Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

23ನೇ ರಾಜ್ಯ ಶಾರ್ಟ್ ಕೋರ್ಸ್ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್’ ಸ್ಪರ್ಧೆಯಲ್ಲಿ ಫಿಲೋಮಿನಾ ಪ ಪೂ ಕಾಲೇಜಿನ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ-ಕಹಳೆ  ನ್ಯೂಸ್

 

ಪ್ರಥಮ ವಿಜ್ಞಾನ ವಿಭಾಗದ ಅನ್ವಿತ್ ರೈ ಬರಿಕೆ 50ಮೀ ಫ್ರೀ ಸ್ಟೈಲ್ ಮತ್ತು 4್ಠ50ಮೀ ಫ್ರೀ ಸ್ಟೈಲ್ ರಿಲೇ ಯಲ್ಲಿ ಎರಡು ಬೆಳ್ಳಿ ಹಾಗೂ 50ಮೀ ಫ್ಲೈ, 100ಮೀ ಫ್ರೀ ಸ್ಟೈಲ್, 25ಮೀ ಫ್ರೀ ಸ್ಟೈಲ್ ಮತ್ತು 4್ಠ50ಮೀ ಮೆಡ್ಲೆ ರಿಲೇ ಯಲ್ಲಿ 4 ಕಂಚಿನ ಪದಕವನ್ನು, ದಿಗಂತ್ ವಿ ಎಸ್ ಮತ್ತು ಅರ್ ಅಮನ್ ರಾಜ್ ಇವರು 4್ಠ50ಮೀ ಫ್ರೀ ಸ್ಟೈಲ್ ರಿಲೇ ಯಲ್ಲಿ ಒಂದು ಬೆಳ್ಳಿ ಮತ್ತು 4್ಠ50ಮೀ ಮೆಡ್ಲೆ ರಿಲೇ ಯಲ್ಲಿ ಒಂದು ಕಂಚಿನ ಪದಕವನ್ನು ಪಡೆದುಕೊಂಡಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅನ್ವಿತ್ ರೈ ಬರಿಕೆ ಮತ್ತು ಅರ್ ಅಮನ್ ರಾಜ್ ಡಿಸೆಂಬರ್ 27ರಿಂದ 29 ರವರೆಗೆ ಸಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾ ಇದರ ಆಯೋಜನೆಯಲ್ಲಿ ವಿಜಯವಾಡದಲ್ಲಿ ನಡೆಯಲಿರುವ ಸೌತ್ ಜೋನ್ ಅಕ್ವೆಟಿಕ್ ಚಾಂಪಿಯನ್ ಶಿಪ್ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇವರುಗಳಿಗೆ ಪರ್ಲಡ್ಕದ ಬಾಲವನದ ಅಕ್ವೆಟಿಕ್ ಕ್ಲಬ್ ನ ಈಜು ತರಬೇತುದಾರರಾದ ಪಾರ್ಥ ವಾರಣಾಸಿ, ನಿರೂಪ ಜಿ ಆರ್, ದೀಕ್ಷಿತ್ ರಾವ್ ಮತ್ತು ರೋಹಿತ್ ಪ್ರಕಾಶ್ ರವರು ತರಬೇತಿ ನೀಡಿರುತ್ತಾರೆ.

ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಏಲಿಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.