ಪುಷ್ಪ- 2 ಸಿನಿಮಾ ಬಿಡುಗಡೆ ವೇಳೆ ಕಾಲ್ತುಳಿತಕ್ಕೆ ಸಿಕ್ಕಿ ಮಹಿಳೆ ಸಾವು ಪ್ರಕರಣ : ನಟ ಅಲ್ಲು ಅರ್ಜುನ್ ಅರೆಸ್ಟ್..!- ಕಹಳೆ ನ್ಯೂಸ್
ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿದೆ. ಇದಕ್ಕೆ ಕಾರಣ ಈ ಹಿಂದೆ ಆದ ಘಟನೆ. ಪುಷ್ಪ ದಿ ರೂಲ್ ಚಿತ್ರದ ಪ್ರದರ್ಶನದ ವೇಳೆ ಮಹಿಳೆಯೊಬ್ಬರು ಕಾಲ್ತುಳಿತಕ್ಕೆ ಸಿಕ್ಕಿ ಮೃತರಾಗಿದ್ದರು. ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿದೆ.
ಪುಷ್ಪ ದಿ ರೂಲ್ ಚಿತ್ರದ ಪ್ರದರ್ಶನದ ವೇಳೆ ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ಪ್ರಕರಣದಲ್ಲಿ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿದೆ. ಶುಕ್ರವಾರ ಇಂದು ಡಿಸೆಂಬರ್ 13ರಂದು ಅಲ್ಲು ಅರ್ಜುನ್ ಅವರನ್ನು ಅವರ ನಿವಾಸದಿಂದ ಕರೆದೊಯ್ಯಲಾಗಿದೆ. ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ.
ಪುಷ್ಪ 2 ದಿ ರೂಲ್ ಸ್ಕ್ರೀನಿಂಗ್ ವೇಳೆ ನಡೆದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಡಿಸೆಂಬರ್ 4 ರಂದು ಹೈದರಾಬಾದ್‌ನ ಥಿಯೇಟರ್‌ನಲ್ಲಿ ಅವರ ಇತ್ತೀಚಿನ ಚಿತ್ರ ಪುಷ್ಪ 2: ದಿ ರೂಲ್‌ನ ಪ್ರೀಮಿಯರ್ ಶೋನಲ್ಲಿ ಕಾಲ್ತುಳಿತ ಉಂಟಾಗಿತ್ತು. ಇನ್ನೊಂದು ಮಗು ಕೂಡ ಈ ಸಂದರ್ಭದಲ್ಲಿ ಗಾಯಗೊಂಡಿತ್ತು. ಯ ಪುಷ್ಪ 2 ಚಿತ್ರ ಬಿಡುಗಡೆಯಾಗಿದೆ. ಆದರೆ, ಚಿತ್ರಕ್ಕೆ ಹಲವು ವಿಘ್ನಗಳು ಎದುರಾಗುತ್ತಲೇ ಇದೆ.
ಅಂದು ಏನಾಗಿತ್ತು?
ಪುಷ್ಪ 2; ದಿ ರೂಲ್ ಚಿತ್ರ ಡಿಸೆಂಬರ್ 5ರ ಗುರುವಾರ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಅದಕ್ಕೂ ಮುನ್ನ ನಡೆದ ಪ್ರೀಮಿಯರ್ ಶೋ ನೋಡಲು ಹೈದರಾಬಾದ್‌ನ ಕುಟುಂಬ ಚಿತ್ರಮಂದಿರಕ್ಕೆ ಭೇಟಿ ನೀಡಿತ್ತು ಅದೇ ಸಂದರ್ಭದಲ್ಲಿ ಕಾಲ್ತುಳಿತ ಕೂಡ ಉಂಟಾಯಿತು. ಮೃತ ಮಹಿಳೆಯನ್ನು 39 ವರ್ಷದ ರೇವತಿ ಎಂದು ಗುರುತಿಸಲಾಗಿತ್ತು. ಅವರ ಒಂಬತ್ತು ವರ್ಷದ ಮಗ ಶ್ರೀ ತೇಜಾನನ್ನು ಆಂಬ್ಯುಲೆನ್ಸ್‌ನಲ್ಲಿ ಹತ್ತಿರದ ಆಸ್ಪತ್ರೆಗೆ ಕಳುಹಿಸಲಾಗಿತ್ತು.
ದಿಲ್‌ಸುಖ್‌ನಗರ ನಿವಾಸಿಯಾದ ರೇವತಿ, ಶ್ರೀ ತೇಜಾ ಅವರ ಪತಿ ಭಾಸ್ಕರ್ ಮತ್ತು ಕಿರಿಯ ಮಗುವಿನೊಂದಿಗೆ ಆರ್‌ಟಿಸಿ ಕ್ರಾಸ್ ರೋಡ್‌ನಲ್ಲಿರುವ ಸಂಧ್ಯಾ ಥಿಯೇಟರ್‌ಗೆ ಬಂದಿದ್ದರು. ರಾತ್ರಿ 10.30ರ ಸುಮಾರಿಗೆ ಕುಟುಂಬದೊಂದಿಗೆ ಥಿಯೇಟರ್‌ನಿಂದ ಹೊರಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿತ್ತು.