Recent Posts

Sunday, November 17, 2024
ಅಂಕಣ

ಕೆ. ಗೋಪಾಲಕೃಷ್ಣ ಭಟ್ ಕಟ್ಟೆತ್ತಿಲ ಅವರ ” ಶ್ರೀಗುರು ಪಾದಪದ್ಮ ” ಕವನ – ೫

” ಸಾಗರ “

ಸಾಗರವೇ ಶಿವ ಪಾಗರವೇ ಸಗರನ ನಗರವೇ ಭೂಶಿರ I
ಸಾಹಸಿಗೆ ಸುಲಭ ಸಹಜವು ಕಠಿಣವು ಸಂಸಾರ ಸಾಗರ II
ಸಾಗರದಲೆಗಳು ಬಡಿದೆಬ್ಬಿಸುತಲಿವೆ ಹಳೆನೆನಪಿನ ಮಹಪೂರ I
ವಿಶಾಲವಾದ ಅಂಬರದಾಚಿನ ಮೊಳೆಯುವ ನವಯುಗ ಚಿತ್ತಾರ II

ಸೂರ್ಯ ರಶ್ಮಿಯು ಮೆಲುಕಾಡುತಲಿದೆ ಹೃದಯಂಗಳದ ಮಂಗಳ I
ಚಂದಿರನ ಹೂನಗೆಮಲ್ಲಿಗೆ ತೆರದಲೆ ಸೆಳೆದೋಡಿವೆ ಕಂಗಳ II
ಸಾಗರದೊಳು ಒಳಹುದುಗಿವೆ ಏನೋ ಹೊಳಹೊಳಪ
ವಜ್ರಗಳು I
ಹುಡುಕಾಡುತ ಒಳ ಒಳ ಹೋದರೆ ಮಿನುಗುವ ಮುತ್ತುn ರತ್ನಗಳು II

ಜಾಹೀರಾತು
ಜಾಹೀರಾತು
ಜಾಹೀರಾತು

ಆಗರ್ಭವೆ ಭೂಗರ್ಭ ಒಡಲೊಳು ಚಿನ್ನವನ್ನು ಹೊತ್ತಿಹ ಶ್ರೀಗರ್ಭ l
ನಾರಯಣದೇವ ಆದಿಶೇಷನಲಿ ಪವಡಿಪ ನೆಲೆ ಹಿರಣ್ಯಗರ್ಭ ll
ಸಾಗರವೇ ಜನಸಾಗರವೇ ಶ್ರೀವರ ನೆಲೆಸಿಹ ಕೃಪಾಸಾಗರ l
ಸೀತಾರಾಮರ ಅನುಗ್ರಹವಿರುವ ಭಕ್ತಿಯ ಆಗರ ಸಾಗರ ll

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response