ನವದೆಹಲಿ: ಚಿನ್ನಾಭರಣ ಖರೀದಿಸುವವರಿಗೆ ಸಿಹಿ ಸುದ್ದಿ . ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆ ಆಧರಿಸಿ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಕುಸಿತ ಕಂಡಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶೇಕಡ 99.9ರಷ್ಟು ಶುದ್ಧತೆಯ 10 ಗ್ರಾಂ ಚಿನ್ನದ ದರ 1400 ರೂ.ಕುಸಿತ ಕಂಡಿದ್ದು, 79,500 ರೂಪಾಯಿಗೆ ಮಾರಾಟವಾಗಿದೆ.
ಶೇಕಡ 99.5 ಶುದ್ಧತೆಯ ಚಿನ್ನದ ದರ 10 ಗ್ರಾಂ ಗೆ 80,500 ರೂಪಾಯಿ ಇದ್ದು, 79,100 ರೂಪಾಯಿಗೆ ಇಳಿದಿದೆ. ಬೆಳ್ಳಿ ದರ ಕೆಜಿಗೆ 4200 ರೂ.ನಷ್ಟು ಕುಸಿತವಾಗಿದೆ. 92,800 ರೂ.ಗೆ ಮಾರಾಟವಾಗಿದೆ. ಕೆಜಿ ಬೆಳ್ಳಿ ದರ 97,000 ರೂ. ಇತ್ತು.