Monday, March 31, 2025
ದಕ್ಷಿಣ ಕನ್ನಡಮಂಗಳೂರುಯಕ್ಷಗಾನ / ಕಲೆಸಂತಾಪಸುದ್ದಿ

ಮೊದಲ ‘ಮಹಿಳಾ ಭಾಗವತ’ ರೆಂಬ ಖ್ಯಾತಿಯ ಲೀಲಾವತಿ ಬೈಪಾಡಿತ್ತಾಯ ಇ*ನ್ನಿಲ್ಲ – ಕಹಳೆ ನ್ಯೂಸ್

ಮಂಗಳೂರು: ತೆಂಕು ತಿಟ್ಟು ಯಕ್ಷಗಾನ ರಂಗದ ಪ್ರಥಮ ವೃತ್ತಿಪರ ಯಕ್ಷಗಾನ ಭಾಗವತರಾದ ಲೀಲಾವತಿ ಬೈಪಡಿತ್ತಾಯ(78) ಶನಿವಾರ(ಡಿ14) ವಯೋಸಹಜ ಅ*ನಾರೋಗ್ಯದಿಂದ ಬಜಪೆ ತಲಕಳದ ಸ್ವಗೃಹದಲ್ಲಿ ನಿ*ಧನ ಹೊಂದಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕೇರಳದ ಕಾಸರಗೋಡಿನ ಮಧೂರಿನಲ್ಲಿ 1947 ನೇ ಮೇ 23 ರಂದು ಲೀಲಾವತಿ ಬೈಪಡಿತ್ತಾಯ ಜನಿಸಿದರು. ಸುಮಾರು ನಾಲ್ಕು ದಶಕಗಳ ಕಾಲ ತಮ್ಮ ಕಂಠಸಿರಿಯಿಂದ ಜನಮನ ಗೆದ್ದಿದ್ದರು. ಪತಿಹಿರಿಯ ಹಿಮ್ಮೇಳವಾದಕ ಹರಿನಾರಾಯಣ ಬೈಪಡಿತ್ತಾಯರ ಅವರೊಂದಿಗೆ ಸುಬ್ರಹ್ಮಣ್ಯ, ಪುತ್ತೂರು, ಕದ್ರಿ, ಕುಂಬಳೆ, ಬಪ್ಪನಾಡು ಮೇಳ, ತಲಕಳ ಮುಂತಾದ ಡೇರೆ-ಬಯಲಾಟ ಮೇಳಗಳಲ್ಲಿ ವೃತ್ತಿ ಕಲಾವಿದರಾಗಿಯೂ, ಅತಿಥಿ ಕಲಾವಿದರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರ ಸಾಧನೆ ಗುರುತಿಸಿ, ರಾಜ್ಯ ಸರ್ಕಾರ 2010 ರಲ್ಲಿ ಕರ್ನಾಟಕದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿತ್ತು. 2023ರಲ್ಲಿ ರಾಜ್ಯ ಸರಕಾರ ರಾಜ್ಯೋತ್ಸವ ಪ್ರಶಸ್ತಿ. ಆಳ್ವಾಸ್ ನುಡಿಸಿರಿ, ಉಳ್ಳಾಲ ಅಬ್ಬಕ್ಕ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಸನ್ಮಾನವನ್ನು ಪಡೆದಿದ್ದಾರೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