Sunday, January 19, 2025
ದಕ್ಷಿಣ ಕನ್ನಡಪುತ್ತೂರುಬಂಟ್ವಾಳಮಂಗಳೂರುಸಿನಿಮಾ

ತುಳುನಾಡಿನಾದ್ಯಂತ ಡಿ.13ರಂದು (ನಾಳೆ) ಬಹುನೀರಿಕ್ಷಿತ ದಸ್ಕತ್ ತುಳು ಚಲನಚಿತ್ರ ಬಿಡುಗಡೆ – ಕಹಳೆ ನ್ಯೂಸ್

ಮಂಗಳೂರು : ತುಳುನಾಡಿನಾದ್ಯಂತ ಡಿ.13ರಂದು (ನಾಳೆ) ಕಾಮಿಡಿ ಕಿಲಾಡಿ ಖ್ಯಾತಿಯ ಅನೀಶ್ ಪೂಜಾರಿ ವೇಣೂರು ನಿರ್ದೇಶನದ ಕರಾವಳಿ ಸೊಡಗಿನ ಬಹುನೀರಿಕ್ಷಿತ “ದಸ್ಕತ್” ತುಳು ಚಲನಚಿತ್ರವು ಬಿಡುಗಡೆಯಾಗಲಿದೆ.

ತುಳುನಾಡಿನ ಎಲ್ಲಾ ಮಲ್ಟಿಫ್ಲೆಕ್ಸ್ ಚಿತ್ರಮಂದಿರದಲ್ಲಿ ನಾಳೆ “ದಸ್ಕತ್” ತುಳು ಚಲನಚಿತ್ರ ಬಿಡುಗಡೆಯಾಗಲಿದ್ದು, ಚಿತ್ರದ ಮೊದಲ ಒಂದು ದಿನದ ಶೋ ನ ಟಿಕೆಟ್ ದರ ಕೇವಲ 99/- ಮಾತ್ರ ಈ ಮೂಲಕ ಪ್ರೇಕ್ಷಕರಿಗೆ ಬಂಪರ್ ಆಫರ್ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಚಿತ್ರವನ್ನು ಕೃಷ್ಣ ಜೆ ಪಾಲೆಮಾರ್ ಅರ್ಪಿಸಿದ್ದು, ರಾಘವೇಂದ್ರ ಕುಡ್ವ ನಿರ್ಮಾಪಕರಾಗಿದ್ದಾರೆ. ಛಾಯಾಗ್ರಹಣವನ್ನು ಸಂತೋಷ್ ಆಚಾರ್ಯ ಗುಂಪಲಾಜೆ ನಿರ್ವಹಿಸಿದ್ದಾರೆ, ಸಂಕ್ಷಿಪ್ತ ಚಿತ್ರಕಥೆಯನ್ನು ಗಣೇಶ್ ನೀರ್ಚಾಲ್ ಅವರು ಸಂಯೋಜಿಸಿದ್ದಾರೆ. ಸಂಗೀತವನ್ನು ಸಮರ್ಥನ್ ಎಸ್ ರಾವ್ ರಚಿಸಿದ್ದಾರೆ. ತಂಡದಲ್ಲಿ ಸ್ಮಿತೇಶ್ ಬಾರ್ಯ, ವಿನೋದ್ ರಾಜ್ ಕಲ್ಮಂಜ, ನಿಶಿತ್ ಶೆಟ್ಟಿ, ಮನೋಜ್ ಆನಂದ್, ದೀಕ್ಷಿತ್ ಧರ್ಮಸ್ಥಳ, ಇವು ಪ್ರಮುಖವಾಗಿ ಸೇರಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಾರಾಗಣದಲ್ಲಿ ದೀಕ್ಷಿತ್ ಕೆ ಅಂಡಿAಜೆ, ನೀರಜ್ ಕುಂಜರ್ಪ, ಮೋಹನ್ ಶೇಣಿ, ಮಿಥುನ್ ರಾಜ್, ಭವ್ಯ ಪೂಜಾರಿ, ಚಂದ್ರಹಾಸ ಉಲ್ಲಾಳ, ನವೀನ್ ಬೋಂದೆಲ್, ಯೋಗೀಶ್ ಶೆಟ್ಟಿ, ಚೇತನ್ ಪಿಲಾರ್, ತಿಮ್ಮಪ್ಪ ಕುಲಾಲ್ ಮುಂತಾದವರು ತಮ್ಮ ಪಾತ್ರಗಳನ್ನು ವಹಿಸಿದ್ದಾರೆ.