Recent Posts

Sunday, January 19, 2025
ಸಿನಿಮಾಸುದ್ದಿ

ಕೆಜಿಎಫ್ ಹಬ್ಬ: ಶುಭ ಹಾರೈಸಿದ ಕಿಚ್ಚ ಸುದೀಪ್ – ಕಹಳೆ ನ್ಯೂಸ್

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಬಹು ಕಾತುರದಿಂದ ಕಾಯ್ತ ಇದ್ದ ಆ ದಿನ ಬಂದೇ ಬಿಡ್ತು. ನಿನ್ನೆ ತಾನೆ ರಿಲೀಸಾದ ಟ್ರೇಲರ್ ನೋಡಿ ಫ್ಯಾನ್ಸ್ ಅಂತೂ ಸಖತ್ ಥ್ರಿಲ್ ಆಗಿದ್ದಾರೆ. ಕೆಜಿಎಫ್ ರಾಕಿ ಆರ್ಭಟಕ್ಕೆ ಮುಹೂರ್ತ ಕೂಡ ಫಿಕ್ಸಾಗಿದೆ.

ಒಂದು ಕಾಲದಲ್ಲಿ ಯಶ್ ಸಿನೆಮಾ ಅಂದ್ರೆ ಅಷ್ಟೊಂದು ಹೈಪ್ ಇರ್ತಿರ್ಲಿಲ್ಲ. ಯಶ್ ಸಿನೆಮಾದ ಮೇಲೆ ಹೇಳಿಕೊಳ್ಳುವಷ್ಟು ಕ್ಯೂರಿಯೋಸಿಟಿ ಕೂಡ ಇರ್ತಿರ್ಲಿಲ್ಲ. ಆದ್ರೆ ಈಗ ಎಲ್ಲಾ ಉಲ್ಟಾ. ಯಶ್ ಸಿನೆಮಾ ಗಾಂಧಿನಗರಕ್ಕೆ ಬರ್ತಾ ಇದೆ ಅಂದ್ರೆ ಅಲ್ಲಿ ಹುಚ್ಚು ಅಭಿಮಾನಿಗಳ ಆರ್ಭಟ ಇರುತ್ತೆ. ಅವರ ಸಿನೆಮಾ ಬೇರೆ ಇಂಡಸ್ಟ್ರಿಗೂ ಸಖತ್ ಫೈಟ್ ಕೊಡುತ್ತೆ. ಸ್ಯಾಂಡಲ್ ವುಡಲ್ಲಿ ಯಶ್ ಹೊಸ ದಾಖಲೆ ಸೃಷ್ಟಿ ಮಾಡ್ತಾರೆ ಅನ್ನೋ ನಂಬಿಕೆ ಬೇರೆ ಇರುತ್ತೆ.ಇದೀಗ ಇಂತದ್ದೆ ಹವಾ ಮತ್ತೆ ಶುರುವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು ಯಶ್ ಅಭಿನಯದ ಬಹು ನಿರೀಕ್ಷಿತ ಕೆಜಿಎಫ್ ಸಿನೆಮಾದ ಅಫೀಶಿಯಲ್ ಟ್ರೇಲರ್ ನಿನ್ನೆಯಷ್ಟೆ ರಿಲೀಸಾಗಿದೆ. ರಾಕಿ ಖದರ್ ಟ್ರೇಲರ್ ನಲ್ಲಿ ಔಟ್ ಸ್ಟ್ಯಾಂಡಿಂಗ್ ಆಗಿ ಕಂಡು ಬಂದಿದೆ. ಸತತ ಎರಡು ವರ್ಷಗಳಿಂದ ಚಿತ್ರೀಕರಣವಾಗಿ ಇದೀಗ ಚಿತ್ರತಂಡ ಗ್ರ್ಯಾಂಡಾಗಿ ,ಟ್ರೇಲರ್ ರಿಲೀಸ್ ಮಾಡಿದೆ. ಟ್ರೇಲರ್ ಬಿಡುಗಡೆ ಆಗಿದ್ದೆ ತಡ ಈಗ ಅಭಿಮಾನಿಗಳಿಗೆ ಯಶ್ ಸಿನಿಮಾ ಯಾವಾಗ ಬಿಡುಗಡೆ ಆಗುತ್ತೆ ಅನ್ನುವ ಕುತೂಹಲ ಮನೆ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಟ್ರೇಲರ್ ನೋಡಿದವ್ರಿಗೆ ಕಥೆ ಏನಾಗಿರ್ಬೋದಪ್ಪ ಅನ್ನೋ ಯೋಚನೆ ಶುರುವಾದಂತಿದೆ. ಆದ್ರೆ ಎಲ್ಲೂ ಕೂಡ ಚಿತ್ರತಂಡ ಕಥೆ ಬಗ್ಗೆ ಸ್ವಲ್ಪ ಕೂಡ ತುಟಿ ಬಿಚ್ಚಿರ್ಲಿಲ್ಲ. ಈ ಹಿಂದೆ ರಿಲೀಸಾಗಿದ್ದ ಕೆಲವೊಂದು ಧೂಳು ತುಂಬಿದ ಮೇಕಿಂಗ್ ಸ್ಟಿಲ್‍ಗಳನ್ನ ನೋಡಿದ್ರೆ ಒಂದೊಂದು ಕಥೆ ಕಣ್ಣ ಮುಂದೆ ಬಂದು ಹೋಗುತ್ತೆ.

