Wednesday, January 22, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ: ತಲೆಮರೆಸಿಕೊಂಡಿದ್ದ ಆರೋಪಿ ಅಬ್ದುಲ್ ಅಜೀಜ್ ಮುಂಬಯಿಯಲ್ಲಿ ಅರೆಸ್ಟ್-ಕಹಳೆ ನ್ಯೂಸ್

ಬಂಟ್ವಾಳ : ವಂಚನೆ ಪ್ರಕರಣದ ಆರೋಪಿಯಾಗಿದ್ದು, ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯನ್ನು ಬಂಟ್ವಾಳ ನಗರ ಠಾಣಾ
ಪೋಲೀಸರು ಮುಂಬಯಿಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಪುತ್ತೂರು ತಾಲೂಕಿನ ಸಂಪ್ಯ ನಿವಾಸಿ ಅಬ್ದುಲ್ ಅಜೀಜ್ ಎಂಬಾತನ್ನು ಬಂಧಿಸಲಾಗಿದ್ದು, ಈತನ ಮೇಲೆ ಬಂಟ್ವಾಳ ನಗರ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸುಮಾರು ನಾಲ್ಕು ವಂಚನೆ ಪ್ರಕರಣಗಳು ದಾಖಲಾಗಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಂಚನೆ ಸಹಿತ ಇನ್ನಿತರ ಪ್ರಕರಣಗಳಲ್ಲಿ ಈತನ ಮೇಲೆ ಪ್ರಕರಣ ದಾಖಲಾಗಿದ್ದು, ಈತ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.ಇದೀಗ ಆರೋಪಿಯನ್ನು ಬಂಟ್ವಾಳ ಉಪವಿಭಾಗದ ಡಿ.ವೈ.ಎಸ್.ಪಿ.ವಿಜಯಪ್ರಸಾದ್ ಅವರ ಮಾರ್ಗದರ್ಶನದಲ್ಲಿ , ಬಂಟ್ವಾಳ ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ಆನಂತಪದ್ಮನಾಭ ಹಾಗೂ ಪೋಲೀಸ್ ಉಪನಿರೀಕ್ಷಕರುಗಳಾದ ರಾಮಕೃಷ್ಣ, ಕಲೈಮಾರ್, ದುರ್ಗಪ್ಪ, ಗೋಪಾಲಅವರ ನೇತ್ರತ್ವದಲ್ಲಿ ಎ.ಎಸ್.ಐ.ಸುಜು, ಹೆಚ್.ಸಿ. ಜಗದೀಶ್ ಅವರು ಮಾಹಿತಿ ಸಂಗ್ರಹಿಸಿ ಮಹಾರಾಷ್ಟ್ರದ ಮುಂಬಯಿ ಎಂಬಲ್ಲಿಗೆ ತೆರಳಿ ಬಂಧಿಸಿದ್ಧಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು