ಬಂಟ್ವಾಳ ಶ್ರೀ ಕುಪ್ಪೆಟ್ಟು ಪಂಜುರ್ಲಿ ಮೂಲಸ್ಥಾನ ಕುಪ್ಪೆಟ್ಟು ಬರ್ಕೆ ಕರ್ಪೆ ಇದರ ಜೀರ್ಣೋದ್ಧಾರ, ಪ್ರತಿಷ್ಠಾ ಮಹೋತ್ಸವದ ಕಾರ್ಯಕ್ರಮದ ಲಾಂಛನ ಬಿಡುಗಡೆ – ಕಹಳೆ ನ್ಯೂಸ್
ಬಂಟ್ವಾಳ : ಬಂಟ್ವಾಳ ತಾಲೂಕಿನ ಶ್ರೀ ಕುಪ್ಪೆಟ್ಟು ಪಂಜುರ್ಲಿ ಮೂಲಸ್ಥಾನ ಕುಪ್ಪೆಟ್ಟು ಬರ್ಕೆ ಕರ್ಪೆ ಇದರ ಜೀರ್ಣೋದ್ಧಾರ, ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಕುಪ್ಪೆಟ್ಟು ಬರ್ಕೆ ಕಾರ್ಯಕ್ರಮದ ಲಾಂಛನ ಬಿಡುಗಡೆ ಕಾರ್ಯಕ್ರಮ ಕುಪ್ಪೆಟ್ಟು ಬರ್ಕೆ ಚಾವಡಿಯಲ್ಲಿ ನಡೆಯಿತು.
ಪ್ರತಿಷ್ಠಾ ಮಹೋತ್ಸವ ಅಧ್ಯಕ್ಷರಾದ ಭುವನೇಶ್ ಪಚ್ಚಿನಡ್ಕ ಲೋಗೋ ಅನಾವರಣಗೊಳಿಸಿದರು. ಈ ಸಮಯದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಭಾಕರ್ ಪ್ರಭು, ಕಾರ್ಯದರ್ಶಿ ನವೀನ್ ಹೊಸಹೊಕ್ಲು ಪ್ರತಿಷ್ಠಾ ಮಹೋತ್ಸವ ಸಮಿತಿ ಉಪಾಧ್ಯಕ್ಷರುಗಳಾದ ಕಿರಣ್ ಮಂಜಿಲ, ಜಯಪ್ರಕಾಶ್ ಜೆ ಎಸ್, ಸತೀಶ್ ಪೂಜಾರಿ ಅಲಕ್ಕೆ, ಹೊರೆಕಾಣಿಕೆ ಸಮಿತಿ ಸಂಚಾಲಕರಾದ ದೇವಪ್ಪ ಪೂಜಾರಿ ನೆಕ್ಕರೆಗುಳಿ, ಮಹಿಳಾ ಸಮಿತಿ ಸಂಚಾಲಕಿ ರಂಜಿನಿ ದಿವಾಕರ್, ಕುಪ್ಪೆಟ್ಟು ಬರ್ಕೆ ಮನೆತನದ ಉಮೇಶ್ ಪೂಜಾರಿ, ಆಡಳಿತ ಸಮಿತಿ ಕೋಶಾಧಿಕಾರಿ ಜಯ ಪೂಜಾರಿ ಉಪಸ್ಥಿತರಿದ್ದರು.
ಪ್ರತಿಷ್ಠಾ ಮಹೋತ್ಸವ ಪ್ರಧಾನ ಕಾರ್ಯದರ್ಶಿ ರತ್ನಾಕರ್ ಮದoಗೋಡಿ ಸ್ವಾಗತಿಸಿ,ಪ್ರಚಾರ ಸಮಿತಿ ಸಂಚಾಲಕರಾದ ದಿನೇಶ್ ಸುವರ್ಣ ರಾಯಿ ಲೋಗೋ ಬಿಡುಗಡೆಯ ಸಮಗ್ರ ಮಾಹಿತಿ ಹಾಗೂ ಮುಂದಿನ ಕಾರ್ಯ ವೈಖರಿಗಳ ಬಗ್ಗೆ ಮಾಹಿತಿ ನೀಡಿದರು. ಪ್ರತಿಷ್ಠಾ ಮಹೋತ್ಸವ ಸಮಿತಿ ಕೋಶಾಧಿಕಾರಿ ಪ್ರವೀಣ್ ಕುಪ್ಪೆಟ್ಟು ವಂದಿಸಿದರು.