ನಿನ್ನೆ ತಾನೆ ಬಿಡುಗಡೆಯಾದ ಟ್ರೇಲರನ್ನ ನೋಡಿ ಜನ್ರು ನಮ್ಮ ಕನ್ನಡ ಇಂಡಸ್ಟ್ರೀ ಬೇರೆ ಯಾವ್ದೋ ಲೆವೆಲ್‍ಗೆ ಹೋಗಿದೆ ಅಂತ ಮನಸ್ಸಲ್ಲೇ ಬೀಗ್ತಾ ಇದ್ದಾರೆ. ಅಷ್ಟೊಂದು ಜಬರ್ದಸ್ತ್ ಆಗಿದೆ ಕೆಜಿಎಫ್ ಟ್ರೇಲರ್. ಕಿಚ್ಚ ಸುದೀಪ್ ಕೂಡ ಚಿತ್ರತಂಡಕ್ಕೆ ಟ್ವೀಟ್ ಮಾಡೋ ಮೂಲಕ ಶುಭ ಹಾರೈಸಿದ್ದಾರೆ. ಇನ್ನೊಂದು ವಿಶೇಷ ಅಂದ್ರೆ ಟ್ರೇಲರ್ ಬಿಡುಗಡೆಯಾದ ಒಂದೇ ದಿನಕ್ಕೆ ಕೋಟ್ಯಾಂತರ ವೀವ್ಸ್‍ಗಳಾಗಿದೆ ಅನ್ನೋದು ಇಂಟ್ರೆಸ್ಟಿಂಗ್ ವಿಚಾರ.

ಇನ್ನೂ ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್‍ಗೆ ಶ್ರೀನಿಧಿ ಶೆಟ್ಟಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಹಾಗೇ ಕೆಜಿಎಫ್ ಚಿತ್ರದಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಕೂಡ ಸೊಂಟ ಬಳುಕಿಸಿ ಹೋಗಿದ್ದಾರೆ. ಯಶ್ ಜೊತೆ ತಮನ್ನಾ ಕೆಮಿಸ್ಟ್ರೀ ಹೇಗ್ ವರ್ಕ್ ಔಟ್ ಆಗಿದೆ ಅನ್ನೋದನ್ನ ನೋಡೋಕೆ ಯಶ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

ಟ್ರೇಲರ್ ಬಗ್ಗೆ ಮಾತಾಡಿದ ರಾಕಿಂಗ್ ಸ್ಟಾರ್ ಯಶ್ ಎರಡು ವರ್ಷದ ಕನಸು ಈಗ ನನಸಾಗ್ತಾ ಇದೆ. , ಈ ರೀತಿಯ ಸಿನೆಮಾ ಸಿಕ್ರೆ ಎರಡು ವರ್ಷ ಅಲ್ಲ ಹತ್ತು ವರ್ಷ ಆದ್ರೂ ಟೈಮ್ ಕೊಡ್ತೀನಿ ಅಂತ ತನ್ನ ಖುಷಿನಾ ಹಂಚಿಕೊಂಡ್ರು.ಇದು ಯಶ್ ಸಿನೆಮಾ ಅಲ್ಲ, ಇದೊಂದು ಕನಸು, ಕನ್ನಡ ಸಿನೆಮಾ ಲೋಕದ ಮುಂದಿನ ಹೆಜ್ಜೆ.

ನಿನ್ನೆ ಓರಿಯನ್ ಮಾಲ್ ನಲ್ಲಿ ಭರ್ಜರಿಯಾಗಿ ಬಿಡುಗಡೆಯಾದ ಟ್ರೇಲರನ್ನ ಮಂಡ್ಯದ ಗಂಡು ಅಂಬರೀಷ್ ಅವರ ಕೈಯಲ್ಲಿ ರಿಲೀಸ್ ಮಾಡಿಸಿದ್ರು. ಹಾಗೇ ಈ ಚಿತ್ರವನ್ನು `ಉಗ್ರಂ’ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದು, ಹೊಂಬಾಳೆ ಪ್ರೊಡಕ್ಷನ್‍ನಲ್ಲಿ ನಿರ್ಮಾಣವಾಗಿದೆ. ಇನ್ನೂ ಕೆಜಿಎಫ್ ಸಿನೆಮಾ ಬರೋಬ್ಬರಿ 5 ಭಾಷೆಗಳಲ್ಲಿ ರಿಲೀಸಾಗ್ತಿದೆ. ಎರಡು ವರ್ಷದ ನಂತ್ರ ಸ್ಯಾಂಡಲ್‍ವುಡಲ್ಲಿ ಮತ್ತೆ ಹವಾ ಸೃಷ್ಟಿಸೋದಕ್ಕೆ ಬರ್ತಾ ಇರೋ ಕೆಜಿಎಫ್ ಟೀಮ್‍ಗೆ ಸಿನಿ ರಸಿಕರು ಯಾವ ರೀತಿ ವೆಲ್ ಕಮ್ ಮಾಡ್ತಾರೆ ಅನ್ನೋದನ್ನ ಡಿಸೆಂಬರ್ 21ರ ತನಕ ಕಾದು ನೋಡ್ಬೇಕು.
ರಕ್ಷಿತಾ ಆಳ್ವ ಫಿಲ್ಮ್ ಬ್ಯೂರೋ ಕಹಳೆ ನ್ಯೂಸ್