Thursday, December 12, 2024
ದಕ್ಷಿಣ ಕನ್ನಡಪುತ್ತೂರು

ಬಲ್ನಾಡು ಗ್ರಾಮ ಅರಣ್ಯ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಾಜ ರಾಧಾಕೃಷ್ಣ ಆಳ್ವ  – ಕಹಳೆ ನ್ಯೂಸ್

ಪುತ್ತೂರು: ಬಲ್ನಾಡು ಗ್ರಾಮ ಅರಣ್ಯ ಸಮಿತಿ ಕಾರ್ಯಕಾರಿಣಿಗೆ ಮುಂದಿನ 5 ವರ್ಷಕ್ಕೆ ನೂತನ ಅಧ್ಯಕ್ಷರಾಗಿ ಸಾಜ ರಾಧಾಕೃಷ್ಣ ಆಳ್ವ ಆಯ್ಕೆಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಲ್ನಾಡು ಗ್ರಾಮದ ಸಾಜ ಸ.ಹಿ.ಪ್ರಾ.ಶಾಲೆಯಲ್ಲಿ ನಡೆದ ಗ್ರಾಮ ಅರಣ್ಯ ಸಮಿತಿ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.ಸಮಿತಿ ಸದಸ್ಯ ಕಾರ್ಯದರ್ಶಿಯಾಗಿ ಉಪವಲಯ ಅರಣ್ಯಾಧಿಕಾರಿ ವೀರಣ್ಣರಿದ್ದು, ಸಮಿತಿಯಲ್ಲಿ 172 ಮಂದಿ ಸದಸ್ಯರ ಪೈಕಿ ಚಂದಪ್ಪ ಪೂಜಾರಿ ಕೆ, ಸುಂದರ ಎಂ, ಕುಟ್ಟಿನಲಿಕೆ ಕೆ, ಪ್ರವೀಣಚಂದ್ರ ಆಳ್ವ, ಅಣ್ಣಿ ಪೂಜಾರಿ ಸಾರ್ಯ, ಉಷಾ ಸಾಜ, ಕಮಲಾಕ್ಷಿ ಸಾಜ, ವಸಂತಿ ಸಾಜ, ನಳಿನಿ ಕೆ. ಕುಸುಮ ಎಂ ಅವರು ನಿರ್ದೇಶಕರಾಗಿ ಆಯ್ಕೆಯಾದರು. ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ. ಈ ಸಂದರ್ಭ ಉಪಸ್ಥಿತರಿದ್ದರು. ಪುತ್ತೂರು ಹೋಬಳಿಯ ಕಂದಾಯ ನಿರೀಕ್ಷಕ ಕೆ.ಟಿ.ಗೋಪಾಲ ಚುನಾವಣಾಧಿಕಾರಿಯಾಗಿದ್ದರು.