ವಿದೇಶಕ್ಕೆ ಆರೋಪಿ ಪರಾರಿ
ಮಂಗಳೂರು: ಸಹಾಯ ಮಾಡಲು ಬಂದು ಪ್ರಜ್ಞೆ ತಪ್ಪಿಸಿ ಯುವತಿ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಅನ್ಯಮತೀಯ ಯುವಕನ ಮೇಲೆ ಕೇಳಿಬಂದಿದೆ.
ಮಹಮ್ಮದ್ ಶಫೀನ್ ಎಂಬಾತನ ವಿರುದ್ಧ ಯುವತಿ ಅತ್ಯಾಚಾರ ಆರೋಪ ಮಾಡಿದ್ದಾರೆ. ಮಂಗಳೂರಿನ (Mangaluru) ಕದ್ರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಸಹಾಯ ಮಾಡಲು ಬಂದಿದ್ದವನು ಮತ್ತು ಬರಿಸುವ ಜ್ಯೂಸ್ ನೀಡಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆಂಬ ಆರೋಪವಿದೆ. ಬಳಿಕ ಸಂತ್ರಸ್ತೆಯಿಂದ ಹಣ, ಕಾರು ದೋಚಿ ವಿದೇಶಕ್ಕೆ ಪರಾರಿಯಾಗಿದ್ದಾನೆ. ಆಗಸ್ಟ್ 1 ರಂದು ಘಟನೆ ನಡೆದಿದ್ದು, ಯುವತಿ ಈಗ ಪೊಲೀಸರ ಮೊರೆ ಹೋಗಿದ್ದಾಳೆ.
ಪ್ರಕರಣ ಏನು?
ಜುಲೈ 21 ರಂದು ಯುವತಿಯ ಕಾರು ಕದ್ರಿಯಲ್ಲಿ ಕೆಟ್ಟು ನಿಂತಿತ್ತು. ಈ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಬೈಕ್ ಸವಾರ ಮೊಹಮ್ಮದ್ ಶಫಿನ್ ಕಾರನ್ನು ಸರಿಪಡಿಸಿದ್ದ. ಬಳಿಕ ಆಕೆಯನ್ನು ಅದೇ ಕಾರಿನಲ್ಲಿ ಕೊಡಿಯಾಲಬೈಲಿನ ಅಪಾರ್ಟ್ಮೆಂಟ್‌ನಲ್ಲಿ ಆಕೆಯ ಮನೆಗೆ ಬಿಟ್ಟು ಬಂದಿದ್ದ. ಈ ವೇಳೆ ಆಕೆಯ ಮೊಬೈಲ್ ನಂಬರ್ ಪಡೆದಿದ್ದ. ಕೊಡಿಯಾಲಬೈಲ್‌ನ ಅಪಾರ್ಟ್ಮೆಂಟ್‌ನಲ್ಲಿ ಯುವತಿ ಏಕಾಂಗಿಯಾಗಿ ನೆಲೆಸಿದ್ದಳು.
ಆಗಸ್ಟ್ 1 ರಂದು ಯುವತಿ ತಮ್ಮ ಮನೆಯ ಫ್ರಿಡ್ಜ್ ಕೆಟ್ಟು ಹೋಗಿದ್ದು, ಸಹಾಯಕ್ಕಾಗಿ ಶಫೀನ್‌ಗೆ ಕರೆ ಮಾಡಿದ್ದಾಳೆ. ಆತ ರಿಪೇರಿಯವರನ್ನು ಯುವತಿಯ ಮನೆಗೆ ಕರೆದುಕೊಂಡು ಬಂದು ರಿಪೇರಿ ಮಾಡಿಸಿದ್ದ. ಬಳಿಕ ಶಫೀನ್ ಹಣ್ಣು ಹಾಗೂ ಜ್ಯೂಸ್ ತಂದಿದ್ದ. ಈ ಜ್ಯೂಸ್ ಕುಡಿದ ಯುವತಿಗೆ ಪ್ರಜ್ಞೆ ತಪ್ಪಿದ್ದು, ಎಚ್ಚರಗೊಂಡಾಗ ಆತ ದೈಹಿಕ ಸಂಪರ್ಕ ನಡೆಸಿರುವುದಾಗಿ ತಿಳಿಸಿದ್ದ. ವಿಡಿಯೋ ಮಾಡಿದ್ದು, ಮುಂದೆ ಸಹಕಾರ ನೀಡದಿದ್ದರೆ ವಿಡಿಯೋ ವೈರಲ್ ಮಾಡುವ ಬೆದರಿಕೆ ಹಾಕಿದ್ದ. ಅಲ್ಲದೆ, ಈ ಸಂದರ್ಭದಲ್ಲಿ ಆಕೆಯ ಕಾರನ್ನು ತೆಗೆದುಕೊಂಡು ಹೋಗಿದ್ದ.
ಆತನಿಂದ ಕಾರನ್ನು ಪಡೆದುಕೊಳ್ಳಲು ಆಗಸ್ಟ್ 25 ರಂದು ಆತನ ವಿಳಾಸ ಹುಡುಕಿಕೊಂಡು ದೇರಳಕಟ್ಟೆಯ ಅಪಾರ್ಟ್ಮೆಂಟ್‌ಗೆ ಯುವತಿ ಹೋಗಿದ್ದಳು. ಶಫೀನ್ ಮನೆಗೆ ಹೋದಾಗ ಆತನ ಅಣ್ಣ ಮೊಹಮ್ಮದ್ ಶಿಯಾಬ್‌ನಿಂದಲೂ ಅತ್ಯಾಚಾರ ಮಾಡಲು ಯತ್ನ ನಡೆದಿದೆ. ಶಿಯಾಬ್ ಕೈಯಿಂದ ತಪ್ಪಿಸಿಕೊಂಡು ಬಂದು ಯುವತಿ ಮಾನ ಉಳಿಸಿಕೊಂಡಿದ್ದಳು. ಅ.27 ರಂದು ರಾತ್ರಿ 9 ಗಂಟೆಗೆ ಮತ್ತೆ ಯುವತಿಯ ಮನೆಗೆ ಶಫೀನ್ ಬಂದಿದ್ದ. ಯುವತಿಯ ಮನೆಗೆ ಪ್ರವೇಶಿಸಿ ಆಕೆಯ ಬ್ಯಾಗ್‌ನಲ್ಲಿದ್ದ 62,000 ರೂ. ಕಳ್ಳತನ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಪ್ರಮುಖ ಆರೋಪಿಗಳಾದ ಶಫೀನ್ ಹಾಗೂ ಸಹೋದರ ಶಿಯಾಬ್ ವಿದೇಶ ಪರಾರಿಯಾಗಿದ್ದಾರೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಲುಕೌಟ್ ನೋಟೀಸ್ ಜಾರಿ ಮಾಡಿದ್ದಾರೆ.